ಬ್ರೇಕಿಂಗ್ ನ್ಯೂಸ್
14-10-21 10:35 pm Mangaluru Correspondent ಕರಾವಳಿ
ಮಂಗಳೂರು, ಅ.14: ಹಿಂದು ಸಂಘಟನೆ ಕಾರ್ಯಕರ್ತರ ನೈತಿಕ ಪೊಲೀಸ್ ಗಿರಿ ವಿಚಾರದ ಬಗ್ಗೆ ಪರ - ವಿರೋಧ ನಡುವೆ, ಮತ್ತೊಂದೆಡೆ ಮುಖ್ಯಮಂತ್ರಿ ಬೊಮ್ಮಾಯಿ ಸಮರ್ಥನೆ, ಅದಕ್ಕೆ ಕೇಳಿ ಬರುತ್ತಿರುವ ಆಕ್ರೋಶ, ಇದರ ಬೆನ್ನಲ್ಲೇ ವಿಶ್ವ ಹಿಂದು ಪರಿಷತ್, ಬಜರಂಗದಳದ ನಾಯಕರು ಮಂಗಳೂರಿನಲ್ಲಿ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೆಪದಲ್ಲಿ ಶಸ್ತ್ರಗಳನ್ನು ಹಂಚಿದ್ದು ವಿವಾದಕ್ಕೆ ಕಾರಣವಾಗಿದೆ.
ಆಯುಧ ಪೂಜೆ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡಿ, ಶಸ್ತ್ರಗಳಿಗೆ ಪೂಜೆ ನೆರವೇರಿಸಿದ್ದಾರೆ. ಬಜರಂಗದಳ ಮುಖಂಡ ರಘು ಸಕಲೇಶಪುರ ಮತ್ತು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ನೇತೃತ್ವದಲ್ಲಿ 150 ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕದ್ರಿಯ ವಿಹಿಂಪ ಕಚೇರಿಯಲ್ಲಿ ತ್ರಿಶೂಲ ನೆಪದಲ್ಲಿ ಹರಿತ ಕತ್ತಿಯನ್ನು ನೀಡಿದ್ದಾರೆ. ಅಲ್ಲದೆ, ಶಸ್ತ್ರ ಹಿಡಿಯಲು ಪ್ರೇರಣೆ ನೀಡುವ ರೀತಿ ಪ್ರತಿಜ್ಞೆ ಉಪದೇಶ ಮಾಡಿದ್ದಾರೆ. ಇದರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಿಎಂ ಸಮರ್ಥನೆ ಬೆನ್ನಲ್ಲೇ ಹಿಂದು ಸಂಘಟನೆ ನಾಯಕರು, ತಮ್ಮ ಕಾರ್ಯಕರ್ತರಿಗೆ ಶಸ್ತ್ರ ಹಂಚಿದ್ದಾರೆಂದು ಟೀಕಿಸಲಾಗಿದೆ.



ಒಂದು ಕಡೆ ಮತಾಂತರ ವಿರುದ್ಧ ಜಾಗೃತಿ, ಹೋರಾಟ ಕೈಗೆತ್ತಿಕೊಂಡಿರುವ ಹಿಂದು ಸಂಘಟನೆಗಳು ಇದೀಗ ಕಾರ್ಯಕರ್ತರ ಕೈಗೆ ಬಹಿರಂಗವಾಗಿಯೇ ಶಸ್ತ್ರಗಳನ್ನು ಕೊಟ್ಟು ಯಾವ ಸಂದೇಶ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆತ್ಮರಕ್ಷಣೆ ಮತ್ತು ಸ್ವರಕ್ಷಣೆಗಾಗಿ ಶಸ್ತ್ರ ಅಗತ್ಯ ಎನ್ನುವ ಸಮರ್ಥನೆ ನೀಡುತ್ತಿದ್ದರೂ, ಈಗಿನ ಸನ್ನಿವೇಶ ಮಾತ್ರ ಶಸ್ತ್ರಗಳ ಹಂಚಿಕೆಗೆ ಬೇರೆಯದೇ ಅರ್ಥವನ್ನು ನೀಡಿದೆ. ಹೀಗಾಗಿ ಹಿಂದು ಸಂಘಟನೆಗಳ ಈ ರೀತಿಯ ನಡೆ ಟೀಕೆಗೆ ಗುರಿಯಾಗಿದ್ದು ಬಿಜೆಪಿ ಸರಕಾರದ ಆಡಳಿತದಲ್ಲಿ ವಿವಾದಕ್ಕೆ ಕಾರಣವಾಗಿದೆ.
Mangalore Vhp and Bajarang dal members with Trishul goes viral after CM Bommai Statement on Moral Policing creating controversy.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm