ಬ್ರೇಕಿಂಗ್ ನ್ಯೂಸ್
23-09-21 08:49 pm Mangaluru Correspondent ಕರಾವಳಿ
ಮಂಗಳೂರು, ಸೆ.23: ನಗರದ ನೆಹರು ಮೈದಾನದ ಆವರಣದಲ್ಲಿರುವ ಕ್ಲಾಕ್ ಟವರ್ ವೃತ್ತದಿಂದ ಎ.ಬಿ.ಶೆಟ್ಟಿ ಸರ್ಕಲ್ ಮತ್ತು ಸ್ಟೇಟ್ ಬ್ಯಾಂಕ್ ಆಗಿ ರಾವ್ ಅಂಡ್ ರಾವ್ ವೃತ್ತದ ಮೂಲಕ ಸಾಗುವ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಮಾಡಲಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಈ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚುವುದನ್ನು ತಡೆಯುವ ಸಲುವಾಗಿ ಕಳೆದ ಆಗಸ್ಟ್ 14ರಂದು ಮಹಾನಗರ ಪಾಲಿಕೆಯಲ್ಲಿ ಚರ್ಚಿಸಿ, ಏಕಮುಖ ಸಂಚಾರ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ಪಾಲಿಕೆಯಲ್ಲಿ ಕೈಗೊಂಡಿರುವ ನಿರ್ಣಯವನ್ನು ಪೊಲೀಸ್ ಇಲಾಖೆ ಮೂಲಕ ಆಯುಕ್ತರು ಜಾರಿಗೊಳಿಸಿದ್ದಾರೆ.
ಸದ್ರಿ ವೃತ್ತಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಒಂದು ಭಾಗದಲ್ಲಿ ಪಾರ್ಕಿಂಗ್ ಅವಕಾಶ ನೀಡಲು ಚಿಂತನೆ ನಡೆದಿದೆ. ಏಕಮುಖ ಸಂಚಾರವನ್ನು ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಯಿಂದ ಫುಟ್ಪಾತ್ ಅಭಿವೃದ್ಧಿಗೊಳಿಸುವ ಕಾರ್ಯ ನಡೆದಿದೆ. ಈ ಭಾಗದಲ್ಲಿ ಒಂದೇ ಪ್ರಕಾರದಲ್ಲಿ ವಾಹನಗಳು ಸಂಚರಿಸುವುದರಿಂದ ಅಡೆತಡೆ ಇಲ್ಲದೇ ವಾಹನಗಳ ದಟ್ಟಣೆಗೆ ಕೊನೆ ಬೀಳಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಎಬಿ ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತದ ವರೆಗಿನ 250 ಮೀಟರ್ ಉದ್ದದ ರಸ್ತೆಯನ್ನೂ ಏಕಮುಖವಾಗಿಸಿ ಆದೇಶ ಮಾಡಲಾಗಿದೆ. ಈ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳನ್ನು ನಿಷೇಧ ಮಾಡಲಾಗಿದೆ. ಆಮೂಲಕ ಕ್ಲಾಕ್ ಟವರ್ ನಿಂದ ಎಬಿ ಶೆಟ್ಟಿ ಸರ್ಕಲ್, ಸ್ಟೇಟ್ ಬ್ಯಾಂಕ್, ರಾವ್ ಅಂಡ್ ರಾವ್ ಸರ್ಕಲ್ ಆನಂತರ ಲೇಡಿಗೋಶನ್ ಮೂಲಕ ಹಂಪನಕಟ್ಟೆಗೆ ಬರುವ ರಸ್ತೆಯನ್ನು ವರ್ತುಲ ರಸ್ತೆಯಾಗಿಸಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.
Four major roads in Mangalore City to be made one way. Mangaluru Smart City Ltd., (MSCL) has commenced preparatory works of widening footpaths and constructing shoulder drains to further its proposal to have a circular one-way traffic clockwise from Clock Tower-A.B. Shetty Circle-Hamilton Circle-Rao & Rao Circle-Cock Tower.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm