ಬ್ರೇಕಿಂಗ್ ನ್ಯೂಸ್
23-09-21 04:18 pm Mangaluru Correspondent ಕರಾವಳಿ
ಮಂಗಳೂರು, ಸೆ.23: ಮೈಸೂರಿನ ಯುವತಿಯೊಬ್ಬಳನ್ನು ಪ್ರೀತಿಸುವ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಂಡು ನಗ್ನಚಿತ್ರಗಳನ್ನು ತೆಗೆದು ಬ್ಲಾಕ್ಮೇಲ್ ಮಾಡಿದ ಪ್ರಕರಣ ಮಂಗಳೂರಿನಲ್ಲಿ ಸಂಚಲನ ಸೃಷ್ಟಿಸಿದ್ದರೆ, ಪೊಲೀಸರ ಕೊರಳನ್ನೇ ಸುತ್ತಿಕೊಂಡಿದೆ. ಪ್ರಕರಣದ ಬಗ್ಗೆ ರಾಜ್ಯ ಅಧಿವೇಶನದಲ್ಲಿ ಪ್ರಸ್ತಾಪಗೊಂಡಿದ್ದಲ್ಲದೆ, ಯುವತಿಯ ಬ್ಲಾಕ್ಮೇಲ್ ಮಾಡಿದ ಆರೋಪಿಯನ್ನು ಬಚಾವ್ ಮಾಡಲೆತ್ನಿಸಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಕೊಣಾಜೆ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
ಇದರ ಬೆನ್ನಲ್ಲೇ ಪ್ರಕರಣವನ್ನು ಸೀರಿಯಸ್ಸಾಗಿ ತೆಗೆದುಕೊಂಡಿರುವ ಮಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಲು ಬೆಂಗಳೂರಿಗೆ ತೆರಳಿದ್ದು, ಅಲ್ಲಿ ಅರೆಸ್ಟ್ ಮಾಡಿದ್ದಾರೆಂದು ತಿಳಿದುಬಂದಿದೆ. ನಂಜನಗೂಡು ಮೂಲದ ಯುವತಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸುವ ನೆಪದಲ್ಲಿ ಪರಿಚಯ ಮಾಡಿಕೊಂಡಿದ್ದ ಮೈಸೂರಿನಲ್ಲಿ ಹೊಟೇಲ್ ಒಂದರಲ್ಲಿ ಕ್ಯಾಶಿಯರ್ ಆಗಿ ಕೆಲಸಕ್ಕಿದ್ದ ಮುಡಿಪು ಮೂಲದ ನಿವಾಸಿ ಮಹಮ್ಮದ್ ಅಜ್ವಿನ್, ಬಳಿಕ ಲೈಂಗಿಕವಾಗಿ ಬಳಸಿಕೊಂಡಿದ್ದ. ಅಲ್ಲದೆ, ತನ್ನ ಹೆಸರನ್ನು ಹಿಂದುವೆಂದು ಹೇಳಿಕೊಂಡು ಮದುವೆಯಾಗುವುದಾಗಿಯೂ ನಂಬಿಸಿದ್ದ. ಪ್ರತ್ಯೇಕ ವ್ಯವಹಾರ ಆರಂಭಿಸಬೇಕೆಂದು ಯುವತಿಯನ್ನು ಪುಸಲಾಯಿಸಿ, ಆಕೆಯ ಬಳಿಯಿಂದಲೇ ಹಣ ಕೇಳಿದ್ದು, ಸುಮಾರು 30 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದಿದ್ದಾನೆ.
ನಗ್ನ ಚಿತ್ರ ತೆಗೆದಿಟ್ಟು ಶೋಷಿಸಿದ ಹರಾಮಿ !
ಈ ಮಧ್ಯೆ ತಾವು ಏಕಾಂತದಲ್ಲಿದ್ದಾಗ ತೆಗೆದುಕೊಂಡಿದ್ದ ಫೋಟೋ ಮತ್ತು ಆಕೆಯ ನಗ್ನ ಚಿತ್ರಗಳನ್ನು ಮುಂದಿಟ್ಟು ಬ್ಲಾಕ್ಮೇಲ್ ಆರಂಭಿಸಿದ್ದಾನೆ. ಆದರೆ, ಮುಗ್ಧ ಹುಡುಗಿ ಇದರಿಂದ ಹೊರಬರಲು ಸಾಧ್ಯವಾಗದೇ ತೀವ್ರ ನೊಂದಿದ್ದಳು. ತಾಯಿ ಮತ್ತು ತನಗೆ ಸೇರಿದ್ದ ಮನೆಯಲ್ಲಿದ್ದ ಚಿನ್ನವನ್ನೆಲ್ಲ ಅಡವಿಟ್ಟು ಆತನಿಗೆ ಹಣ ಕೊಟ್ಟಿದ್ದಳು. ಪ್ರತಿ ಬಾರಿಯೂ ಚಿನ್ನವನ್ನು ಅಡವಿಟ್ಟು ಹಣ ತೆಗೆದು ಆತನ ಅಕೌಂಟಿಗೆ ಹಾಕುತ್ತಿದ್ದಳು. ಆದರೆ, ಆರು ತಿಂಗಳ ಹಿಂದೆ ಮಹಮ್ಮದ್ ಅಜ್ವಿನ್ ಬೇರೊಬ್ಬ ಮುಸ್ಲಿಂ ವ್ಯಕ್ತಿಯ ಬ್ಯಾಂಕ್ ಖಾತೆಯ ನಂಬರ್ ಕೊಟ್ಟಿದ್ದ. ಈ ಬಗ್ಗೆ ಕೇಳಿದಾಗ, ಅದು ನನ್ನ ಕ್ಲೋಸ್ ಫ್ರೆಂಡ್, ಆತನ ಜೊತೆಗೆ ವ್ಯವಹಾರ ಪಾಲುದಾರಿಕೆಗಾಗಿ ಹಣ ಬೇಕಾಗಿದೆ ಎಂದು ನಂಬಿಸಿದ್ದ. ಆ ವೇಳೆ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿದ ನಂತರ ಮಹಮ್ಮದ್ ಬಗ್ಗೆ ಯುವತಿಗೆ ಸಂಶಯ ಬಂದಿದೆ. ಈತ ಹಿಂದುವಲ್ಲ, ಮುಸ್ಲಿಂ ಅನ್ನೋದು ಗೊತ್ತಾಗಿದ್ದಲ್ಲದೆ, ನಿಧಾನಕ್ಕೆ ಮಹಮ್ಮದ್ ಅಜ್ವಿನ್ ಬಗ್ಗೆ ವಿವರ ಕಲೆಹಾಕಿದ್ದಾಳೆ. ಅಷ್ಟರಲ್ಲಿ ಈತನಿಗೆ ಊರಿನಲ್ಲಿ ಮದುವೆಯೂ ಆಗಿದೆ ಅನ್ನೋದು ಗೊತ್ತಾಗಿತ್ತು. ಹೇಗೂ ಮೋಸ ಹೋಗಿದ್ದೇನೆ, ಹಣವನ್ನಾದರೂ ಕೊಡು ಎಂದು ಅಂಗಲಾಚಿದ್ದಾಳೆ.
ಹಣ ಕೇಳಿಕೊಂಡು ಬಂದಿದ್ದ ಯುವತಿಗೆ ಹಲ್ಲೆ
ಇತ್ತೀಚೆಗೆ ತಾಯಿಗೂ ಹುಷಾರಿರಲಿಲ್ಲ. ಸಣ್ಣ ವಯಸ್ಸಲ್ಲೇ ಅಣ್ಣನೂ ತೀರಿಕೊಂಡಿದ್ದ. ತಂದೆಯೂ ಅನಾರೋಗ್ಯದಿಂದ ಮನೆಯಲ್ಲೇ ಉಳಿದುಬಿಟ್ಟಿದ್ದರು. ಹೀಗಾಗಿ ಒಬ್ಬಳೇ ದುಡಿದು ಕುಟುಂಬ ಸಾಕಬೇಕಾಗಿತ್ತು. ಹುಡುಗಿ ಮೈಸೂರಿನಲ್ಲಿ ಸಾಫ್ಟ್ ವೇರ್ ಸಂಬಂಧಿತ ಆನ್ಲೈನ್ ಕೆಲಸ ಮಾಡುತ್ತಿದ್ದಳು. ಇಂಥ ಹೊತ್ತಲ್ಲೇ ಮದುವೆಯಾಗುತ್ತೇನೆಂದು ನಂಬಿಸಿದ್ದ ಹುಡುಗ ಕೈಕೊಟ್ಟಿದ್ದಲ್ಲದೆ, ವಿಡಿಯೋ ಮುಂದಿಟ್ಟು ಬ್ಲಾಕ್ಮೇಲ್ ಆರಂಭಿಸಿದ್ದ. ಹಣವನ್ನು ಮರಳಿಸು, ಇಲ್ಲದಿದ್ದರೆ ಪೊಲೀಸ್ ದೂರು ಕೊಡುತ್ತೇನೆಂದು ಯುವತಿ ಇತ್ತೀಚೆಗೆ ಹೆದರಿಸಿದ್ದಳು. ಅದಕ್ಕಾಗಿ, ಮೊನ್ನೆ ಸೆ.21ರಂದು ಮಹಮ್ಮದ್ ಅಜ್ವಿನ್ ತನ್ನ ಮನೆ ಮುಡಿಪು ಬಳಿಗೆ ಬರಹೇಳಿದ್ದ. ಮುಡಿಪು ಬಳಿಯ ಕಂಬತೋಟದಲ್ಲಿರುವ ಆತನ ಮನೆಯನ್ನು ಹುಡುಕಿ ಬಂದಿದ್ದ ಆಕೆಗೆ ಶಾಕ್ ಆಗಿತ್ತು. ಮನೆಯಲ್ಲಿ ಮಹಮ್ಮದ್ ಅಜ್ವಿನ್ ಬಗ್ಗೆ ಕೇಳಿದರೆ, ಆತ ಇರಲಿಲ್ಲ. ಬದಲಿಗೆ ತಂಗಿಯಂದಿರು ಮತ್ತು ಮನೆಯ ಇತರ ಸದಸ್ಯರಿದ್ದು ಮಹಮ್ಮದ್ ಅಜ್ವಿನ್ ಬಗ್ಗೆ ಕೇಳುತ್ತಲೇ ಅವರೆಲ್ಲ ಸೇರಿ ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ. ಮುಖ, ಮೂತಿ ನೋಡದೆ ಹೊಡೆದು ಕಳಿಸಿದ್ದಾರೆ.
ಈ ಬಗ್ಗೆ ಯುವತಿ ಇದಕ್ಕೂ ಮೊದಲೇ ಮೈಸೂರಿನಲ್ಲಿ ತನ್ನ ಆಪ್ತರ ಜೊತೆಗೆ ಹೇಳಿದ್ದು, ತನ್ನ ಹಣವನ್ನು ಮರಳಿಸಿ ಕೊಡುವಂತೆ ಏನಾದ್ರೂ ಉಪಾಯ ನೀಡುವಂತೆ ಕೇಳಿಕೊಂಡಿದ್ದಳು. ಇದರಿಂದ ಆಕೆಯ ಗೆಳತಿಯೊಬ್ಬರು ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಸುಳ್ಯ ಮೂಲದ ಮಹಿಳೆಯೊಬ್ಬರಲ್ಲಿ ತಿಳಿಸಿದ್ದರು. ತನ್ನ ಹಣವನ್ನು ಪಡೆದು ಮೋಸ ಆಗಿರುವ ಬಗ್ಗೆ ಯುವತಿ ಹೇಳಿದ್ದು, ಲೈಂಗಿಕ ಶೋಷಣೆ ಬಗ್ಗೆ ಮಹಿಳೆಯ ಬಳಿ ತಿಳಿಸಿರಲಿಲ್ಲ. ಆನಂತರ, ಪೊಲೀಸ್ ದೂರು ಕೊಡುವಂತೆ ಸಲಹೆಯನ್ನೂ ಮಹಿಳೆ ನೀಡಿದ್ದರು. ಆನಂತರ, ವಿಷಯ ಅಲ್ಲಿಯೇ ಬಾಕಿಯಾಗಿತ್ತು. ಮೊನ್ನೆ, ಮುಡಿಪು ಮನೆಗೆ ಬಂದು ಅಲ್ಲಿನವರು ಹಲ್ಲೆ ನಡೆಸಿದ್ದರಿಂದ ನೊಂದ ಯುವತಿ ತನ್ನ ಮೈಸೂರಿನ ಆಪ್ತರಿಗೆ ವಿಷಯ ತಿಳಿಸಿದ್ದಳು. ಆನಂತರ, ಬೆಂಗಳೂರಿನ ಮಹಿಳೆಗೆ ಯುವತಿ ವಿಷಯ ತಿಳಿದಿದ್ದು ನೇರವಾಗಿ ಮಂಗಳೂರಿನ ಸಂಘಟನೆ ಸದಸ್ಯರಿಗೆ ಹೇಳಿದ್ದರು. ಸಂಘಟನೆ ಯುವಕರು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಬಗ್ಗೆ ಯುವತಿ ಇದಕ್ಕೂ ಮೊದಲೇ ಮೈಸೂರಿನಲ್ಲಿ ತನ್ನ ಆಪ್ತರ ಜೊತೆಗೆ ಹೇಳಿದ್ದು, ತನ್ನ ಹಣವನ್ನು ಮರಳಿಸಿ ಕೊಡುವಂತೆ ಏನಾದ್ರೂ ಉಪಾಯ ಹೇಳಿಕೊಡುವಂತೆ ಕೇಳಿಕೊಂಡಿದ್ದಳು. ಇದರಿಂದ ಆಕೆಯ ಗೆಳತಿಯೊಬ್ಬರು ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಸುಳ್ಯ ಮೂಲದ ಮಹಿಳೆಯೊಬ್ಬರಲ್ಲಿ ತಿಳಿಸಿದ್ದರು. ತನ್ನ ಹಣವನ್ನು ಪಡೆದು ಮೋಸ ಆಗಿರುವ ಬಗ್ಗೆ ಯುವತಿ ಹೇಳಿದ್ದು, ಲೈಂಗಿಕ ಶೋಷಣೆ ಬಗ್ಗೆ ಮಹಿಳೆಯ ಬಳಿ ತಿಳಿಸಿರಲಿಲ್ಲ. ಆನಂತರ, ಪೊಲೀಸ್ ದೂರು ಕೊಡುವಂತೆ ಸಲಹೆಯನ್ನೂ ಮಹಿಳೆ ನೀಡಿದ್ದರು. ಆನಂತರ, ವಿಷಯ ಅಲ್ಲಿಯೇ ಬಾಕಿಯಾಗಿತ್ತು. ಮೊನ್ನೆ, ಮುಡಿಪು ಮನೆಗೆ ಬಂದು ಅಲ್ಲಿನವರು ಹಲ್ಲೆ ನಡೆಸಿದ್ದರಿಂದ ನೊಂದ ಯುವತಿ ತನ್ನ ಮೈಸೂರಿನ ಆಪ್ತರಿಗೆ ವಿಷಯ ತಿಳಿಸಿದ್ದಳು. ಆನಂತರ, ಬೆಂಗಳೂರಿನ ಮಹಿಳೆ ಯುವತಿ ವಿಷಯ ತಿಳಿದು ನೇರವಾಗಿ ಮಂಗಳೂರಿನ ಸಂಘಟನೆ ಸದಸ್ಯರಿಗೆ ತಿಳಿಹೇಳಿದ್ದರು.
ಠಾಣೆಗೆ ಕರೆದೊಯ್ದು ಬುದ್ಧಿಹೇಳಿ ಕಳಿಸಿಕೊಟ್ಟ ಪೊಲೀಸರು
ಆನಂತರ, ಕೊಣಾಜೆ ಪೊಲೀಸರು ಬಂದು ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಆದರೆ, ಎರಡು ಗಂಟೆ ಕಾಲ ಠಾಣೆಯಲ್ಲಿ ಕೂರಿಸಿದರೂ, ಪ್ರಕರಣ ದಾಖಲಿಸಲು ಮುಂದಾಗಲಿಲ್ಲ. ಆಕೆಯನ್ನು ಸಮಾಧಾನ ಪಡಿಸಿ, ಲೈಂಗಿಕವಾಗಿ ಶೋಷಣೆ ಆಗಿದ್ದು ಮತ್ತು ಈ ಒಟ್ಟು ಕೃತ್ಯ ಮೈಸೂರಿನಲ್ಲಿ ನಡೆದಿದ್ದರಿಂದ ನೀನು ಅಲ್ಲಿಯೇ ಹೋಗಿ ಕೇಸು ದಾಖಲಿಸು ಎಂದು ಪೊಲೀಸರು ಆಕೆಯನ್ನು ಮನವೊಲಿಸಿದ್ದಾರೆ. ಪೊಲೀಸರ ಮಾತಿಗೆ, ಆಕೆಯೂ ಒಪ್ಪಿದ್ದು, ಮೈಸೂರಿಗೆ ತೆರಳಿ ಕೇಸ್ ಕೊಡುವುದಾಗಿ ಹೇಳಿದ್ದಳು. ಆದರೆ, ಕೊಣಾಜೆಯಲ್ಲಿ ಯುವತಿಯ ಮೇಲೆ ಹಲ್ಲೆ ಆಗಿದ್ದರೂ, ಅದನ್ನು ಮುಚ್ಚಿಟ್ಟು ಕಳಿಸಿದ್ದಾರೆ. ಆನಂತರ, ಪೊಲೀಸರು ತಮ್ಮದೇ ಜೀಪಿನಲ್ಲಿ ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದಿದ್ದಲ್ಲದೆ, ಯುವತಿಯನ್ನು ಮೈಸೂರಿಗೆ ತೆರಳುವ ಬಸ್ಸಿನ ಟಿಕೆಟ್ ತೆಗೆದು ಹತ್ತಿಸಿದ್ದಾರೆ. ಪೊಲೀಸರು ಈ ರೀತಿ ವರ್ತಿಸಲು ಮಹಮ್ಮದ್ ಅಜ್ವಿನ್ ಕಡೆಯವರ ಒತ್ತಡ ಕೆಲಸ ಮಾಡಿತ್ತು ಅನ್ನೋ ಆರೋಪ ಕೇಳಿಬಂದಿದೆ.
ಬಸ್ ಹೊರಡೋ ವರೆಗೂ ನಿಂತಿದ್ದ ಪೊಲೀಸರು
ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತಿಸಿದ್ದಲ್ಲದೆ, ಕಂಡೆಕ್ಟರ್ ಬಳಿ ಹುಡುಗಿಯನ್ನು ನೇರವಾಗಿ ಮೈಸೂರಿಗೆ ತಲುಪಿಸುವಂತೆ ಪೊಲೀಸರು ಸೂಚನೆ ನೀಡಿದ್ದರು. ಹುಡುಗಿ ತುಂಬ ಡಿಪ್ರೆಶನ್ ಆಗಿದ್ದಾಳೆ, ಮೈಸೂರು ತಲುಪಿದ ಬಳಿಕ ನಮಗೆ ಫೋನ್ ಮಾಡಿ ತಿಳಿಸಬೇಕೆಂದು ಬಸ್ ನಿರ್ವಾಹಕನಿಗೆ ಪೊಲೀಸರು ಸೂಚಿಸಿದ್ದಾರೆ. ಆದರೆ, ಪೊಲೀಸರು ಇವೆಲ್ಲ ಮಾಡಿದ್ದನ್ನು ಹಿಂದು ಸಂಘಟನೆಯ ಹುಡುಗರು ದೂರದಲ್ಲೇ ನಿಂತು ಗಮನಿಸುತ್ತಿದ್ದರು. ಅದಲ್ಲದೆ, ಹುಡುಗಿಯ ಜೊತೆ ಬೆಂಗಳೂರಿನಲ್ಲಿರುವ ಮಹಿಳೆ ಮತ್ತು ಮೈಸೂರಿನ ಹಿಂದು ಸಂಘಟನೆ ಸದಸ್ಯರು ಸಂಪರ್ಕದಲ್ಲಿದ್ದರು. ಬಸ್ ಹೋಗುವ ವರೆಗೂ ಜೀಪಿನಲ್ಲಿ ಬಂದಿದ್ದ ಪೊಲೀಸರು 45 ನಿಮಿಷ ಕಾದು ಕುಳಿತಿದ್ದನ್ನೂ ಅಲ್ಲಿಯೇ ನಿಂತಿದ್ದ ಹುಡುಗರು ಗಮನಿಸಿದ್ದರು. ಆದರೆ, ಬಸ್ ಮಂಗಳೂರಿನಿಂದ ತೆರಳಿದ್ದರೆ, ಅರ್ಧ ದಾರಿಯಲ್ಲೇ ಯುವತಿಯನ್ನು ಇಳಿಯುವಂತೆ ಸೂಚಿಸಿದ ಸಂಘಟನೆ ಸದಸ್ಯರು, ಕಮಿಷನರ್ ಕಚೇರಿಗೆ ಕರೆದೊಯ್ದಿದ್ದಾರೆ. ಕಮಿಷನರ್ ಕಚೇರಿಯಲ್ಲಿ ಇಲ್ಲದ ಕಾರಣ ಹುಡುಗಿಯನ್ನು ಡಿಸಿಪಿ ಬಳಿಗೊಯ್ದು ನ್ಯಾಯ ಕೇಳಿದ್ದಾರೆ.
ಕೊಣಾಜೆಯಲ್ಲಿ ಆಗಿರುವ ಘಟನೆ ಬಗ್ಗೆ ತಿಳಿಸಿದ್ದಲ್ಲದೆ, ಆರೋಪಿಯ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರಿಂದ ಪೊಲೀಸ್ ಅಧಿಕಾರಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಆರೋಪಿ ವಿರುದ್ಧ ಲೈಂಗಿಕ ಕಿರುಕುಳ, ರೇಪ್, ಶೋಷಣೆ ಮತ್ತು ಮೋಸ ಮಾಡಿರುವ ವಿಚಾರದಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯ ಪತ್ತೆಗೆ ವಿಶೇಷ ತಂಡವನ್ನೂ ರಚಿಸಿದ್ದಾರೆ. ಇದೇ ವೇಳೆ, ಪೊಲೀಸ್ ಕಮಿಷನರ್ ಅವರಿಗೆ ಈ ಬಗ್ಗೆ ಮೈಸೂರಿನ ಸಂಸದ ಪ್ರತಾಪಸಿಂಹ ಕರೆ ಮಾಡಿದ್ದು, ಕೇಸು ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ಬುಧವಾರ ಸಂಜೆ ವಿಧಾನ ಪರಿಷತ್ತಿನಲ್ಲಿ ತೇಜಸ್ವಿನಿ ಗೌಡ ಕೊಣಾಜೆ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆ ಮಾಡಿದ್ದು, ಮಂಗಳೂರು ಪೊಲೀಸರ ಮೇಲೆ ಒತ್ತಡ ಹೆಚ್ಚಿಸಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳೂರು ಕಮಿಷನರ್ ಬಳಿ ಪ್ರಕರಣದ ಬಗ್ಗೆ ಮಾಹಿತಿ ಕೇಳಿದ್ದಾರೆ.
ಈ ಬಗ್ಗೆ ಮಂಗಳೂರು ಡಿಸಿಪಿ ಹರಿರಾಮ್ ಶಂಕರ್ ಬಳಿ ಕೇಳಿದಾಗ, ಪೊಲೀಸ್ ತಂಡ ಬೆಂಗಳೂರಿಗೆ ತೆರಳಿದ್ದು ಆರೋಪಿಯನ್ನು ಬಂಧಿಸಿ ಕರೆತರಲಿದ್ದಾರೆ. ಯುವತಿಯ ಮೇಲೆ ಆಗಿರುವ ರೇಪ್, ಶೋಷಣೆ, ಇನ್ನಿತರ ಕೃತ್ಯಗಳು ಮೈಸೂರಿನಲ್ಲಿ ಆಗಿರುವುದರಿಂದ ನಾವು ಕೇಸ್ ಮಾಡಿ, ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ಮೈಸೂರಿಗೆ ವರ್ಗಾವಣೆ ಮಾಡುತ್ತೇವೆ. ಮಹಮ್ಮದ್ ಅಜ್ವಿನ್ ಗೆ ಈಗಾಗ್ಲೇ ಎರಡು ಮದುವೆಯಾಗಿರುವ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
Mangalore Muslim Man cheats Hindu girl of marriage later blackmails her of Nude Video accused arrested in Bangalore. He has also cheated her by taking 36 lakhs of cash. The accused hails from Mudipu, Konaje. The girl is said to be from Mysuru.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm