ಬ್ರೇಕಿಂಗ್ ನ್ಯೂಸ್
22-09-21 10:54 pm Mangaluru Correspondent ಕರಾವಳಿ
ಮಂಗಳೂರು, ಸೆ.22: ನಗರದ ಕ್ಲಾಕ್ ಟವರ್ ಹೊಸತಾಗಿ ನಿರ್ಮಾಣಗೊಂಡು ಸ್ಮಾರ್ಟ್ ಸಿಟಿಯ ಹೆಗ್ಗುರುತಾಗಿ ಶೋಭಿಸಿದ್ದು ಹಳೆ ವಿಚಾರ. ಗೋಪುರಕ್ಕೆ ಹೊಸ ಕಳೆ ಬಂದು ಎರಡು ವರ್ಷಗಳೇ ಆಗುತ್ತಾ ಬಂತು. ಆದರೆ, ಮಂಗಳೂರಿನಲ್ಲಿ ಕ್ಲಾಕ್ ಟವರ್ ಫೋಟೋ ಇಂದು ವೈರಲ್ ಆಗಿದೆ. ವಾಟ್ಸಪ್ ಜಾಲತಾಣದಲ್ಲಿ ಕ್ಲಾಕ್ ಟವರ್ ಫೋಟೋ ಹಾಕಿ, ಜನರು ಮುಸಿ ಮುಸಿ ನಗುತ್ತಿದ್ದಾರೆ.
ಹೌದು.. ಒಂದು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಕ್ಲಾಕ್ ಟವರ್ ಎದ್ದು ನಿಂತ ಎರಡು ವರ್ಷದ ಬಳಿಕ ಅದರ ಫೋಟೋ ವೈರಲ್ ಆಗಿದ್ದಕ್ಕೆ ಕಾರಣ ಬೇರೆಯೇ ಇತ್ತು. ನೆಹರು ಮೈದಾನದ ಬಳಿ ರಸ್ತೆ ಬದಿ ಮಲಗುವ ಭಿಕ್ಷುಕನೊಬ್ಬ ಕ್ಲಾಕ್ ಟವರ್ ಬುಡದಲ್ಲಿರುವ ಕಾರಂಜಿ ನೀರಿನಲ್ಲಿ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ. ಬೆಳ್ಳಗ್ಗೆ 9 ಗಂಟೆ ಸುಮಾರಿಗೆ ಅತ್ತ ಸೂರ್ಯನ ಬಿಸಿಲೇರುತ್ತಿದ್ದಂತೆ, ವೃದ್ಧ ಭಿಕ್ಷುಕ ಅಲ್ಲಿದ್ದ ನೀರಿನಲ್ಲಿ ಮುಳುಗಿ ತನ್ನಷ್ಟಕ್ಕೆ ಸ್ನಾನ ಮಾಡಿದ್ದ ಫೋಟೋವನ್ನು ಯಾರೋ ತೆಗೆದು ವಾಟ್ಸಪ್ ನಲ್ಲಿ ಹಾಕಿದ್ದರು. ಇದೇ ಫೋಟೋ ವೈರಲ್ ಆಗಿದ್ದು ಜನರ ಕುಹಕಕ್ಕೆ ಕಾರಣವಾಗಿತ್ತು.
ಕ್ಲಾಕ್ ಟವರ್ ಹಿಂದಿನ ಕಾಲದಲ್ಲಿ ಸಮಯ ತೋರಿಸುವುದಕ್ಕಾಗಿ ಜನರಿಗೆ ಅಗತ್ಯವಾಗಿತ್ತು. ಅದೇ ಕಾರಣದಿಂದ ಬ್ರಿಟಿಷರು ದೊಡ್ಡ ಗಡಿಯಾರವನ್ನು ನಿಲ್ಲಿಸಿ, ನಗರದ ಮಧ್ಯೆ ಕ್ಲಾಕ್ ಟವರನ್ನು ನಿರ್ಮಿಸಿದ್ದರು. ಆನಂತರ, ಈಚೆಗೆ ಇಪ್ಪತ್ತು ವರ್ಷಗಳ ಹಿಂದೆ ನಗರದ ವಾಹನ ದಟ್ಟಣೆಯ ಕಾರಣ ಮುಂದಿಟ್ಟು ಕ್ಲಾಕ್ ಟವರನ್ನೇ ತೆಗೆದು ಹಾಕಲಾಗಿತ್ತು. ಆದರೆ, ಐದು ವರ್ಷಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸಾವಿರ ಕೋಟಿ ರೂಪಾಯಿ ಅನುದಾನ ಬರುವುದು ಗೊತ್ತಾಗುತ್ತಲೇ ಮಂಗಳೂರಿನ ರಾಜಕಾರಣಿಗಳು ಕ್ಲಾಕ್ ಟವರನ್ನು ಮತ್ತೆ ರೂಪಿಸುವ ಯೋಜನೆ ಹಾಕಿದ್ದರು.
ಮಂಗಳೂರು ಪಾಲಿಕೆಯಲ್ಲಿ ಮೇಯರ್ ಕವಿತಾ ಸನಿಲ್ ಇದ್ದಾಗ ತುರ್ತಾಗಿ ಯೋಜನೆ ತಯಾರಿಸಿ, ಕ್ಲಾಕ್ ಟವರ್ ಕಟ್ಟಡ ರಚನೆಗೆ ಕಾಮಗಾರಿ ನಡೆಸಲಾಗಿತ್ತು. ಹಲವರ ವಿರೋಧದ ನಡುವೆಯೇ ಕೋಟಿಗೂ ಹೆಚ್ಚು ಮೊತ್ತವನ್ನು ವ್ಯಯಿಸಿ, ಮಂಗಳೂರಿನ ಹೆಗ್ಗುರುತು ಎನ್ನುವ ರೀತಿ ಬೃಹತ್ ಗೋಪುರವನ್ನೇ ರಚಿಸಲಾಗಿತ್ತು. ಆದರೆ, ಇದೀಗ ಅದೇ ಕ್ಲಾಕ್ ಟವರ್ ಗೋಪುರದ ನಿರ್ವಹಣೆ ಇಲ್ಲದ ಕಾರಣವೋ ಏನೋ, ಭಿಕ್ಷುಕರು ಅಲ್ಲಿಯೇ ಮಿಂದು ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ಒದಗಿಸಿದ್ದಾರೆ.
ವಿಶೇಷ ದಿನಗಳಲ್ಲಿ ಮಾತ್ರ ಕ್ಲಾಕ್ ಟವರ್ ಬುಡದ ಕಾರಂಜಿಯಲ್ಲಿ ನೀರು ಚಿಮ್ಮುತ್ತದೆ. ಉಳಿದಂತೆ, ವೀಕೆಂಡ್ ದಿನಗಳಲ್ಲಿ ಮಾತ್ರ ನೀರನ್ನು ಬಿಡಲಾಗುತ್ತದೆ. ಹಗಲಲ್ಲಿ ಕಾರಂಜಿ ಇಲ್ಲದಿದ್ದರೂ, ಸುತ್ತಲು ನೀರು ನಿಂತಿರುತ್ತದೆ. ಕ್ಲಾಕ್ ಟವರ್ ಗೋಪುರ ನಗರಕ್ಕೆ ಶೋಭೆ ಹೆಚ್ಚಿಸಿದ್ದರೂ, ಅದರ ನಿರ್ವಹಣೆ ಇಲ್ಲದ ಕಾರಣವೋ ಏನೋ, ಭಿಕ್ಷುಕ ಸ್ನಾನ ಮಾಡಿದ್ದಾನೆ. ಅದೇ ಫೋಟೋ ಮುಂದಿಟ್ಟು ಜನರು ತಮಾಷೆ ಮಾಡುವಂತಾಗಿದೆ. ಇದಕ್ಕಾದ್ರೂ ಉಪಯೋಗ ಬಂತಲ್ಲಾ ಎಂದು ಜನರು ತಮಾಷೆ ಮಾಡಿ ಭಿಕ್ಷುಕನ ಸ್ನಾನದ ಫೋಟೋವನ್ನು ವೈರಲ್ ಮಾಡಿದ್ದಾರೆ.
Mangalore Man found having bath inside Clock tower pool at Hampankatta picture goes viral on social media. Clock tower was constructed spending almost one crore in the heart of the city.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm