ಬ್ರೇಕಿಂಗ್ ನ್ಯೂಸ್
21-09-21 01:16 pm Mangaluru Correspondent ಕರಾವಳಿ
ಮಂಗಳೂರು, ಸೆ.21: ಫ್ಲಾಟ್ ಲೀಸಿಗೆ ಕೊಡುವುದಾಗಿ ನಕಲಿ ಡಾಕ್ಯುಮೆಂಟ್ ತೋರಿಸಿ, ಮಹಿಳೆಯೊಬ್ಬರಿಂದ 5 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಮೂಲದ ಮಹಿಳೆಯಾಗಿದ್ದು, ನಗರದ ಮೆಡಿಕಲ್ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 2020ರ ಜೂನ್ ತಿಂಗಳಲ್ಲಿ ಇವರು ಬಾಡಿಗೆ ಮನೆ ಪಡೆಯಲು ಹುಡುಕಾಟದಲ್ಲಿದ್ದರು. ಈ ವೇಳೆ, ಕದ್ರಿ ಪರಿಸರದ ನಿವಾಸಿ ಪ್ರದೀಪ್ ಎಂಬ ಬ್ರೋಕರ್ ಪರಿಚಯ ಆಗಿದ್ದು, ಕೆ.ಎಸ್.ರಾವ್ ರಸ್ತೆಯ ಅಪಾರ್ಟ್ಮೆಂಟ್ ಒಂದರಲ್ಲಿ ಗ್ರೌಂಡ್ ಫ್ಲೋರಿನಲ್ಲಿ ಮನೆಯೊಂದು ಲೀಸಿಗೆ ಇರುವುದಾಗಿ ತಿಳಿಸಿದ್ದಾರೆ.

ಮನೆಯನ್ನು ನೋಡಿದ ಮಹಿಳೆ, ಇಷ್ಟ ಆಗಿದ್ದರಿಂದ ಅದನ್ನು 5 ಲಕ್ಷ ರೂಪಾಯಿಗೆ ಲೀಸಿಗೆ ಪಡೆಯಲು ಮುಂದಾಗಿದ್ದರು. ಅದರಂತೆ, ಬ್ರೋಕರ್ ಪ್ರದೀಪ್, ಮನೆಯ ಮಾಲೀಕನೆಂದು ಮೊಹಮ್ಮದ್ ಅಶ್ರಫ್ ಎಂಬವರನ್ನು ತೋರಿಸಿದ್ದರು. ಇವರು ಮನೆ ಮಾಲೀಕರಾಗಿದ್ದು, 5 ಲಕ್ಷ ರೂಪಾಯಿ ಇವರ ಹೆಸರಲ್ಲಿ ಡಿಪಾಸಿಟ್ ಮಾಡುವಂತೆ ಹೇಳಿದ್ದರು. ಮಹಿಳೆ ಬಳಿಕ ಹಣ ಒಟ್ಟುಗೂಡಿಸಿ, ಮಹಮ್ಮದ್ ಅಶ್ರಫ್ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಆನಂತರ, ಎರಡೂ ಪಾರ್ಟಿಗಳಿಂದ ಲೀಸ್ ಅಗ್ರೀಮೆಂಟ್ ನಡೆದಿದ್ದು, ಮಹಿಳೆ ತನ್ನ ವಾಸವನ್ನು ಬದಲಿಸಿ ಅಲ್ಲಿಗೆ ಶಿಫ್ಟ್ ಮಾಡಿಕೊಂಡಿದ್ದರು.

ಆದರೆ, ಮೂರು ತಿಂಗಳ ನಂತರ ಮೊಹಮ್ಮದ್ ಆಲಿ ಎಂಬಾತ ಬಂದಿದ್ದು, ಈ ಮನೆ ತನ್ನ ಹೆಸರಲ್ಲಿದೆ. ನೀವು ಬಂದು ಮೂರು ತಿಂಗಳು ಆಯ್ತಲ್ಲಾ. ಬಾಡಿಗೆ ಕೊಡುವಂತೆ ಒತ್ತಾಯಿಸಿದ್ದಾನೆ. ಮಹಿಳೆ ತಾನು ಮಾಡಿದ್ದ ಲೀಸ್ ಅಗ್ರೀಮೆಂಟ್ ತೋರಿಸಿ, 5 ಲಕ್ಷ ರೂ. ಡಿಪಾಸಿಟ್ ಮಾಡಿದ್ದನ್ನು ಹೇಳಿದ್ದಾರೆ. ಆದರೆ, ಅದ್ಯಾವುದಕ್ಕೂ ಒಪ್ಪದ ಆತ, ಈ ಮನೆ ನನ್ನ ಹೆಸರಲ್ಲಿದೆ. ನೀವು ಯಾರಿಗೆ ಹಣ ಹಾಕಿದ್ದೀರೋ ಗೊತ್ತಿಲ್ಲ ಎಂದು ಹೇಳಿದ್ದಾನೆ. ಅಷ್ಟರಲ್ಲಿ ತಾನು ಮೋಸ ಹೋಗಿದ್ದು ಮಹಿಳೆಗೆ ಅರಿವಾಗಿದ್ದು ನಕಲಿ ಡಾಕ್ಯುಮೆಂಟ್ ಹೆಸರಲ್ಲಿ ವಂಚನೆ ಮಾಡಿರುವ ಬಗ್ಗೆ ಬಂದರು ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಐಪಿಸಿ 419, 420 ಮತ್ತು ಸೆಕ್ಷನ್ 34ರಡಿ ಕೇಸು ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ವಂಚಕರು ಇದೇ ರೀತಿ ಹಲವರನ್ನು ಮೋಸ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಖಾಲಿ ಮನೆಗಳನ್ನು ಬಾಡಿಗೆ ಪಡೆದು, ಬಳಿಕ ಅದನ್ನೇ ಬೇರೆಯವರಿಗೆ ಲೀಸಿಗೆ ಕೊಟ್ಟು ದೊಡ್ಡ ಮೊತ್ತವನ್ನು ಪಡೆದು ವಂಚಿಸುವುದು ಇವರ ಜಾಲವಾಗಿದೆ.
Mangaluru woman duped with Fake lease document cheated of five lakhs. It is said that fake documents about a flat located on K S Rao Road here were created and a lady was cheated to the extent of five lac rupees on that basis. A woman from Beltangady working in a private medical store in the city was searching for a house on rent in June 2020.
10-04-26 06:53 pm
HK News Desk
ಚಿಕ್ಕಮಗಳೂರು ; ಚಂದ್ರದ್ರೋಣ ಪರ್ವತ ಬಳಿ ನಾಪತ್ತೆಯಾಗ...
10-04-26 03:25 pm
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
11-04-26 09:05 pm
Giridhar Shetty
ಚಂದ್ರನ ಸುತ್ತಿ ಮರಳಿದ ನಾಸಾದ ಗಗನಯಾತ್ರಿಗಳು ; ಸುರಕ...
11-04-26 12:44 pm
ಶಾಂತಿ ಮಾತುಕತೆಗಿಳಿದ ಪಾಕಿಸ್ತಾನ ವಿರುದ್ಧ ಕಿಡಿಕಾರಿ...
10-04-26 11:05 pm
ಮನೆಯಲ್ಲಿ ಭಾರೀ ನಗದು ಪತ್ತೆ ಪ್ರಕರಣ ; ನ್ಯಾಯಮೂರ್ತಿ...
10-04-26 01:26 pm
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
11-04-26 05:05 pm
Mangalore Correspondent
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
ಭರತನಾಟ್ಯ ಗುರು ಶ್ರಾವಣ್ ಉಳ್ಳಾಲ್ ಹಳದಿ ಕಾಮಾಲೆ ರೋಗ...
10-04-26 09:49 pm
ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂ...
10-04-26 06:05 pm
Puc 2026, Result, Mangalore: ಮೂವರು ಮಕ್ಕಳಾದರೂ...
10-04-26 12:35 pm
11-04-26 11:14 pm
HK News Desk
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm
ಕುಂಭಮೇಳದ ಮೊನಾಲಿಸಾ ಅಂತರ್ಧರ್ಮೀಯ ವಿವಾಹಕ್ಕೆ ಕುತ್ತ...
10-04-26 11:06 pm
Red Corner Notice, Mangalore crime: ದೇರಳಕಟ್ಟೆ...
09-04-26 09:16 pm