ಬ್ರೇಕಿಂಗ್ ನ್ಯೂಸ್
18-09-21 02:58 pm Mangaluru Correspondent ಕರಾವಳಿ
ಮಂಗಳೂರು, ಸೆ.18: ದೇಶಾದ್ಯಂತ ಪ್ರಮುಖ ಮೆಟ್ರೋ ನಗರಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಪ್ಲಾನ್ ಹಾಕಿದ್ದ ಆರು ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ಕೇಂದ್ರ ಗುಪ್ತಚರ ಏಜನ್ಸಿಗಳು ಕರಾವಳಿ ಮತ್ತು ಪ್ರಮುಖ ನಗರಗಳಲ್ಲಿ ಹೈಎಲರ್ಟ್ ಮಾಡಲು ಸೂಚನೆ ನೀಡಿದೆ. ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳಲ್ಲಿಯೂ ಹೈಎಲರ್ಟ್ ಸೂಚನೆ ನೀಡಲಾಗಿದ್ದು, ಈ ಕುರಿತು ಸೂಚನೆ ಬಂದಿರುವುದನ್ನು ಇಲ್ಲಿನ ಪೊಲೀಸರು ಖಚಿತಪಡಿಸಿದ್ದಾರೆ.
ಎರಡು ದಿನಗಳ ಹಿಂದೆಯೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೈಎಲರ್ಟ್ ಇರುವಂತೆ ಅಲ್ಲಿನ ಪೊಲೀಸರಿಗೆ ಕೇಂದ್ರ ಇಂಟೆಲಿಜೆನ್ಸಿ ಇಲಾಖೆಯಿಂದ ಸೂಚನೆ ನೀಡಲಾಗಿತ್ತು. ಅದೇ ವೇಳೆಗೆ, ಹೈಎಲರ್ಟ್ ಸೂಚನೆಯನ್ನು ಕರಾವಳಿ ಜಿಲ್ಲೆಗಳಿಗೆ ನೀಡಲಾಗಿದ್ದರೂ ಆ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಸಮುದ್ರ ಮಾರ್ಗದಲ್ಲಿ ಉಗ್ರರು ನುಸುಳುವ ಸಾಧ್ಯತೆ ಇರುವುದರಿಂದ ಪೊಲೀಸರು, ಕರಾವಳಿ ಕಾವಲು ಪಡೆ ಸೇರಿದಂತೆ ಕರಾವಳಿಯ ಎಲ್ಲ ಭದ್ರತಾ ವಿಭಾಗವನ್ನು ಕಟ್ಟೆಚ್ಚರ ಇರುವಂತೆ ಸೂಚಿಸಲಾಗಿದೆ. ಇದಲ್ಲದೆ, ಪ್ರಮುಖವಾಗಿ ಟಿಫಿನ್ ಬಾಕ್ಸ್ ಕೇರಿಯರ್ ಗಳಲ್ಲಿ ಬಾಂಬ್ ಇರುವ ಸಾಧ್ಯತೆ ಬಗ್ಗೆ ಕೇಂದ್ರ ಗುಪ್ತಚರ ಏಜನ್ಸಿಗಳು ಅನುಮಾನ ವ್ಯಕ್ತಪಡಿಸಿದ್ದು, ಇದರ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.

ವಾರದ ಹಿಂದಷ್ಟೇ ಕರಾವಳಿ ಜಿಲ್ಲೆಯ ಅರಣ್ಯ ಪ್ರದೇಶಗಳಿಂದ ವಿದೇಶಗಳಿಗೆ ಸ್ಯಾಟಲೈಟ್ ಫೋನ್ ಕನೆಕ್ಟ್ ಆಗಿದ್ದನ್ನು ಕೇಂದ್ರೀಯ ಗುಪ್ತಚರ ಪಡೆಗಳು ಪತ್ತೆ ಮಾಡಿದ್ದವು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ನಿಷೇಧಿತ ತುರಾಯಾ ಸ್ಯಾಟಲೈಟ್ ಫೋನ್ ವರ್ಕ್ ಆಗಿದ್ದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಆರು ಮಂದಿ ಉಗ್ರರನ್ನು ಬಲೆಗೆ ಕೆಡವಿದ್ದರು. ದೇಶದಲ್ಲಿ ಗಣೇಶೋತ್ಸವ, ನವರಾತ್ರಿ ಉತ್ಸವಗಳ ಸಂದರ್ಭ ಪ್ರಮುಖ ನಗರಗಳಲ್ಲಿ 1993ರ ಮುಂಬೈ ಸ್ಫೋಟದ ಮಾದರಿಯಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ್ದು ಬಯಲಾಗಿತ್ತು. ಉಗ್ರರ ಬಂಧನಕ್ಕೂ ಸ್ಯಾಟಲೈಟ್ ಫೋನ್ ಸಕ್ರಿಯ ಆಗಿದ್ದಕ್ಕೂ ಲಿಂಕ್ ಇದ್ಯಾ ಎನ್ನುವ ಅನುಮಾನ ಇದ್ದರೂ, ಕರಾವಳಿಯಲ್ಲಿ ಉಗ್ರರ ಸ್ಲೀಪರ್ ಸೆಲ್ ಇದೆ ಎನ್ನುವ ಕಾರಣಕ್ಕೆ ಎಲರ್ಟ್ ಮಾಡಲಾಗಿತ್ತು.
ಇದೀಗ ಮತ್ತೆ ದೆಹಲಿ ಪೊಲೀಸರ ಸೂಚನೆಯಂತೆ, ದೇಶಾದ್ಯಂತ ಕರಾವಳಿ ಪ್ರದೇಶಗಳಲ್ಲಿ ಎಲರ್ಟ್ ಇರಲು ಗುಪ್ತಚರ ಇಲಾಖೆಯಿಂದ ಸೂಚನೆ ಬಂದಿದೆ. ಆದರೆ, ಈ ರೀತಿಯ ಎಲರ್ಟ್ ಸೂಚನೆಗಳು ಬರುವುದು ಸಾಮಾನ್ಯ ಎಂದು ಇಲ್ಲಿನ ಕೆಲವು ಅಧಿಕಾರಿಗಳು ಹಲ್ಲು ಮುರಿಯುತ್ತಾರೆ. ಈ ಬಾರಿ ಸರಣಿಯಂತೆ, ಕರಾವಳಿಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿರುವ ಕಾರಣ ಐಎಸ್ಐ ಪ್ರೇರಿತ ವಿಧ್ವಂಸಕ ಕೃತ್ಯದ ಯೋಜನೆಗೂ ಇಲ್ಲಿಂದ ವಿದೇಶಕ್ಕೆ ಸ್ಯಾಟಲೈಟ್ ಫೋನ್ ಕನೆಕ್ಟ್ ಆಗಿದ್ದಕ್ಕೂ ಲಿಂಕ್ ಇಲ್ಲ ಎನ್ನುವ ಹಾಗಿಲ್ಲ. ಯಾಕಂದ್ರೆ, ಎರಡು ತಿಂಗಳ ಹಿಂದಷ್ಟೇ ಮಂಗಳೂರಿನ ಉಳ್ಳಾಲ ಮತ್ತು ಭಟ್ಕಳದಲ್ಲಿ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಲ್ಲದೆ, ಜಮ್ಮು ಕಾಶ್ಮೀರ ಮತ್ತು ಐಸಿಸ್ ಲಿಂಕ್ ಇರುವ ಬಗ್ಗೆ ಪತ್ತೆ ಹಚ್ಚಿದ್ದರು.

ಟಿಫಿನ್ ಬಾಕ್ಸ್ ಕ್ಯಾರಿಯರ್ ಬಗ್ಗೆ ನಿಗಾ ಏಕೆ ?
ಭಾರತದ ಪ್ರಮುಖ ನಗರಗಳಲ್ಲಿ ಸ್ಫೋಟಕ್ಕೆ ಸಂಚು ಹೂಡಿದ್ದ ಉಗ್ರರ ಬಂಧನಕ್ಕೆ ಸುಳಿವು ನೀಡಿದ್ದೇ ಟಿಫಿನ್ ಬಾಕ್ಸ್ ಬಾಂಬ್. ಒಂದು ತಿಂಗಳ ಹಿಂದೆ, ಆಗಸ್ಟ್ 7ರಂದು ಪಂಜಾಬ್ ರಾಜ್ಯದ ಅಮೃತಸರದಲ್ಲಿ ಟಿಫಿನ್ ಬಾಕ್ಸ್ ಕೇರಿಯರ್ ನಲ್ಲಿ ಐಇಡಿ ಸ್ಫೋಟಕಗಳು ಪತ್ತೆಯಾಗಿದ್ದವು. ಟ್ಯಾಂಕರ್ ಅಡಿಯಲ್ಲಿ ಇಡಲಾಗಿದ್ದ ಟಿಫಿನ್ ಬಾಕ್ಸನ್ನು ಖಚಿತ ಮಾಹಿತಿಯಂತೆ ಪೊಲೀಸರು ಶೋಧ ನಡೆಸಿ ಪತ್ತೆಹಚ್ಚಿದ್ದರು. ಅದರ ಜೊತೆಗೆ, ಟಿಫಿನ್ ಬಾಂಬ್ ಜೊತೆಗೆ ಟೈಮರ್ ಅನ್ನೂ ಅಳವಡಿಸಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ದೆಹಲಿ ಸ್ಪೆಷಲ್ ಪೊಲೀಸ್ ಸೆಲ್, ಉಗ್ರರ ಲಿಂಕ್ ಪತ್ತೆ ಮಾಡಿತ್ತು. ಆನಂತರ, ಸೈಲಂಟ್ ಆಗಿಯೇ ವರ್ಕ್ ಮಾಡಿದ್ದ ಪೊಲೀಸರು ಉತ್ತರ ಪ್ರದೇಶದ ಏಂಟಿ ಟೆರರ್ ಸ್ಕ್ವಾಡ್ ಜೊತೆಗೂಡಿ ಮಹಾರಾಷ್ಟ್ರ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಅಡಗಿದ್ದ ಆರು ಮಂದಿ ಉಗ್ರರನ್ನು ಬಂಧಿಸಿದ್ದರು.
ಇದೇ ಹಿನ್ನೆಲೆಯಲ್ಲಿ ಕೇಂದ್ರೀಯ ಇಂಟೆಲಿಜೆನ್ಸಿ ವಿಭಾಗವು ಟಿಫಿನ್ ಬಾಕ್ಸ್ ಕ್ಯಾರಿಯರ್ ಬಗ್ಗೆ ನಿಗಾ ಇಡಲು ಎಲ್ಲ ಕಡೆಗೂ ಸೂಚನೆ ನೀಡಿದೆ. ಶಾಲೆ, ಕಾಲೇಜು ತೆರೆಯುತ್ತಿದ್ದಂತೆ, ವಿದ್ಯಾರ್ಥಿಗಳು ಟಿಫಿನ್ ಬಾಕ್ಸ್ ಜೊತೆಗೆ ಬರುವುದು ಮಾಮೂಲು. ಬಸ್ ಇನ್ನಿತರ ಪ್ರದೇಶಗಳಲ್ಲಿ ಕೆಲವೊಮ್ಮೆ ಟಿಫಿನ್ ಬಾಕ್ಸ್ ಉಳಿದುಬಿಡುವುದು ಕೂಡ ಇರುತ್ತದೆ. ಈ ಬಗ್ಗೆ ಸಾರ್ವಜನಿಕರು ಹೆಚ್ಚು ಗಮನ ಹರಿಸದೇ ಬಿಡುವುದು ಕೂಡ ಜಾಸ್ತಿ. ಹಾಗಾಗಿ, ಉಗ್ರರು ಇದೇ ನಿರ್ಲಕ್ಷ್ಯದ ವಿಚಾರವನ್ನು ಬಳಸ್ಕೊಂಡು ಟಿಫಿನ್ ಬಾಕ್ಸ್ ಕೇರಿಯರ್ ಗಳಲ್ಲಿ ಬಾಂಬ್ ಇಡಲು ಪ್ಲಾನ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ರೀತಿಯ ಬಾಂಬ್ ಸ್ಫೋಟ ತಂತ್ರಗಾರಿಕೆಯನ್ನು ಈ ಹಿಂದೆ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಕೆಲವು ಕಡೆ ಪ್ರಯೋಗ ಮಾಡಿತ್ತು.
Central Intelligence issues High Alert in Mangalore after Satellite phone signals detected in the forest range. Bomb blast to be carried using tiffin boxes is the plan of terror outfits, strict surveillance has been ordered by the central department of Interllehmce in Karavali Dakshina Kannada and Mysuru. The alert was mainly issued after 6 ISI-trained Terrorists, Who Were Planning IED Blasts, Arrested by Delhi Police
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm