ಬ್ರೇಕಿಂಗ್ ನ್ಯೂಸ್
17-09-21 05:06 pm Mangaluru Correspondent ಕರಾವಳಿ
ಮಂಗಳೂರು, ಸೆ.17 : ಪೊಲೀಸರು ಹೆತ್ತವರಿಗೆ, ಗುರು ಹಿರಿಯರಿಗೆ ಮಾತ್ರ ಸೆಲ್ಯೂಟ್ ಮಾಡಬೇಕು. ದುಷ್ಟರು, ವಿದ್ರೋಹಿಗಳ ಪಾಲಿಗೆ ವೀರಭದ್ರರಾಗಬೇಕು. ದುರ್ಗೆಯಂತೆ ಉಗ್ರಾವತಾರ ತಾಳಿ ಶಿಕ್ಷೆ ನೀಡುವಂತಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆಶಿಸಿದ್ದಾರೆ.
ಮಂಗಳೂರಿನಲ್ಲಿ ಒಂದು ತಿಂಗಳ ಕಾಲ ನಡೆದ ಪೊಲೀಸ್ ಆಕಾಂಕ್ಷಿಗಳ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಚಲನಚಿತ್ರಗಳಲ್ಲಿ ಪೊಲೀಸರನ್ನು ಹಾಸ್ಯದ ವಸ್ತುವನ್ನಾಗಿ ತೋರಿಸುತ್ತಾರೆ. ಇದರಿಂದ ಸಮಾಜ, ದೇಶಕ್ಕೆ ನಷ್ಟ. ಪೊಲೀಸರನ್ನು ಧೈರ್ಯವಂತರನ್ನಾಗಿ ಮಾಡಿ, ಸತ್ಯ- ನ್ಯಾಯದಲ್ಲಿ ನಡೆಯುವಂತಾಗಿಸಿ ಎಂದು ವೀರೇಂದ್ರ ಹೆಗ್ಗಡೆ ಮನವಿ ಮಾಡಿದರು. ಪೊಲೀಸ್ ಯೂನಿಫಾರ್ಮ್‌ಗೆ ಬಹಳ ಮಹತ್ವವಿದ್ದು, ಯುವಕ- ಯುವತಿಯರು ಶಿಷ್ಟರ ರಕ್ಷಣೆಯ, ದುಷ್ಟರ ಶಿಕ್ಷಣೆಯ ಪೊಲೀಸ್ ಕೆಲಸವನ್ನು ಆಯ್ಕೆ ಮಾಡಬೇಕೆಂದು ಕರೆ ನೀಡಿದರು.



ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಕಾರ್ಯವೈಖರಿ ಬಹಳ ವಿಭಿನ್ನವಿದೆ. ಪೊಲೀಸರು ಕರ್ತವ್ಯ ನಿರ್ವಹಿಸಿದ ಪ್ರದೇಶದ ಮಣ್ಣಿನ ಮಗ ಆಗುತ್ತಾರೆ. ಶಶಿಕುಮಾರ್ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನ ಮಗನಾಗಿದ್ದಾರೆ. ತುಳು ಭಾಷೆಯನ್ನು ಕಲಿತು ಇನ್ನೂ ಹತ್ತಿರವಾಗಿದ್ದಾರೆ ಎಂದು ವೀರೇಂದ್ರ ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ಕಮಿಷನರೇಟ್ ವತಿಯಿಂದ 30 ದಿನಗಳ ಪೊಲೀಸ್ ಆಕಾಂಕ್ಷಿಗಳ ತರಬೇತಿ ಶಿಬಿರ ನಡೆದಿದ್ದು ಸಮಾರೋಪ ಸಮಾರಂಭ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಶಿಬಿರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 206 ಮಂದಿ ಭಾಗವಹಿಸಿದ್ದು, ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ. ಕರಾವಳಿ ಜಿಲ್ಲೆಯವರು ಪೊಲೀಸ್ ಇಲಾಖೆಗೆ ಬರಬೇಕು ಎಂಬ ಮುತುವರ್ಜಿಯಿಂದ ಕಮಿಷನರ್ ಶಶಿಕುಮಾರ್ ಈ ಶಿಬಿರ ನಡೆಸಿದ್ದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಾಣೆ, ಎಎನ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಅಧೀಕ್ಷಕ ನಿಖಿಲ್, ಮಂಗಳೂರು ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
The valedictory of a month-long training for aspirants to the post of constables and sub-inspectors, was held at St Aloysius Gonzaga hall on Friday September 17. Dharmadhikari of Dharmasthala Dr Veerendra Heggade lighted the lamp to begin the programme.
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
12-07-26 02:16 pm
HK News Staffer
ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ ; ತಾ...
11-07-26 08:40 pm
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm
ಮಾಜಿ ಸಾರಿಗೆ ಅಧಿಕಾರಿ ಮನೆಯಲ್ಲಿ ಕುಬೇರನ ಖಜಾನೆ ! ಗ...
10-07-26 10:14 pm