ಬ್ರೇಕಿಂಗ್ ನ್ಯೂಸ್
13-09-21 09:53 pm Headline Karnataka News Network ಕರಾವಳಿ
ಮಂಗಳೂರು, ಸೆ.13 : ಇದೇ ಮೊದಲ ಬಾರಿಗೆ ಮಂಗಳೂರಿನ ಹುಡುಗಿಯೊಬ್ಬಳು ರಾಷ್ಟ್ರ ಮಟ್ಟದ ಸಿಎ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾಳೆ. ಮಂಗಳೂರಿನ ರೂತ್ ಕ್ಲಾರಾ ಡಿಸಿಲ್ವಾ ಕಳೆದ ಜುಲೈನಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಒಂದನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.
ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ ಸ್ಟಿಟ್ಯೂಟ್ ವತಿಯಿಂದ 2021ರ ಸಾಲಿನ ಸಿಎ ಅಂತಿಮ ಪರೀಕ್ಷೆಯನ್ನು ನಡೆಸಲಾಗಿತ್ತು. ಇದರ ಫಲಿತಾಂಶ ಸೆ.13ರಂದು ಬಂದಿದ್ದು, ಮಂಗಳೂರು ಮೂಲದ ರೂತ್ ಕ್ಲಾರಾ ಡಿಸಿಲ್ವಾ ಆಲ್ ಇಂಡಿಯಾ ಲೆವಲಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ.
ನಗರದ ಮಲ್ಲಿಕಟ್ಟೆಯ ನಿವಾಸಿಗಳಾಗಿರುವ ರೋಸಿ ಮಾರಿಯಾ ಡಿಸಿಲ್ವಾ ಮತ್ತು ರುಫರ್ಟ್ ಡಿಸಿಲ್ವ ದಂಪತಿಯ ಪುತ್ರಿಯಾಗಿರುವ ರೂತ್ ಕ್ಲಾರಾ, ಬಲ್ಮಠದಲ್ಲಿರುವ ಸಿಎ ವಿವಿಯನ್ ಪಿಂಟೋ ಅಂಡ್ ಕಂಪನಿಯಲ್ಲಿ ಸಿಎ ಅಭ್ಯಾಸ ಪಡೆದಿದ್ದರು. ಇದಕ್ಕೂ ಮುನ್ನ ಬೆಂಗಳೂರಿನ ಅಕಾಡೆಮಿ ಒಂದರಲ್ಲಿ ಒಂದು ವರ್ಷದ ಸಿಎ ತರಬೇತಿ ಪಡೆದಿದ್ದರು. ಮಂಗಳೂರಿನ ಸೈಂಟ್ ಥೆರೆಸಾ ಸ್ಕೂಲ್ ನಲ್ಲಿ ಪ್ರಾಥಮಿಕ ಮತ್ತು ಆಗ್ನೆಸ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದರು.
ಆನಂತರ ಮಂಗಳೂರಿನಲ್ಲಿ ಸಿಎ ಆರ್ಟಿಕಲ್ ಶಿಪ್ ನಡೆಸುತ್ತಲೇ ಮಂಗಳೂರು ಯುನಿವರ್ಸಿಟಿಯಲ್ಲಿ ದೂರ ಶಿಕ್ಷಣ ಕೇಂದ್ರದ ಮೂಲಕ ಪದವಿ ಮುಗಿಸಿದ್ದರು. ಪದವಿ ಶಿಕ್ಷಣದ ಜೊತೆಯಲ್ಲೇ ಸಿಎ ವ್ಯಾಸಂಗ ನಡೆಸಿದ್ದು ಮತ್ತು ಗ್ರೂಪ್ ವನ್ ಹಾಗೂ ಗ್ರೂಪ್ ಟು ಹೆಸರಿನ ಎರಡು ಪರೀಕ್ಷೆಗಳನ್ನೂ ಏಕಕಾಲದಲ್ಲಿ ಬರೆದು ಮೊದಲ ಪ್ರಯತ್ನದಲ್ಲೇ ಪಾಸ್ ಆಗಿದ್ದಲ್ಲದೆ, ದೇಶದಲ್ಲೇ ಮೊದಲ ಸ್ಥಾನವನ್ನು ಗಳಿಸಿದ್ದು ಅಪರೂಪದ ಸಾಧನೆಯೇ ಸರಿ.
ಈ ಬಗ್ಗೆ ಕ್ಲಾರಾ ಬಳಿ ಕೇಳಿದರೆ, ಕಳೆದ 5 ತಿಂಗಳಿಂದ ದಿನದಲ್ಲಿ 8ರಿಂದ ಹತ್ತು ಗಂಟೆ ಕಾಲ ಅಭ್ಯಾಸ ನಡೆಸುತ್ತಿದ್ದೆ. ತಂದೆ, ತಾಯಿಯ ಪ್ರೋತ್ಸಾಹ, ಬೆಂಬಲದಿಂದಲೇ ಈ ರೀತಿಯ ಸಾಧನೆ ಮಾಡಲು ಸಾಧ್ಯವಾಗಿದೆ ಎಂದಿದ್ದಾರೆ. ಈಕೆಯ ಸಾಧನೆಯ ಬಗ್ಗೆ ಮಂಗಳೂರಿನ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕಾಮತ್ ಬಳಿ ಕೇಳಿದಾಗ, ಈ ರೀತಿಯ ಸಾಧನೆಯೇ ಅಪರೂಪದಲ್ಲಿ ಅಪರೂಪದ್ದು. ಹಿಂದೆಲ್ಲಾ ಹತ್ತು, 12ನೇ ಸ್ಥಾನ ಬರುತ್ತಿದ್ದುದೇ ದೊಡ್ಡ ಸಾಧನೆ ಎನ್ನುವುದಾಗಿತ್ತು. ನನ್ನ 25 ವರ್ಷಗಳ ಸರ್ವಿಸ್ ನಲ್ಲಿ ಈ ರೀತಿಯ ಸಾಧನೆ ನಾನು ಕಂಡಿಲ್ಲ. ಕ್ಲಾರಾ ಅವರು ಐಸಿಪಿಸಿ ಗ್ರೂಪ್ ಒಂದು ಮತ್ತು ಎರಡರ ಅಂತಿಮ ಪರೀಕ್ಷೆಯನ್ನು ಒಂದೇ ಬಾರಿಗೆ ಬರೆದು ಮೊದಲ ಪ್ರಯತ್ನದಲ್ಲಿಯೇ ಇಂಡಿಯಾದಲ್ಲೇ ಟಾಪರ್ ಆಗಿದ್ದಾರೆ. ಮುಂಬೈ, ಗುಜರಾತಿನವರು ಹಿಂದೆ ಸಿಎ ಟಾಪರ್ ಆಗಿದ್ದಿದೆ. ಆದರೆ, ಎರಡೂ ಪರೀಕ್ಷೆಯನ್ನು ಬರೆದು ಮೊದಲ ಸ್ಥಾನ ಗಳಿಸಿದ್ದು ಇದೇ ಮೊದಲು. ಇದು ನಮ್ಮ ಮಂಗಳೂರಿಗೇ ದೊಡ್ಡ ಹೆಮ್ಮೆ ಎಂದು ಪ್ರಶಂಸಿಸಿದ್ದಾರೆ.
Ruth Clare D’Silva from Mangalore has secured All India first rank in the CA Final examinations held earlier in July. Ruth, daughter of Rosy Maria D’Silva and Ruffert D’Silva, has bagged the numero uno position in the Chartered Accountants (CA) July 2021 examination conducted by the Institute of Chartered Accountants of India (ICAI).
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
03-08-25 04:25 pm
HK News Desk
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm