ಬ್ರೇಕಿಂಗ್ ನ್ಯೂಸ್
13-09-21 02:37 pm Mangaluru Correspondent ಕರಾವಳಿ
ಮಂಗಳೂರು, ಸೆ.13 : ಹಿರಿಯ ಕಾಂಗ್ರೆಸ್ ನಾಯಕ, ಸೋನಿಯಾ ಗಾಂಧಿ ಆಪ್ತರಾಗಿ ಗುರುತಿಸಿಕೊಂಡಿದ್ದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್(80) ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.
ಕಳೆದ ಜುಲೈ 19 ರಂದು ತನ್ನ ಮನೆಯಲ್ಲಿ ಯೋಗ ಮಾಡುತ್ತಿದ್ದಾಗ ಬಿದ್ದು ಗಾಯಗೊಂಡಿದ್ದ ಆಸ್ಕರ್ ಅವರನ್ನು ಯೇನಪೋಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಐಸಿಯು ವಿಭಾಗದಲ್ಲಿ ದಾಖಲಾಗಿದ್ದ ಆಸ್ಕರ್ ಸ್ಥಿತಿ ಕೋಮಾದಲ್ಲಿತ್ತು. ಎರಡು ತಿಂಗಳ ಪರ್ಯಂತ ಚಿಕಿತ್ಸೆ ನೀಡಿದ ವೈದ್ಯರು, ಗುಣಮುಖರಾಗುತ್ತಾರೆಯೇ ಎಂದು ಪ್ರಯತ್ನ ಪಟ್ಟಿದ್ದರು. ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದನೆ ಸಿಕ್ಕಿರಲಿಲ್ಲ ಎನ್ನಲಾಗಿತ್ತು. ಇದೇ ಕಾರಣದಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎರಡು ದಿನಗಳ ಹಿಂದಷ್ಟೇ ಕೇಂದ್ರ ನಾಯಕ ಮಲ್ಲಿಕಾರ್ಜುನ ಖರ್ಗೆ ಮಂಗಳೂರಿಗೆ ಬಂದು ಆಸ್ಕರ್ ಅವರನ್ನು ಕಂಡು ಚಿಕಿತ್ಸೆ ಬಗ್ಗೆ ಕೇಳಿ ತೆರಳಿದ್ದರು. ಇದಾಗಿ ಎರಡು ದಿನಗಳಲ್ಲೇ ಆಸ್ಕರ್ ಮೃತಪಟ್ಟಿದ್ದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ.
ಆಸ್ಕರ್ ಫೆರ್ನಾಂಡಿಸ್ ಅವರು ಪತ್ನಿ ಬ್ಲೋಸಮ್ ಫೆರ್ನಾಂಡಿಸ್, ಪುತ್ರ ಹಾಗೂ ಪುತ್ರಿಯೊಂದಿಗೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ಐದು ದಶಕದ ಸುದೀರ್ಘ ರಾಜಕೀಯ ಬದುಕು
ತಮ್ಮ ಐದು ದಶಕಗಳ ರಾಜಕೀಯ ಬದುಕಿನಲ್ಲಿ ಆಸ್ಕರ್ ಫೆರ್ನಾಂಡಿಸ್ ಸತತ ಐದು ಬಾರಿ ಉಡುಪಿ ಕ್ಷೇತ್ರದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 1998ರಿಂದ ಸತತ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. 2016ರ ಜುಲೈನಲ್ಲಿ ನಾಲ್ಕನೇ ಬಾರಿಗೆ ಆಯ್ಕೆಯಾದ ಇವರ ಸದಸ್ಯತ್ವ ಅವಧಿ 2022ರ ಜೂ.30ರ ವರೆಗೆ ಇತ್ತು.
1972ರಲ್ಲಿ ಉಡುಪಿ ಪುರಸಭೆಗೆ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಆಸ್ಕರ್, 1980ರಲ್ಲಿ ತನ್ನ ರಾಜಕೀಯ ಗುರು ಟಿ.ಎ.ಪೈ ಅವರನ್ನೇ ಮಣಿಸಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಹಿರಿಯ ನಾಯಕ ಜನಾರ್ದನ ಪೂಜಾರಿ ಗರಡಿಯಲ್ಲಿ ರಾಷ್ಟ್ರ ರಾಜಕಾರಣಕ್ಕೆ ನೆಗೆದ ಆಸ್ಕರ್ ಅಲ್ಲಿಂದ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಸತತ ಐದು ಬಾರಿ ಸಂಸತ್ ಸದಸ್ಯರಾಗಿ ಉಡುಪಿಯಲ್ಲಿ ಚುನಾಯಿತರಾಗಿದ್ದರು. 2004ರಲ್ಲಿ ಮನಮೋಹನ್ ಸಿಂಗ್ ಸರಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ)ರಾಗಿ ಅಧಿಕಾರ ನಿರ್ವಹಿಸಿದ್ದರು. ಯುಪಿಎ ಸರಕಾರದ ಎರಡೂ ಅವಧಿಗಳಲ್ಲಿ -2004ರಿಂದ 2009ರ ವರೆಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಬಳಿಕ ಪಕ್ಷದ ಕೆಲಸಗಳಿಗೆ ನಿಯೋಜಿತರಾಗಿದ್ದರು.
1941ರ ಮಾ.27ರಂದು ಉಡುಪಿಯಲ್ಲಿ ಅಂದಿನ ಜನಪ್ರಿಯ ಶಿಕ್ಷಕರಾಗಿದ್ದ ರಾಕಿ ಫೆರ್ನಾಂಡಿಸ್ ಹಾಗೂ ಲಿಯೋನಿಸ್ಸಾ ಫೆರ್ನಾಂಡಿಸ್ ದಂಪತಿಯ 12 ಮಂದಿ ಮಕ್ಕಳಲ್ಲಿ ಒಬ್ಬರಾಗಿದ್ದ ಆಸ್ಕರ್, ಒಬ್ಬ ಕಟ್ಟಾ ಕೆಥೋಲಿಕ್ ಹಿನ್ನೆಲೆಯಿಂದ ಬಂದವರು. ಎಳೆಯ ಪ್ರಾಯದಿಂದಲೂ ಚರ್ಚ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಮೂಲತಃ ಉದ್ಯಾವರದವರಾದ ಫೆರ್ನಾಂಡಿಸ್ ಕುಟುಂಬ ಉಡುಪಿಯ ಬ್ರಹ್ಮಗಿರಿಯಲ್ಲಿ ನೆಲೆಸಿತ್ತು. ಅವರ ಮೂಲ ಮನೆ (ಡೋರಿಸ್ ರೆಸ್ಟ್ ಹೆವನ್) ಈಗಲೂ ಇದ್ದು, ಅದೇ ಆಸ್ಕರ್ ಅವರ ಉಡುಪಿಯ ವಿಳಾಸವಾಗಿ ಗುರುತಿಸಲ್ಪಡುತ್ತಿದೆ.
ಮೊದಲು ಎಲ್‌ಐಸಿಯಲ್ಲಿ ಕೆಲ ಕಾಲ ದುಡಿದಿದ್ದರು. ರಾಜಕೀಯ ಸೆಳೆತದ ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ 1972ರಲ್ಲಿ ನಗರಸಭಾ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದರು. ಇದೇ ಅವಧಿಯಲ್ಲಿ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ ಜನಪ್ರಿಯರಾದರು. ಈಗಲೂ ಅವರು ಉಡುಪಿಯ ಒಂದು ರಿಕ್ಷಾ ಯೂನಿಯನ್‌ನ ಗೌರವ ಅಧ್ಯಕ್ಷರಾಗಿದ್ದರು. ಮೊದಲಿನಿಂದಲೂ ಸೋನಿಯಾ ಮತ್ತು ಗಾಂಧಿ ಕುಟುಂಬದ ನಿಷ್ಠರಾಗಿದ್ದರಿಂದ ಕರ್ನಾಟಕ ಕಾಂಗ್ರೆಸ್ ಪಾಲಿಗೆ ಹೈಕಮಾಂಡ್ ಆಗಿಯೇ ಗುರುತಿಸಿದ್ದರು.
Senior Congress leader and former Union Minister Oscar Fernandes passed away on Monday afternoon aged 80. He breathed his last at Yenepoya Hospital in Mangaluru. Fernandes was admitted to the hospital here after he suffered head injury due to a fall when practising Yoga at his home in July this year. He had underwent to remove a clot in his brain.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm