ಬ್ರೇಕಿಂಗ್ ನ್ಯೂಸ್
08-09-20 12:34 pm Mangalore Reporter ಕರಾವಳಿ
ಮಂಗಳೂರು, ಸೆಪ್ಟಂಬರ್ 8: ಸಮುದ್ರ ಮಧ್ಯೆ ಕಾಣೆಯಾದರೆ ಯಾರಾದ್ರೂ ಬದುಕು ಬರೋದುಂಟೇ..? ಆದರೆ ಇಲ್ಲೂಬ್ಬ ಮೀನು ಕಾರ್ಮಿಕ ಸಮುದ್ರ ಮಧ್ಯೆ ಪರ್ಸೀನ್ ಬೋಟ್ ನಿಂದ ಮಿಸ್ಸಿಂಗ್ ಆಗಿದ್ದರೂ ಎರಡು ದಿನಗಳ ನಂತರ ಪವಾಡ ಸದೃಶ ಬದುಕಿ ಬಂದಿದ್ದಾನೆ. ಹೌದು.. ಆಯುಷ್ಯ ಇದ್ದರೆ ಸಮುದ್ರಕ್ಕೆ ಬಿದ್ದರೂ ಬದುಕಿ ಬರಬಹುದು ಎನ್ನುವ ಮಾತು ಬಂದಿದ್ದು ಇದಕ್ಕೇ ಇರಬೇಕು.
ಮಂಗಳೂರಿನ ಹಳೆ ಬಂದರಿನಿಂದ ತೆರಳಿದ್ದ ಫಾಲ್ಕನ್ ಹೆಸರಿನ ಪರ್ಸೀನ್ ಬೋಟ್ ಎರಡು ದಿನಗಳ ಹಿಂದೆ ಸಮುದ್ರ ಮಧ್ಯೆ ಮೀನಿಗೆ ಬಲೆ ಹಾಕುವ ಯತ್ನದಲ್ಲಿತ್ತು. ಈ ವೇಳೆ, ಪರ್ಸೀನ್ ಬೋಟಿನ ಜೊತೆಗಿರುವ ಡಿಂಗಿ ಹೆಸರಿನ ಸಣ್ಣ ಬೋಟಿನಲ್ಲಿ ಕುಳಿತು ಕಾರ್ಮಿಕ ಸುನಿಲ್ ಡಿಸೋಜ ಬಲೆ ವಿಸ್ತರಿಸಲೆಂದು ನೀರಿಗೆ ಇಳಿದಿದ್ದರು. ಆದರೆ ಈ ವೇಳೆ ಜೋರಾಗಿ ಗಾಳಿ ಬಂದಿದ್ದರಿಂದ ಡಿಂಗಿ ಬೋಟಿಗೆ ಕಟ್ಟಿದ್ದ ಹಗ್ಗ ಕಡಿದು ಹೋಗಿದೆ. ಡಿಂಗಿ ಬೋಟ್ ಕಾರ್ಮಿಕನ ಸಹಿತ ಗಾಳಿಯೊಂದಿಗೆ ತೇಲಿ ಹೋಗಿದ್ದು, ಪರ್ಸೀನ್ ಬೋಟಿನಿಂದ ಮಿಸ್ ಆಗಿತ್ತು. ಪರ್ಸೀನ್ ಬೋಟಿನಲ್ಲಿದ್ದ ಸಿಬಂದಿ ಸಮುದ್ರ ಮಧ್ಯೆ ಹುಡುಕಾಟ ನಡೆಸಿದ್ರೂ ಡಿಂಗಿ ಆಗಲೀ, ಅದರಲ್ಲಿದ್ದ ಕಾರ್ಮಿಕನಾಗಲೀ ಪತ್ತೆಯಾಗಿರಲಿಲ್ಲ. ಆನಂತ್ರ ಪರ್ಸೀನ್ ಬೋಟ್ ಮಂಗಳೂರು ಬಂದರಿಗೆ ಹಿಂತಿರುಗಿ ಬಂದಿತ್ತು.

ಎರಡು ದಿನಗಳ ಬಳಿಕ ಉಡುಪಿ ಜಿಲ್ಲೆಯ ಮಲ್ಪೆಯ ಟ್ರಾಲ್ ಬೋಟಿನವರು ಆಳಸಮುದ್ರ ಮೀನುಗಾರಿಕೆಯಿಂದ ಹಿಂತಿರುಗುತ್ತಿದ್ದಾಗ ಸಮುದ್ರ ಮಧ್ಯದಲ್ಲಿ ಪತ್ತೆಯಾದ ಡಿಂಗಿಯನ್ನು ಗಮನಿಸಿದ್ದು ಅದರಲ್ಲಿದ್ದ ಕಾರ್ಮಿಕನನ್ನು ರಕ್ಷಣೆ ಮಾಡಿದ್ದಾರೆ. ಗಾಳಿ ಬಂದ ದಿಕ್ಕಿನಲ್ಲಿ ಸಮುದ್ರ ಮಧ್ಯೆ ಚಲಿಸುತ್ತಾ ಹೋಗುತ್ತಿದ್ದ ಡಿಂಗಿ ಬೋಟಿನಲ್ಲಿ ಅನ್ನ, ನೀರು ಇಲ್ಲದೆ ಎರಡು ದಿನ ಕಳೆದ ಕಾರ್ಮಿಕನನ್ನು ಹಿಡಿದು ಮಲ್ಪೆ ಬಂದರಿಗೆ ಕರೆತಂದಿದ್ದಾರೆ. ಕಾರ್ಮಿಕ ಸುನಿಲ್ ಡಿಸೋಜನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಎರಡು ದಿನ ಕಳೆದಿದ್ದರಿಂದ ಸುನಿಲ್ ಜೀವಂತ ಬರುವುದು ಸಂಶಯ ಆಗಿತ್ತು. ಡಿಂಗಿ ಬೋಟ್ ಸಮುದ್ರ ಮಧ್ಯೆ ಮುಳುಗಿರಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಸುನಿಲ್ ಡಿಸೋಜ ಪವಾಡ ಸದೃಶ ಬದುಕಿ ಬಂದಿದ್ದಾರೆ.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
24-08-26 04:14 pm
HK News Staffer
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
24-08-26 02:35 pm
HK News Staffer
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am