ಬ್ರೇಕಿಂಗ್ ನ್ಯೂಸ್
03-09-21 03:31 pm Mangaluru Correspondent ಕರಾವಳಿ
ಉಳ್ಳಾಲ, ಸೆ.3: ದ್ವಿಚಕ್ರ ವಾಹನಗಳಿಗೂ ಚಲಿಸಲಾಗದ ಸ್ಥಿತಿಯಲ್ಲಿ ಕೆಟ್ಟು ಕೆರ ಹಿಡಿದಿದ್ದ ಕುಂಪಲ ಸರಳಾಯ ಕಾಲನಿ ಮುಖ್ಯ ರಸ್ತೆಗೆ ಕೊನೆಗೂ ಕಾಯಕಲ್ಪ ದೊರಕಿದ್ದು ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಯು.ಟಿ. ಖಾದರ್ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ.
ಕುಂಪಲ ಸರಳಾಯ ಕಾಲನಿ ಮಧ್ಯಮ ವರ್ಗದ ಜನರೇ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶವಾಗಿದೆ. ಹಿಂದೆಯೂ ಈ ಕಾಲನಿಯ ಅಡ್ಡ ರಸ್ತೆಗಳು ನಾದುರಸ್ಥಿಯಲ್ಲಿದ್ದಾಗ ಇಲ್ಲಿನ ಪ್ರದೇಶವಾಸಿಗಳು ಸರಕಾರದ ಅನುದಾನವನ್ನ ಕಾಯದೆ ಸ್ವಂತ ಹಣವನ್ನೇ ಒಗ್ಗೂಡಿಸಿ ಸುಸಜ್ಜಿತ ಕಾಂಕ್ರೀಟ್ ಅಡ್ಡ ರಸ್ತೆಗಳನ್ನು ತಾವೇ ನಿರ್ಮಿಸಿ ಸುದ್ದಿಯಾಗಿದ್ದರು.
ಸರಳಾಯ ಕಾಲನಿಯಿಂದ ಪಿಲಾರು ಪಲ್ಲ ಸಂಪರ್ಕದ ಮುಖ್ಯ ರಸ್ತೆಯು ಕಳೆದ ಹಲವಾರು ವರುಷಗಳಿಂದ ನಡೆಯಲೂ ಯೋಗ್ಯವಿಲ್ಲದ ಕಚ್ಛಾ ರಸ್ತೆಯಾಗಿಯೇ ಉಳಿದಿತ್ತು. ಈ ರಸ್ತೆಗಳಿಂದ ಸಂಚರಿಸುವ ದ್ವಿಚಕ್ರ ವಾಹನಗಳು ರಸ್ತೆ ನಡುವಿನ ಹೊಂಡಗಳಿಗೆ ಸಿಲುಕಿ ಪಲ್ಟಿ ಹೊಡೆಯುತ್ತಾ ಸಾಗುತ್ತಿದ್ದವು.






ರಸ್ತೆಯ ದುಸ್ಥಿಯನ್ನ ಅವಲೋಕಿಸಿದ್ದ ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರು ಕಾಂಕ್ರಿಟೀಕರಣಕ್ಕೆ ತಕ್ಷಣ ಅನುದಾನ ಮಂಜೂರು ಮಾಡಿದ್ದಾರೆ. ಇಂದು ನೂತನ ಕಾಂಕ್ರಿಟೀಕರಣ ಕಾಮಗಾರಿಗೆ ಅವರು ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ನೂತನವಾಗಿ ನಿರ್ಮಾಣವಾಗುವ ಕಾಂಕ್ರೀಟ್ ರಸ್ತೆ ಕಾಮಗಾರಿಯ ಗುಣಮಟ್ಟವನ್ನ ಸ್ಥಳೀಯರೇ ಅಳೆಯುವಂತಾಗಬೇಕು. ರಸ್ತೆಯು ಮೂವತ್ತು ವರ್ಷಗಳ ಬಳಕೆಗೆ ಯೋಗ್ಯವಿರುವಂತೆ ಗುಣಮಟ್ಟವನ್ನು ಗುತ್ತಿಗೆದಾರರು ಕಾಯ್ದುಕೊಳ್ಳಬೇಕು. ಕಾಂಕ್ರೀಟ್ ರಸ್ತೆಯ ಗುಣ ಮಟ್ಟಕ್ಕೆ ಕುಂಪಲ - ಚೇತನನಗರ ಮುಖ್ಯ ರಸ್ತೆಯೆ ಮಾದರಿ ಎಂದರು. ರಸ್ತೆ ನಿರ್ಮಾಣದ ವೇಳೆ ಸ್ಥಳೀಯರು ತಾಳ್ಮೆ ವಹಿಸಿದಲ್ಲಿ ಅತ್ಯುತ್ತಮ ರಸ್ತೆ ನಿರ್ಮಾಣವಾಗಲಿದೆ ಎಂದರು.
ಇದೇ ವೇಳೆ ಕುಂಪಲ ಆಶ್ರಯ ಕಾಲನಿಯಲ್ಲಿ ನಿರ್ಮಾಣಗೊಂಡ ನೂತನ ಇಂಟರ್ ಲಾಕ್ ರಸ್ತೆಯನ್ನೂ ಅವರು ಉದ್ಘಾಟಿಸಿದರು.ಪ್ರಮುಖರಾದ ಶ್ರೀಧರ ಆಳ್ವ, ಸದಾಶಿವ ಉಳ್ಳಾಲ್, ದಿನೇಶ್ ಕುಂಪಲ, ದೇವೇಶ ಸರಳಾಯ, ನಳಿನಿ, ಸೋಮೇಶ್ವರ ಪುರಸಭೆಯ ನಿಕಟ ಪೂರ್ವ ಸದಸ್ಯರಾದ ಪುರುಷೋತ್ತಮ ಶೆಟ್ಟಿ ಪಿಲಾರ್, ದೀಪಕ್ ಪಿಲಾರ್, ಉದಯಗಟ್ಟಿ ಪಿಲಾರ್, ಮುಖಂಡರಾದ ಸತೀಶ್ ಉಳ್ಳಾಲ್, ವಿನೋದ್, ಎ.ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.
Kumpala colony in ullal road concrete work to begin and inauguration.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm