ಬ್ರೇಕಿಂಗ್ ನ್ಯೂಸ್
28-08-21 11:15 am Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 28: ಈಗಿನ ಕೆಲವು ಯುವಕ- ಯುವತಿಯರಿಗೆ ಟಿಕ್ ಟಾಕ್ ವಿಡಿಯೋ ಮಾಡುವುದು ಟ್ರೆಂಡ್ ಆಗಿದೆ. ಆದರೆ, ಎಲ್ಲಿ ಯಾವುದನ್ನು ಮಾಡಬೇಕು ಎಂಬ ಅರಿವು ಇಲ್ಲದೆಯೋ, ಏನಾಗುತ್ತೆ ಎಂಬ ದಾರ್ಷ್ಟ್ಯವೋ ಸಿಕ್ಕಸಿಕ್ಕಲ್ಲಿ ಟಿಕ್ ಟಾಕ್ ಮಾಡಿ ಸಿಕ್ಕಿಬೀಳುತ್ತಾರೆ. ಹಳೆಯಂಗಡಿ ಪ್ರಸಿದ್ಧ ಪಾವಂಜೆ ದೇವಸ್ಥಾನದಲ್ಲಿ ಇಬ್ಬರು ಹುಡುಗಿಯರ ಜೊತೆ ಯುವಕನೊಬ್ಬ ಟಿಕ್ ಟಾಕ್ ವಿಡಿಯೋ ಮಾಡಿದ್ದು ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮೂಲ್ಕಿ ನಿವಾಸಿ ಪ್ರತೀಕ್ ಶೆಟ್ಟಿ ಎಂಬಾತ ತನ್ನೊಂದಿಗೆ ಇಬ್ಬರು ಹುಡುಗಿಯರ ಜೊತೆ ವಿಡಿಯೋ ಮಾಡಿದ್ದಾನೆ. ದೇವಸ್ಥಾನದ ಒಳಗಿನ ಅಂಗಣದಲ್ಲಿ ವಿಡಿಯೋ ಮಾಡಿರುವಂತಿದೆ. ನಾಲ್ಕು ಮಾದರಿಯ ಬೇರೆ ಬೇರೆ ವಿಡಿಯೋಗಳು ವೈರಲ್ ಆಗಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪಾವಂಜೆ ಮಹಾಲಿಂಗೇಶ್ವರ ಗಣಪತಿ ದೇವಸ್ಥಾನದಲ್ಲಿ ಈ ರೀತಿ ವಿಡಿಯೋ ಮಾಡಲಾಗಿದೆ ಎನ್ನಲಾಗುತ್ತಿದ್ದು ಸ್ಥಳೀಯ ಭಕ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೊಬ್ಬ ಯುವಕನಿಗೆ ಫೋನ್ ಮಾಡಿ, ಇನ್ಮುಂದೆ ದೇವಸ್ಥಾನಕ್ಕೆ ಕಾಲಿಟ್ಟಲ್ಲಿ ನಿನ್ನ ಕೈಕಾಲು ಮುರಿಯುತ್ತೇವೆ ಎಂದು ಧಮಕಿ ಹಾಕಿದ್ದಾನೆ. ನಾವು ಕೈಮುಗಿಯುವ ಜಾಗದಲ್ಲಿ ನೀನು ಈ ರೀತಿ ವಿಡಿಯೋ ಮಾಡಿದ್ದೀಯಲ್ಲಾ. ನಿನಗೆ ಯಾರು ಅವಕಾಶ ಕೊಟ್ಟಿದ್ದು ಎಂದು ಕೇಳಿದ್ದಾರೆ. ಅಲ್ಲಿನ ಅರ್ಚಕ ಭಟ್ರಿಗೆ ಹೇಳಿ, ಮಾಡಿದ್ದೇವೆ ಎಂದಿದ್ದಾನೆ. ಯಾರು ಆತ ಭಟ್ಟ, ನಿನಗೆ ಈ ರೀತಿ ವಿಡಿಯೋ ಮಾಡಲು ಹೇಳಿದ್ದು. ಬಾ, ದೇವಸ್ಥಾನಕ್ಕೆ ಬಂದು ಹೇಳು.. ನಾನು ವಿಡಿಯೋ ಡಿಲೀಟ್ ಮಾಡಿದ್ದೇನೆ ಎಂದು ಹುಡುಗ ಹೇಳಿದ್ದಕ್ಕೆ, ಅದು ಎಲ್ಲಾ ಗ್ರೂಪುಗಳಲ್ಲಿ ಬರ್ತಿದೆ. ನೀನು ಡಿಲೀಟ್ ಮಾಡೋದೇನು.. ನಿನ್ನ ಕೈಕಾಲು ತೆಗೀತೇನೆ ಎಂದು ಧಮ್ಕಿ ಹಾಕುವ ಆಡಿಯೋ ಕೂಡ ವೈರಲ್ ಆಗಿದ್ದು ಯುವಕನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಕೇಳಿಬಂದಿದೆ.
ಇದೇ ವೇಳೆ, ದೇವಸ್ಥಾನದ ವತಿಯಿಂದ ತಪ್ಪಿತಸ್ಥ ಯುವಕ ಮತ್ತು ಹುಡುಗಿಯರು ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಹುಡುಗ- ಹುಡುಗಿಯರ ಹುಚ್ಚಾಟಕ್ಕೆ ದೇವಸ್ಥಾನದ ಮರ್ಯಾದೆ ಹರಾಜು ಆಗುವಂತಾಗಿದೆ.
Video:
Mangalore Tiktok vidoe inside Pavanje temple haleangadi goes viral. Boy from Mulki and girls were seen acting inappropriately shooting their videos for Tiktok.
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
12-07-26 02:16 pm
HK News Staffer
ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ ; ತಾ...
11-07-26 08:40 pm
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm
ಮಾಜಿ ಸಾರಿಗೆ ಅಧಿಕಾರಿ ಮನೆಯಲ್ಲಿ ಕುಬೇರನ ಖಜಾನೆ ! ಗ...
10-07-26 10:14 pm