ಬ್ರೇಕಿಂಗ್ ನ್ಯೂಸ್
18-08-21 09:47 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 18: ದಕ್ಷಿಣ ಕನ್ನಡ ಜಿಲ್ಲೆಯ ಸಿದ್ದಕಟ್ಟೆ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಇಬ್ಬರು ಫಾದರ್ ಗಳು ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದಿದ್ದಾರೆ.
ಸಿದ್ದಕಟ್ಟೆ ಮೂಲದ ಫಾ. ಜೆರೋಮ್ ಸಿಕ್ವೇರಾ ಮತ್ತು ತೀರ್ಥಹಳ್ಳಿಯ ಫಾ.ಪಿ.ಆರ್. ರಾಬರ್ಟ್ ರೋಡ್ರಿಗಸ್ ತಾಲಿಬಾನಿಗಳ ನಡುವೆ ಸಿಕ್ಕಿಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಫಾ. ಜೆರೋಮ್ ತಾನು ಸದ್ಯಕ್ಕೆ ಸುರಕ್ಷಿತ ಸ್ಥಳದಲ್ಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ತಾಲಿಬಾನ್ ಅಟ್ಟಹಾಸದ ಹಿನ್ನೆಲೆಯಲ್ಲಿ ಅವರ ಜೀವದ ಬಗ್ಗೆ ಕುಟುಂಬಸ್ಥರು ಚಿಂತೆಗೆ ಒಳಗಾಗಿದ್ದಾರೆ.
ನಿರಾಶ್ರಿತರ ಪರವಾಗಿ ಕೆಲಸ ಮಾಡುವ ಅಂತಾರಾಷ್ಟ್ರೀಯ ಎನ್ ಜಿಓ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ಹೊಂದಿರುವ ಜೆರೋಮ್ ಸಿಕ್ವೇರಾ, ಕಳೆದ ಜನವರಿಯಿಂದ ರಾಜಧಾನಿ ಕಾಬೂಲ್ ನಲ್ಲಿ ಇದ್ದಾರೆ. ಕಾಬೂಲನ್ನು ತಾಲಿಬಾನಿ ಪಡೆಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಜೆರೋಮ್ ಸಿಕ್ವೇರಾ, ತನ್ನ ಸೋದರ ವಿನ್ಸೆಂಟ್ ಸಿಕ್ವೇರಾ ಜೊತೆ ಮಂಗಳವಾರ ಫೋನಲ್ಲಿ ಮಾತುಕತೆ ನಡೆಸಿದ್ದಾರೆ. ಕಾಬೂಲ್ ಏರ್ಪೋರ್ಟ್ ಬಳಿಯಲ್ಲೇ ಉಳಿದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ವಿನ್ಸೆಂಟ್ ಅವರು ಜೆಸೂಟ್ ವಲಯಾಧಿಕಾರಿ ಆಗಿರುವ ಕುಲಶೇಖರ ಮೂಲದ ಫಾ.ಜೆರೋಮ್ ಕುಟಿನ್ಹಾ ಜೊತೆ ಸಂಪರ್ಕದಲ್ಲಿದ್ದಾರೆ. ಕುಟಿನ್ಹಾ ಅವರು ಭಾರತದ ವಿದೇಶಾಂಗ ಇಲಾಖೆ ಮತ್ತು ಅಫ್ಘಾನಿಸ್ತಾನದ ರಾಯಭಾರ ಕಚೇರಿ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿಯನ್ನು ವಿನ್ಸೆಂಟ್ ಹಂಚಿಕೊಂಡಿದ್ದಾರೆ.
ಬ್ರದರ್ ಕೇವಲ ಒಂದು ನಿಮಿಷ ಮಾತನಾಡಿದ್ದು, ಕರೆ ಕಟ್ ಮಾಡಿದ್ದಾರೆ. ಅಲ್ಲಿನ ಸ್ಥಿತಿ ತೀರಾ ಹದಗೆಟ್ಟಿದ್ದಾಗಿ ತಿಳಿಸಿದ್ದಾರೆ. ಆದರೆ, ಭಯಪಡುವ ಅಗತ್ಯವಿಲ್ಲ ಎಂದಿದ್ದಾಗಿ ವಿನ್ಸೆಂಟ್ ತಿಳಿಸಿದ್ದಾರೆ.
ತೀರ್ಥಹಳ್ಳಿಯ ರಾಬರ್ಟ್, ಅಫ್ಘಾನಿಸ್ತಾನದ ಮಧ್ಯ ಪ್ರಾಂತದ ರಾಜಧಾನಿ ಬಾಮಿಯಾನಲ್ಲಿದ್ದಾರೆ. ರಾಬರ್ಟ್ ಅಲ್ಲಿನ ಸ್ಥಿತಿಯ ಬಗ್ಗೆ ತುಂಬ ಆತಂಕ ವ್ಯಕ್ತಪಡಿಸಿದ್ದು ತಮ್ಮ ಮತ್ತು ಜೊತೆಗಿರುವ ಸಿಬಂದಿಯ ಸುರಕ್ಷತೆ ಬಗ್ಗೆ ನಿಗಾ ವಹಿಸಿದ್ದಾಗಿ ತಿಳಿಸಿದ್ದಾರೆ.
ಫಾದರ್ ಜೆರೋಮ್ ಮೊನ್ನೆ ಭಾನುವಾರ ಬೆಳಗ್ಗೆ ಕಾಬೂಲ್ ಏರ್ಪೋರ್ಟ್ ಬಂದಿದ್ದರು. ಅಷ್ಟರಲ್ಲಿ ತಾಲಿಬಾನ್ ಪಡೆ ಮುತ್ತಿಕೊಂಡಿದ್ದು ಏರ್ಪೋರ್ಟ್ ಆವರಣದಲ್ಲಿ ಬಾಕಿಯಾಗಿದ್ದರು. ರಸ್ತೆಯಲ್ಲಿ ವಾಹನಗಳು ರಾಶಿ ಬಿದ್ದುದರಿಂದ ಅದರ ಎಡೆಯಲ್ಲಿ ಲಗ್ಗೇಜ್ ಬ್ಯಾಗನ್ನು ತಳ್ಳಿಕೊಂಡೇ ಬಂದಿದ್ದೆ. ಸಾವಿರಾರು ಜನರು ವಿಮಾನದಲ್ಲಿ ಹಾರಿ ಹೋಗಲು ಯತ್ನಿಸುತ್ತಿದ್ದರು. ತಾಲಿಬಾನ್ ಪಡೆ ಗಾಳಿಯಲ್ಲಿ ಗುಂಡು ಹಾರಿಸುತ್ತಾ ಜನರನ್ನು ನಿಯಂತ್ರಣಕ್ಕೆ ತರಲು ಯತ್ನಿಸುತ್ತಿದ್ದರು. ಆದರೆ ಜನರು ಯಾವುದನ್ನೂ ಕೇಳುವಂತಿರಲಿಲ್ಲ. ಸೆಕ್ಯುರಿಟಿ, ಬೋರ್ಡಿಂಗ್ ಪಾಸ್ ಯಾವುದನ್ನೂ ಲೆಕ್ಕಿಸದೆ ನುಗ್ಗಿ ಬರುತ್ತಿದ್ದರು. ಎದೆ ನಡುಗಿಸುವ ಸನ್ನಿವೇಶ ಅದಾಗಿತ್ತು ಎಂದು ಜೆರೋಮ್ ಸ್ಮರಿಸಿದರು.
ಫಾದರ್ ರಾಬರ್ಟ್ ಕೂಡ ಶನಿವಾರ ಬಾಮಿಯಾನ್ ಏರ್ಪೋರ್ಟ್ ತೆರಳಿದ್ದರು. ಅಮೆರಿಕದ ವಿಮಾನಕ್ಕಾಗಿ ಕಾಯುತ್ತಿದ್ದರು. ಅಷ್ಟರಲ್ಲಿ ತಾಲಿಬಾನ್ ಆಕ್ರಮಿಸಿದ್ದು ಭದ್ರತಾ ಪಡೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದೆ. ಅಲ್ಲಿಂದ ಕಾಬೂಲ್ ತಲುಪಲು ಕೇವಲ 25 ನಿಮಿಷದ ದಾರಿ. ಅಮೆರಿಕದ ಸೇನಾಪಡೆ ಮೂಲಕ ಅಲ್ಲಿಂದ ಪಾರಾಗಿ ಬರಲು ಯತ್ನಿಸುತ್ತಿದ್ದೇನೆ ಎಂದು ರಾಬರ್ಟ್ ಹೇಳಿದ್ದಾರೆ.
Two Jesuit priests, Fr Jerome Sequeira from Siddakkate near Mangaluru, and Fr P Robert Rodrigues from Thirthahalli, Shivamogga district, are stranded in strife-ridden Afghanistan. Though Fr Jerome, in an SOS message on Tuesday, said they are safe at the moment, their families back home are worried for their lives, given the horrific situation in the country, which was taken over by the Taliban. Fr Jerome Sequeira, working as head in-charge of Jesuit Refugee Services (JRS), an international NGO, in Kabul since January 2021, spoke to his brother Vincent Sequeira over phone on Tuesday morning, and said he is staying in a place near Kabul airport.
07-08-25 10:18 pm
Bangalore Correspondent
ಧರ್ಮಸ್ಥಳ ಘರ್ಷಣೆ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ, ಎ...
07-08-25 05:50 pm
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
07-08-25 10:02 pm
HK News Desk
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
07-08-25 07:55 pm
Mangalore Correspondent
Dharmasthala, Attack on YouTubers: ಯೂಟ್ಯೂಬರ್...
07-08-25 03:26 pm
Dharmasthala Temple, NIA, Bomb: ಕುಕ್ಕರ್ ಬಾಂಬ್...
07-08-25 11:19 am
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
07-08-25 08:59 pm
Bangalore Correspondent
Kudla Rampage Attack, Ajay Anchan, Dharmastha...
06-08-25 08:02 pm
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am