ಬ್ರೇಕಿಂಗ್ ನ್ಯೂಸ್
18-08-21 05:03 pm Mangaluru Correspondent ಕರಾವಳಿ
ಬಂಟ್ವಾಳ, ಆಗಸ್ಟ್ 18: ದೇಶ ಸುತ್ತಬೇಕು ಅನ್ನೋ ಬಯಕೆ ಹಲವರಿಗೆ ಇರುತ್ತೆ. ಲಡಾಖ್ ನೋಡಬೇಕು, ಕಾಶ್ಮೀರ ಹೋಗಬೇಕು, ಹಿಮಾಲಯ ಕಣ್ತುಂಬಿಕೊಳ್ಳಬೇಕು ಅನ್ನೋ ಆಸೆಯೂ ಇರತ್ತೆ. ಇದಕ್ಕಾಗಿ ಕೆಲವರು ಬೈಕಲ್ಲಿ ಹೊರಟರೆ, ಇನ್ನು ಕೆಲವರು ಸೈಕಲಲ್ಲಿ ತೆರಳುತ್ತಾರೆ. ಆದರೆ ಇಬ್ಬರು ಯುವಕರು ಕಾಲ್ನಡಿಗೆಯಲ್ಲೇ ಈ ಸಾಧನೆ ಮಾಡೋಕೆ ಹೊರಟಿದ್ದಾರೆ.
ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಮೆಹತಾಬ್ (21) ಮತ್ತು ಬಿಲಾಲ್ (18) ಎಂಬ ಯುವಕರೇ ಕಾಶ್ಮೀರಕ್ಕೆ ಕಾಲ್ನಡಿಗೆಯಲ್ಲಿ ಹೊರಟವರು. ಆಗಸ್ಟ್ 16ರಂದು ಪಜೀರು ಗ್ರಾಮದ ತಮ್ಮ ಮನೆಯಿಂದ ಪಾದಯಾತ್ರೆ ಆರಂಭಿಸಿದ್ದಾರೆ.
ಮೆಹತಾಬ್ ಮತ್ತು ಬಿಲಾಲ್ ಸೋದರ ಸಂಬಂಧಿಗಳಾಗಿದ್ದು, ಜಂಟಿಯಾಗಿ ಸಾಧನೆ ಹೊರಟಿದ್ದಾರೆ. ಮೆಹತಾಬ್ ಪ್ರಥಮ ಪಿಯುಸಿ ವರೆಗೆ ವ್ಯಾಸಂಗ ಮಾಡಿದ್ದು, ಬಂಟ್ವಾಳದ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಉನ್ನತ ಶಿಕ್ಷಣ ಮಾಡುವ ಗುರಿಯನ್ನೂ ಮೆಹತಾಬ್ ಹೊಂದಿದ್ದಾರೆ.

ಕಡಿಮೆ ಖರ್ಚಿನಲ್ಲಿ ಸಾಧನೆಯ ಹಾದಿ ತುಳಿದ ಯುವಕರು
ಲಾಕ್ಡೌನ್ ವೇಳೆ ಮನೆಯಲ್ಲೇ ಇದ್ದ ಮೆಹತಾಬ್ ಈ ಬಗ್ಗೆ ಯೋಚನೆ ಮಾಡಿದ್ದರು. ದೊಡ್ಡ ಖರ್ಚು ಭರಿಸಿ ಸಾಧನೆ ಮಾಡುವಷ್ಟು ಆರ್ಥಿಕವಾಗಿ ಸಶಕ್ತರಾಗಿಲ್ಲದ ಕಾರಣ, ಕಡಿಮೆ ಖರ್ಚಿನಲ್ಲಿ ಮಹತ್ತರ ಸಾಧನೆ ಮಾಡುವ ನಿರ್ಧಾರ ಕೈಗೊಂಡರು. ಕಾಲ್ನಡಿಗೆಯಲ್ಲೇ ಕಾಶ್ಮೀರಕ್ಕೆ ಹೋಗಬೇಕೆಂದು ಗುರಿ ಇರಿಸಿಕೊಂಡ ಮೆಹತಾಬ್‌ಗೆ ಸಹೋದರ ಸಂಬಂಧಿ ಬಿಲಾಲ್ ಸಾಥ್ ನೀಡಿದ್ದಾರೆ. ಇಬ್ಬರು ಜಂಟಿಯಾಗಿ ಸುಮಾರು ನಾಲ್ಕು ತಿಂಗಳ ಕಾಲ ನಿರಂತರ ನಡೆಯುವ ಯೋಜನೆ ಹಾಕಿದ್ದಾರೆ. ಕಾಲ್ನಡಿಗೆಯಲ್ಲಿ ಕಾಶ್ನೀರಕ್ಕೆ ಹೋಗಲು ದಿನ, ಸಮಯ, ಖರ್ಚು, ವಿಶ್ರಾಂತಿ ಎದುರಾಗುವ ಸವಾಲುಗಳ ಬಗ್ಗೆ ಸಾಕಷ್ಟು ಯೋಜನೆ ಮಾಡಿದ್ದಾರೆ.
ಸುದೀರ್ಘ 2800 ಕಿಲೋಮೀಟರ್ ಕಾಲ್ನಡಿಗೆ !
ಬಂಟ್ವಾಳದ ಪಜೀರು ಗ್ರಾಮದಿಂದ ಕಾಶ್ಮೀರಕ್ಕೆ ಸುಮಾರು 2800 ಕಿಲೋ ಮೀಟರ್ ದೂರ ಇದ್ದು ಕಾಲ್ನಡಿಗೆಯಲ್ಲೇ ಕ್ರಮಿಸಲು ಉದ್ದೇಶ ಇರಿಸಿದ್ದಾರೆ. ಸುಮಾರು 90 ದಿನಗಳ ಯೋಜನೆ ಹಾಕಿದ್ದಾರೆ.
ಪ್ರತಿದಿನ 50 ರಿಂದ 70 ಕಿ.ಮೀ. ಕ್ರಮಿಸುವ ಗುರಿ ಇರಿಸಿದ್ದಾರೆ. ಪಾದಯಾತ್ರೆ ವೇಳೆ ದಾರಿಯಲ್ಲಿ ಸಿಗುವ ಐತಿಹಾಸಿಕ ಸ್ಥಳಗಳಿಗೆ ತೆರಳಿ ಅಧ್ಯಯನ ಮಾಡುವ ಯೋಚನೆ ಕೂಡ ಮೆಹತಾಬ್ ಮತ್ತು ಬಿಲಾಲ್‌ಗೆ ಇದೆ. ದಾರಿಯಲ್ಲಿ ಸಿಗುವ ಮಂದಿರ, ಮಸೀದಿ ಮತ್ತು ಚರ್ಚ್ ಗಳಿಗೆ ಭೇಟಿ ನೀಡಿ ಅಲ್ಲಿನ ವಿಶೇಷತೆ ಬಗ್ಗೆ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಹಾಕಲಿದ್ದಾರೆ.
ಪಾದಯಾತ್ರೆ ವೇಳೆ ರಾತ್ರಿ ತಂಗಲು ಟೆಂಟ್ ವ್ಯವಸ್ಥೆಯನ್ನೂ ಮೆಹತಾಬ್ ಮತ್ತು ಬಿಲಾಲ್ ಮಾಡಿದ್ದಾರೆ. ಟೆಂಟ್ ವ್ಯವಸ್ಥೆ ಮಾಡಲಾಗದ ಸಂದರ್ಭದಲ್ಲಿ ಪೆಟ್ರೋಲ್ ಪಂಪ್ ಗಳಲ್ಲಿ ವಾಸ್ತವ್ಯ ಮಾಡಿ, ವಿಶ್ರಾಂತಿ ಪಡೆದು ಮುಂಜಾನೆ ಮತ್ತೆ ಪಾದಯಾತ್ರೆ ಮುಂದುವರಿಸಲಿದ್ದಾರೆ.
35 ಸಾವಿರ ರೂ. ವೆಚ್ಚದ ಗುರಿ
ಒಬ್ಬರಿಗೆ ದಿನಕ್ಕೆ 350 ರೂಪಾಯಿಯಂತೆ 90 ದಿನಗಳಿಗೆ ಒಟ್ಟು 35,000 ರೂಪಾಯಿ ವೆಚ್ಚ ಬೇಕಾಗಬಹುದೆಂದು ಯೋಜನೆ ಇದೆ. ಇದಕ್ಕಾಗಿ ಇಬ್ಬರೂ ದುಡಿದು ಕೂಡಿಟ್ಟ ಹಣ ಮತ್ತು ಗೆಳೆಯರು ನೀಡಿದ ಸಹಾಯವನ್ನು ಒಟ್ಟುಗೂಡಿಸಿದ್ದಾರೆ. 90 ದಿನಗಳ ಪರ್ಯಂತ ಪಾದಯಾತ್ರೆ ಮಾಡಿ ಕಾಶ್ಮೀರ ತಲುಪುವ ಗುರಿ ಇರಿಸಿದ್ದು ಮರಳಿ ಬರುವಾಗ ರೈಲಿನಲ್ಲಿ ಊರು ಸೇರಲಿದ್ದಾರೆ.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm