ಬ್ರೇಕಿಂಗ್ ನ್ಯೂಸ್
15-08-21 04:37 pm Mangaluru Correspondent ಕರಾವಳಿ
ಉಳ್ಳಾಲ, ಆ.15: 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶದ 75 ಸ್ವಾತಂತ್ರ್ಯ ಹೋರಾಟಗಾರ್ತಿಯರಿಗೆ ಬಿಜೆಪಿ ಮಹಿಳಾ ಮೋರ್ಚಾದಿಂದ ಗೌರವ ಸಮರ್ಪಣೆಯ ಸಲುವಾಗಿ, ಉಳ್ಳಾಲದ ವೀರರಾಣಿ ಅಬ್ಬಕ್ಕಳಿಗೆ ಇಂದು ಗೌರವ ಸಲ್ಲಿಸಲಾಯಿತು.
75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಮಹಿಳಾಮೋರ್ಚಾವು ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಅಮೃತ ಹಬ್ಬದ ರೀತಿಯಲ್ಲಿ ಆಚರಿಸಿದ್ದು ದೇಶಾದ್ಯಂತ 75 ಕಡೆಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಮಹಿಳೆಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ್ದು, ಕರ್ನಾಟಕ ರಾಜ್ಯದಲ್ಲೂ 3 ಕಡೆಗಳಲ್ಲಿ ವೀರ ವನಿತೆಯರಿಗೆ ಗೌರವ ಸೂಚಿಸಿದೆ. ಆ ಪ್ರಯುಕ್ತ ಪೋರ್ಚುಗೀಸರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದ ಉಳ್ಳಾಲದ ವೀರರಾಣಿ ಅಬ್ಬಕ್ಕಳಿಗೆ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರು ಉಳ್ಳಾಲದ ವೃತ್ತದಲ್ಲಿರುವ ರಾಣಿ ಅಬ್ಬಕ್ಕಳ ಪ್ರತಿಮೆಗೆ ಹಾರಾರ್ಪಣೆ ಮಾಡಿ ಗೌರವ ವಂದನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ಮೂಡಬಿದಿರೆಗೂ ಅಬ್ಬಕ್ಕನಿಗೂ ಹತ್ತಿರದ ನಂಟಿದೆ. ಬಂಗರಸು ಮಡದಿಯಾಗಿ ಉಳ್ಳಾಲದಲ್ಲಿ ಅಧಿಪತ್ಯ ವಹಿಸಿ ಜನಪರ ಆಡಳಿತ ನೀಡಿದ ವೀರ ಮಹಿಳೆ ಅಬ್ಬಕ್ಕ ಎಂದರು. ಪೋರ್ಚುಗೀಸರು ನಮ್ಮ ಊರಿನ ಮೂಲ ಸಾಂಬಾರ ಬೆಳೆ ಕಾಳು ಮೆಣಸನ್ನು ಹೇರಳವಾಗಿ ರಫ್ತು ಮಾಡಿ ನಮ್ಮ ದೇಶಕ್ಕೆ ಪೋರ್ಚುಗೀಸರ ಕೊಡುಗೆಯಾದ ಕೆಂಪು ಮೆಣಸನ್ನ ಸರಬರಾಜು ಮಾಡುತ್ತಿದ್ದ ಕಾಲದಲ್ಲಿ ಕಾಳು ಮೆಣಸಿನ ವ್ಯಾಪಾರವನ್ನ ಸಮರ್ಥವಾಗಿ ನಿರ್ವಹಿಸಿದ ಅಬ್ಬಕ್ಕ ಕಾಳು ಮೆಣಸಿನ ರಾಣಿ ಎಂದೇ ಹೆಸರು ವಾಸಿಯಾಗಿದ್ದರು. ಪೋರ್ಚುಗೀಸರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದ ಅಬ್ಬಕ್ಕ ಕೊನೆಗೂ ತನ್ನ ಅಳಿಯನ ಕುತಂತ್ರದಿಂದಲೇ ವೀರ ಮರಣವನ್ನಪ್ಪಿದ್ದರು. ಇದುವರೆಗೆ ಕೇವಲ ನಾಲ್ಕೈದು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನ ಇತಿಹಾಸದಲ್ಲಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಬರೀ ಉಪವಾಸ ಸತ್ಯಾಗ್ರಹ, ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಬದಲಾಗಿ ಅಬ್ಬಕ್ಕಳಂತಹ ಎಷ್ಟೋ ದೇಶ ಪ್ರೇಮಿಗಳ ಬಲಿದಾನದ ಫಲವಾಗಿ ದೇಶ ಸ್ವತಂತ್ರಗೊಂಡಿದೆ ಎಂದು ಅವರು ಹೇಳಿದರು.

ಉಳ್ಳಾಲದ ಅಬ್ಬಕ್ಕ ಪ್ರತಿಮೆಯ ರೂವಾರಿ ಸೀತಾರಾಮ ಬಂಗೇರ, ಪ್ರತಿಮೆಯ ಅಲಂಕಾರ ಮಾಡುವ ಧನಂಜಯ್, ನಿವೃತ್ತ ಶಿಕ್ಷಕಿ ಶ್ರೀಮತಿ ಜಾನಕಿ ಪುತ್ರನ್ ಅವರನ್ನ ಅಭಿನಂದಿಸಲಾಯಿತು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ದ.ಕ ಜಿಲ್ಲಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಜಿಲ್ಲಾ ಪ್ರ.ಕಾ. ಕಸ್ತೂರಿ ಪಂಜ, ರಾಜ್ಯ ಮಹಿಳಾ ಮೋರ್ಚಾ ಪ್ರಮುಖರಾದ ಭಾಗೀರಥಿ, ಜಿಲ್ಲಾ ಪ್ರಮುಖರಾದ ಪೂಜಾ ಪೈ, ಜಯಂತಿ, ಪೂರ್ಣಿಮ ಶೆಟ್ಟಿ, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು , ಕ್ಷೇತ್ರಾಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್, ಪ್ರಮುಖರಾದ ಹೇಮಂತ್ ಶೆಟ್ಟಿ, ಯಶವಂತ್ ಅಮೀನ್ ಮೊದಲಾದವರು ಇದ್ದರು.
Woman mark respect to Rani Abbakka Chowta in Ullal on Independence Day 2021. Abbakka Chowta, the Queen of Ullal, was amongst the first female rulers to fight a fierce war to safeguard her kingdom from European invaders -- in her case the Portuguese. Her story dates back to 1555.
09-11-25 03:47 pm
Bangalore Correspondent
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm