ಬ್ರೇಕಿಂಗ್ ನ್ಯೂಸ್
10-08-21 03:19 pm Mangaluru Correspondent ಕರಾವಳಿ
ಕೊಣಾಜೆ, ಆ.10: ಹೊಸ ರಾಷ್ಟ್ರೀಯ ಶಿಕ್ಷಣ(NEP) ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೊಳಿಸುತ್ತಿರುವುದನ್ನ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪದವಿ ಕಲಿಕಾ ವ್ಯವಸ್ಥೆ ಜಾರಿಗೊಳಿಸುವ ತೀರ್ಮಾನವನ್ನು ಉಪ ಕುಲಪತಿಗಳು ಕೈಗೊಂಡಿದ್ದು ಇದನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿದ್ಯಾರ್ಥಿಗಳಿಂದು ಪ್ರತಿಭಟನಾ ಜಾಥಾ ನಡೆಸಿ ಕೊಣಾಜೆಯ ಮಂಗಳೂರು ವಿ.ವಿ ಕ್ಯಾಂಪಸ್ನ ಆಡಳಿತ ಸೌಧಕ್ಕೆ ಏಕಾ ಏಕಿ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಕೋವಿಡ್ ನಿಬಂಧನೆಗಳು ಜಾರಿಯಲ್ಲಿರುವುದರಿಂದ ಕೊಣಾಜೆ ಪೊಲೀಸರು ಜಾಥಾ ಮತ್ತು ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ. ಮಂಗಳೂರು ವಿವಿ ಉಪ ಕುಲಪತಿಗಳಿಗೆ ಮನವಿ ನೀಡಲಷ್ಟೆ ಮೌಖಿಕ ಅವಕಾಶ ಕಲ್ಪಿಸಿದ್ದರು.
ಆದರೆ ಇಂದು ವಿವಿ ಕ್ಯಾಂಪಸಲ್ಲಿ ಬಂದೋಬಸ್ತಲ್ಲಿದ್ದ ಪೊಲೀಸರ ಗಮನಕ್ಕೆ ಬಾರದಂತೆ ಏಕಾಏಕಿ ಕ್ಯಾಂಪಸ್ ಫ್ರಂಟಿನ ಸುಮಾರು 300 ಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿ ವಿ.ವಿ ಕ್ಯಾಂಪಸ್ ಹಾಸ್ಟೆಲ್ ನಿಂದ ಆಡಳಿತ ಸೌಧದವರೆಗೆ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬೃಹತ್ ಜಾಥಾ ನಡೆಸಿದ್ದಾರೆ. ಊಹೆಗೆ ಮೀರಿದ ಪ್ರತಿಭಟನಾಕಾರರು ಸೇರಿದನ್ನು ಕಂಡು ಬೆರಳೆಣೆಕೆಯಲ್ಲಿದ್ದ ಕೊಣಾಜೆ ಪೊಲೀಸರು ವಿಚಲಿತಗೊಂಡು ಕೂಡಲೇ ಹೆಚ್ಚಿನ ಪೊಲೀಸರ ನಿಯೋಜನೆಗೆ ಮಾಹಿತಿ ನೀಡಿದ್ದಾರೆ.
ಪ್ರತಿಭಟನೆಯನ್ನ ಹತೋಟಿಗೆ ತಂದ ಪಿಎಸ್ಐ
ಆಡಳಿತ ಸೌಧಕ್ಕೆ ಜಾಥಾದಲ್ಲಿ ಬಂದ ನೂರಾರು ಪ್ರತಿಭಟನಾಕಾರರು ಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮುಂದುವರೆಯುವುದನ್ನ ತಡೆದ ಕೊಣಾಜೆ ಪಿ.ಎಸ್.ಐ ಮಲ್ಲಿಕಾರ್ಜುನ ಬಿರಾದರ್ ಅವರು ಉಪ ಕುಲಪತಿಗಳು ಊರಲಿಲ್ಲ. ಕುಲಸಚಿವರನ್ನ ಕೇವಲ ಮೂವರು ಮುಖಂಡರು ಮಾತ್ರ ಭೇಟಿ ಮಾಡಿ ಮನವಿ ಸಲ್ಲಿಸಬಹುದು. ಕೋವಿಡ್ ನಿಯಮ ಉಲ್ಲಂಘಿಸಿದಲ್ಲಿ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಮುಖಂಡರಿಗೆ ಎಚ್ಚರಿಸಿದ್ದಾರೆ. ಅಲ್ಲದೆ, ಪ್ರತಿಭಟನಾಕಾರರು ಅನುಮತಿ ಇಲ್ಲದೆ ಬಳಸುತ್ತಿದ್ದ ಧ್ವನಿವರ್ಧಕವನ್ನೂ ಬಂದ್ ಮಾಡಿಸಿದ್ದಾರೆ. ಕಡೆಗೆ ಸ್ಥಳಕ್ಕೆ ಬಂದ ಮಂಗಳೂರು ವಿ.ವಿ. ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ ಅವರಲ್ಲಿ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ CFI ರಾಜ್ಯ ಕಾರ್ಯದರ್ಶಿ ಸವಾದ್ ಕಲ್ಲರ್ಪೆ ಮಾತನಾಡಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಲೋಕಸಭೆಯಲ್ಲಿ ಹಾಗೂ ವಿಧಾನಸಭೆಯಲ್ಲಿ ಚರ್ಚಿಸದೆ ತರಾತುರಿಯಲ್ಲಿ ಹಿಂಬದಿ ಬಾಗಿಲಿನ ಮುಖಾಂತರ ಜಾರಿಗೆ ತರಲಾಗಿದೆ. ಅದರಲ್ಲೂ ಮಂಗಳೂರು ವಿವಿಯಲ್ಲಿ ಕನ್ನಡ ಸುದ್ದಿ ಮಾಧ್ಯಮಗಳ ರೀತಿಯಲ್ಲಿ ನಮ್ಮಲ್ಲೇ ಫಸ್ಟ್ ಎಂದು ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಮುಂದಾಗಿರುವುದು ಖಂಡನೀಯ. ಖಾಸಗೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮತ್ತು ಮಧ್ಯಮ ಯುಗದ ಇತಿಹಾಸಗಳನ್ನು ಮರೆಮಾಚಿ, ಪ್ರಾಚೀನ ಸಂಸ್ಕೃತಿಯನ್ನು ಪ್ರತಿಬಿಂಬಿಸಿ ಕೇಸರೀಕರಣಕ್ಕೆ ಒತ್ತು ನೀಡುತ್ತಿರುವ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಸರಕಾರಿ ಕಾಲೇಜು, ಶಾಲೆಗಳು ಮುಚ್ಚಲ್ಪಡುತ್ತಿವೆ. ಅದನ್ನು ಉನ್ನತೀಕರಣಗೊಳಿಸದ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಹಿಂದುತ್ವದ ಅಜೆಂಡಾದ NEP ನೀತಿ ಜಾರಿಗೊಳಿಸಲು ತರಾತುರಿಯ ಉತ್ಸಾಹವೇಕೆಂದು ಪ್ರಶ್ನಿಸಿದರು.
ಈ ನೀತಿ ಜಾರಿಗೊಳಿಸಿದಲ್ಲಿ ಮುಂದಿನ ಪೀಳಿಗೆಯ ಮಕ್ಕಳಿಗೆ ಯಾವುದೋ ಗುಜರಾತಿ, ಮರಾಠರ ಬಗ್ಗೆ ಕಲಿಯುವ ದುಃಸ್ಥಿತಿ ಬರಬಹುದೆಂದರು. ಈ ನೀತಿಯನ್ನು ರಾಜ್ಯದಲ್ಲಿ ಜಾರಿಯಾಗದಂತೆ ತಕ್ಷಣ ತಡೆ ಹಿಡಿಯದಿದ್ದಲ್ಲಿ CFI ಸಂಘಟನೆಯ ಧ್ವಜಗಳು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣರ ಮನೆ, ಕಚೇರಿಗಳ ಮುಂದೆ ಹಾರಲಿರುವುದೆಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಪ್ಯುಲರ್ ಫ್ರಂಟ್ ನ ನಗರ ಅಧ್ಯಕ್ಷ ಇನಾಯತ್ ಆಲಿ, ಕಾರ್ಯದರ್ಶಿ ಬದ್ರು ಮುನೀರ್, ಪ್ರಮುಖರಾದ ಹಸನ್ ಸಿರಾಜ್, ಸರ್ಪುದ್ಧೀನ್ ಮೊದಲಾವರು ಪ್ರತಿಭಟನೆಯಲ್ಲಿದ್ದರು.
Students wing in Karnataka demand details of NEP Campus front of India protest at Mangalore university police intervene
07-08-25 10:18 pm
Bangalore Correspondent
ಧರ್ಮಸ್ಥಳ ಘರ್ಷಣೆ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ, ಎ...
07-08-25 05:50 pm
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
07-08-25 10:02 pm
HK News Desk
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
07-08-25 11:01 pm
Mangalore Correspondent
ಉಳ್ಳಾಲದಲ್ಲಿ ನಿಯಂತ್ರಣ ತಪ್ಪಿ ಆವರಣ ಗೋಡೆಗೆ ಬಡಿದ ಸ...
07-08-25 10:45 pm
ಧರ್ಮಸ್ಥಳ ; 13ನೇ ಪಾಯಿಂಟ್ ಬಗ್ಗೆ ಕುತೂಹಲ, ಅಸ್ಥಿ ಪ...
07-08-25 10:29 pm
Surathkal-Nanthoor highway: ಇಂದಿನಿಂದ ಆ.13ರ ವರ...
07-08-25 07:55 pm
Dharmasthala, Attack on YouTubers: ಯೂಟ್ಯೂಬರ್...
07-08-25 03:26 pm
07-08-25 08:59 pm
Bangalore Correspondent
Kudla Rampage Attack, Ajay Anchan, Dharmastha...
06-08-25 08:02 pm
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am