ಬ್ರೇಕಿಂಗ್ ನ್ಯೂಸ್
29-07-21 02:36 pm Mangaluru Correspondent ಕರಾವಳಿ
ಉಳ್ಳಾಲ, ಜು.29: ಅಂಬ್ಲಮೊಗರು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಸಹಾಯಕರಾಗಿರುವ ನಿತಿನ್ ಶೆಟ್ಟಿ (ಉಗ್ರಾಣಿ) ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಅಂಬ್ಲಮೊಗರುವಿನ ಪ್ರತಿಷ್ಟಿತ ಪಡ್ಯಾರ ಮನೆ ಗುತ್ತಿನ ನಿತಿನ್ ಶೆಟ್ಟಿ (34) ಆತ್ಮಹತ್ಯೆಗೈದ ದುರ್ದೈವಿ. ತನ್ನ ನಿವಾಸದ ಮೇಲ್ಮಹಡಿಯ ಬೆಡ್ ರೂಮಿನಲ್ಲಿ ನಿತಿನ್ ಶೆಟ್ಟಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ನಿತಿನ್ ಅವರು ಅಂಬ್ಲಮೊಗರು ಗ್ರಾಮ ಪಂಚಾಯತಿನಲ್ಲಿ ಗ್ರಾಮಕರಣಿಕರ ಸಹಾಯಕರಾಗಿದ್ದರು. ಸರಳ ಸಜ್ಜನ ವ್ಯಕ್ತಿತ್ವದವರಾಗಿದ್ದ ನಿತಿನ್ ಅವರು ಸ್ಥಳೀಯ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮೂರು ವರ್ಷದ ಹಿಂದಷ್ಟೆ ಮದುವೆಯಾಗಿದ್ದು ಇಂದು ಬೆಳಗ್ಗೆ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಕುತ್ತಾರಿನ ವರೆಗೆ ಕೆಲಸಕ್ಕೆ ಬಿಟ್ಟು ಬಂದಿದ್ದರು. ನಂತರ ಮನೆಗೆ ತೆರಳಿದ ನಿತಿನ್ ಮೇಲ್ಮಹಡಿಯ ಬೆಡ್ ರೂಮಿನೊಳಗೆ ಹೋಗಿದ್ದರೆನ್ನಲಾಗಿದೆ. ಬೆಳಗ್ಗೆ 9.30 ಆದರೂ ಮಗ ಚಹಾ ಕುಡಿಯಲು ಏಕೆ ಬಂದಿಲ್ಲವೆಂದು ತಾಯಿ ರೂಮಿನೊಳಗೆ ಹೋದಾಗ ಆತಹತ್ಯೆ ವಿಚಾರ ಬೆಳಕಿಗೆ ಬಂದಿದೆ. ನಿತಿನ್ ಅವರು ನೆಲೆಸಿದ್ದ ಮನೆಯ ಕೆಳ ಅಂತಸ್ತಿನಲ್ಲಿ ಅಣ್ಣ , ಅತ್ತಿಗೆ ಅವರ ಎರಡು ಮಕ್ಕಳು ವಾಸವಿದ್ದರು. ಮೃತ ನಿತಿನ್ ಅವರು ತಾಯಿ, ಪತ್ನಿ, ಮೂರು ಸಹೋದರರನ್ನ ಅಗಲಿದ್ದಾರೆ. ಕೊಣಾಜೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.

ಎರಡು ವರುಷದ ಹಿಂದೆ ತಂದೆಯ ದಾರುಣ ಸಾವು ;
ಎರಡು ವರುಷದ ಹಿಂದಷ್ಟೆ ನಿತಿನ್ ಶೆಟ್ಟಿ ಅವರ ತಂದೆ ದಯಾನಂದ ಶೆಟ್ಟಿ ಅವರು ಸೀಯಾಳ ಕೊಯ್ಯಲೆಂದು ತೆಂಗಿನ ಮರಕ್ಕೆ ಏರಿ ಮರದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದರು. ಇದೀಗ ದಯಾನಂದ ಶೆಟ್ಟಿ ಅವರ ಮಗನಾದ ನಿತಿನ್ ಆತ್ಮಹತ್ಯೆಗೈದಿದ್ದು ಕುಟುಂಬಸ್ಥರು, ಸ್ನೇಹಿತ ವರ್ಗದವರನ್ನು ದುಃಖ ತಪ್ತರನ್ನಾಗಿಸಿದೆ.
Mangalore Amblamogaru Panchayat revenue worker commits suicide at his house. The deceased has been identified as Nithin Shetty (34). The reason for this extreme step is yet to be known. The Konaje police are investigating the case.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am