ಬ್ರೇಕಿಂಗ್ ನ್ಯೂಸ್
19-07-21 11:22 pm Mangaluru Correspondent ಕರಾವಳಿ
ಉಳ್ಳಾಲ, ಜು.18: ದೈವಾರಾಧನೆಗೆ ಅಗತ್ಯವುಳ್ಳ ಹೂವುಗಳಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿರುವ ನಾಟಿ ಕೇಪುಳ ಅಳಿವಿನಂಚಿನಲ್ಲಿದೆ. ಕೇಪುಳ ಹೂವಿನ ವೃದ್ಧಿಗಾಗಿ ತೊಕ್ಕೊಟ್ಟಿನ ಸಾಯಿ ಪರಿವಾರ್ ಟ್ರಸ್ಟ್ ನಿಂದ ಉಳ್ಳಾಲದಲ್ಲಿ ಕೇಪುಳ ಹೂವಿನ ತೋಟ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಉಳ್ಳಾಲ ಬಂಡಿಕೊಟ್ಯದ ಮಲರಾಯ ದೈವಸ್ಥಾನದಲ್ಲಿ ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ನಿಂದ ಕೇಪುಳ ತೋಟದ ನಿರ್ಮಾಣ ಯೋಜನೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್ ಸಾರ್ ಚಾಲನೆ ನೀಡಿದರು.


ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ತುಳುನಾಡಿನ ದೈವಗಳಿಗೆ ನಾಟಿ ಕೇಪುಳ, ತೋಡಿನ ನೀರು, ತೋಟದ ಹಾಲೆ ಅತಿ ಪ್ರಾಮುಖ್ಯ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ತುಳುನಾಡಿನ ದೈವಾರಾಧನೆಯಲ್ಲಿ ಕೇಪುಳ ಮೇಲ್ಪಂಕ್ತಿ ಹೊಂದಿದೆ. ಕೇಪುಳ ಹೂವುಗಳ ಅಭಾವದಲ್ಲಿ ದೈವಾರಾಧನೆ ಕೈಂಕರ್ಯಗಳು ಅಸಾಧ್ಯ. ಈಗಿನ ಕಾಂಕ್ರೀಟ್ ಜಗತ್ತಿನಿಂದಾಗಿ ನಾಟಿ ಕೇಪುಳ ಹೂವಿನ ಗಿಡಗಳು ಅಳಿವಿನ ಅಂಚಿಗೆ ಸಾಗುತ್ತಿರುವ ಸಂದರ್ಭದಲ್ಲಿ ಅಂತಹ ಪಾವಿತ್ರ್ಯದ ಗಿಡಗಳನ್ನು ದೈವಸ್ಥಾನಗಳಲ್ಲಿ ನೆಡುವ ಮೂಲಕ ದೈವೀ ಕಾರ್ಯವನ್ನು ಸಾಯಿ ಪರಿವಾರ್ ಟ್ರಸ್ಟ್ ಮಾಡಿದೆ ಎಂದರು.
ಸಾಯಿ ಪರಿವಾರ್ ಟ್ರಸ್ಟ್ ನ ಮಾರ್ಗದರ್ಶಕ, ಚಂದ್ರಹಾಸ್ ಪಂಡಿತ್ ಹೌಸ್ ಶುಭ ಹಾರೈಸಿದರು. ಪರಿಸರವಾದಿ ಮಾಧವ ಉಳ್ಳಾಲ್, ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿಯ ಸ್ಥಾಪಕರಾದ ರಾಜೇಶ್ ಕಾಪಿಕಾಡ್, ಬಂಡಿಕೊಟ್ಯ ಮಲರಾಯ ದೈವಸ್ಥಾನದ ಪ್ರಮುಖರಾದ ಲತೀಶ್ ಪೂಜಾರಿ, ಮುಖಂಡರಾದ ದಯಾನಂದ ತೊಕ್ಕೊಟ್ಟು, ಗೋಪಾಲ ಯು.ಕೆ, ಉಳ್ಳಾಲ, ದೇವಕಿ ಆರ್. ಉಳ್ಳಾಲ, ಉದಯ ಆರ್.ಕೆ, ಗಣೇಶ್ ಪೂಜಾರಿ, ಹರ್ಷರಾಜ್ ಕುಂಪಲ, ಹರ್ಷವರ್ಧನ, ಮೋಹಿತ್ ಉಳ್ಳಾಲ, ಸುನಿತ್ ಬಂಡಿಕೊಟ್ಯ, ಸಾಗರ್ ಬಂಡಿಕೊಟ್ಯ, ಪ್ರಶಾಂತ್ ಸುವರ್ಣ, ಉಳ್ಳಾಲ ಕೊರಗಜ್ಜ ಸೇವಾ ಸಮಿತಿಯ ಲತೀಶ್ ಕೊಟ್ಟಾರ, ಶಾನ್ ಉಳ್ಳಾಲ, ಸಾಯಿ ಪರಿವಾರ್ ಟ್ರಸ್ಟಿನ ಪ್ರವೀಣ್ ಎಸ್ ಕುಂಪಲ, ಪುರುಷೋತ್ತಮ ಕಲ್ಲಾಪು, ಗಣೇಶ್ ಅಂಚನ್, ಗಣೇಶ್ ಪಂಡಿತ್ ಮುಳಿಹಿತ್ಲು, ದೀಕ್ಷಿತ್ ಪೂಜಾರಿ, ಸಂಪತ್ ಧರ್ಮನಗರ, ಸೂರ್ಯ ಕುಂಪಲ, ಸಂಪತ್ ಪಿಲಾರ್, ಕೌಶಿಕ್ ಸೇವಂತಿಗುಡ್ಡೆ, ಶೈಲೇಶ್ ಸೇವಂತಿಗುಡ್ಡೆ, ಶವಿತ್ ಉಚ್ಚಿಲ್, ಸಂತೋಷ್ ಅಂಬ್ಲಮೊಗರು, ಕುಶಾಲ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm