ಬ್ರೇಕಿಂಗ್ ನ್ಯೂಸ್
18-07-21 11:25 am Mangaluru Correspondent ಕರಾವಳಿ
ಮಂಗಳೂರು, ಜುಲೈ 18: ಕುಲಶೇಖರ ಬಳಿ ರೈಲ್ವೆ ಹಳಿಗೆ ಕುಸಿದು ಬಿದ್ದ ಮಣ್ಣನ್ನು ಎರಡು ದಿನಗಳ ಕಾರ್ಯಾಚರಣೆ ಬಳಿಕ ತೆರವು ಮಾಡಲಾಗಿದೆ. ಹಳಿಗೆ ಬಿದ್ದಿರುವ ಬಂಡೆ ಕಲ್ಲು, ತಡೆಗೋಡೆಯ ಕಾಂಕ್ರೀಟ್ ಸಾಮಗ್ರಿ, ಮಣ್ಣನ್ನು ತೆರವು ಮಾಡಲಾಗಿದ್ದು ಭಾನುವಾರ ಬೆಳಗ್ಗೆ ರೈಲು ಸಂಚಾರ ಪುನಾರಂಭಗೊಂಡಿದೆ.
ಮಂಗಳೂರಿನಿಂದ ಕಾರವಾರ, ಮುಂಬೈ ಕಡೆಗೆ ತೆರಳುವ ಪ್ರಮುಖ ಹಳಿಯಾಗಿದ್ದರಿಂದ ಹಲವು ರೈಲುಗಳ ಸಂಚಾರಕ್ಕೆ ತೊಡಕಾಗಿತ್ತು. ಎರಡು ದಿನಗಳಿಂದ ಕಾರವಾರ ರೈಲು ಮಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ. ಅಲ್ಲದೆ, ಮುಂಬೈನಿಂದ ಮಂಗಳೂರು- ಕೇರಳಕ್ಕೆ ಸಾಗುವ ರೈಲುಗಳ ಸಂಚಾರಕ್ಕೂ ತೊಡಕಾಗಿತ್ತು. ಹೀಗಾಗಿ ಮಳೆಯ ನಡುವೆಯೇ ಭರದ ಕಾಮಗಾರಿ ನಡೆಸಲಾಗಿದ್ದು ಇಂದು ಬೆಳಗ್ಗೆ ಕೆಲಸ ಪೂರ್ಣಗೊಂಡಿದೆ. ಅದರಂತೆ ಇಂದು ಬೆಳಗ್ಗೆ 8.45ರ ಹೊತ್ತಿಗೆ ಮೊದಲ ರೈಲು ಸಾಗಿದ್ದು ಎರ್ನಾಕುಲಂ - ಅಜ್ಮೀರ್ ರೈಲು ಹಳಿಯಿಂದ ಸಂಚರಿಸಿದೆ. ಮಣ್ಣು ಕುಸಿತಗೊಂಡ ಕುಲಶೇಖರ ಪ್ರದೇಶದಲ್ಲಿ ರೈಲು ತೆರಳುವ ವೇಳೆ ರೈಲ್ವೆ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಉಪಸ್ಥಿತರಿದ್ದು, ವೀಕ್ಷಣೆ ಮಾಡಿದರು.

ರೈಲು ಸಂಚಾರವನ್ನು ಭಾನುವಾರದಿಂದ ಆರಂಭಿಸಲೇಬೇಕು ಎನ್ನುವ ಉದ್ದೇಶದಿಂದ ಕಾರ್ಯಾಚರಣೆ ಶನಿವಾರ ತಡರಾತ್ರಿಯ ವರೆಗೂ ನಡೆದಿತ್ತು. ತಡೆಗೋಡೆ ಕುಸಿತ ಪ್ರದೇಶದಿಂದ ಮಣ್ಣು, ಬೃಹತ್ ಗಾತ್ರದ ಕಲ್ಲುಗಳನ್ನು ಹಿಟಾಚಿ ಬಳಸಿ ತೆಗೆಯಲಾಯಿತು. ರೈಲ್ವೆ ಹಳಿಗೆ ವಾಲಿದ ತಡೆಗೋಡೆಯನ್ನು ಯಂತ್ರ ಬಳಸಿ ಕಟ್ಟಿಂಗ್ ಮಾಡಲಾಗಿದೆ. ಮೇಲ್ಬಾಗದಲ್ಲಿರುವ ಮಣ್ಣು, ಕಲ್ಲುಗಳು ಮತ್ತೆ ಕುಸಿತವಾಗದಂತೆ ತೆರವು ಮಾಡಲಾಗಿದೆ.
ಎರಡು ದಿನಗಳ ಹಿಂದೆ, ಕುಲಶೇಖರ ಬಳಿಯ ಸುರಂಗದಿಂದ ಸ್ವಲ್ಪ ದೂರಕ್ಕೆ ಭಾರೀ ಮಳೆಗೆ ಗುಡ್ಡ ಕುಸಿದು ಹಳಿಗೆ ಬಿದ್ದಿತ್ತು. ಇದರಿಂದಾಗಿ ಮಂಗಳೂರಿನಿಂದ ಕೊಂಕಣ ರೈಲ್ವೇ ಹಾದಿಯಲ್ಲಿ ಸಂಚಾರ ಸ್ಥಗಿತ ಮಾಡಲಾಗಿತ್ತು.
Read: ಕೊಂಕಣ ರೈಲ್ವೇಯ ತೋಕೂರು ಬಳಿ ರೈಲು ಹಳಿಗೆ ಗುಡ್ಡ ಕುಸಿತ ; 9 ರೈಲುಗಳ ಸಂಚಾರಕ್ಕೆ ತೊಡಕು
The work on removal of mud and debris, that had fallen on the railway track between Padil and Kulshekhar due to the landslide and collapse of retainer wall, was almost completed on Saturday, July 17. The trains are likely to resume on this stretch after track inspection and electric line restoration on Sunday, July 18.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
12-10-26 11:30 am
HK News Staffer
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
12-10-26 10:06 am
HK News Staffer
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm