ಬ್ರೇಕಿಂಗ್ ನ್ಯೂಸ್
15-07-21 04:08 pm Mangalore Correspondent ಕರಾವಳಿ
ಮಂಗಳೂರು, ಜುಲೈ 15: ಲಾಕ್ಡೌನ್ ತೆರವುಗೊಳ್ಳುತ್ತಿದ್ದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪೊಲೀಸರು ನಿರಂತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಂದಿಯನ್ನು ಬೆನ್ನತ್ತಿದ್ದಾರೆ. ಇಂದು ಬೆಳಗ್ಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, 252 ಮಂದಿಯನ್ನು ವಶಕ್ಕೆ ಪಡೆದು ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದಾರೆ.
ಮನೆ ಕಳ್ಳತನ, ಸರ ಕಳ್ಳತನ, ಡಕಾಯಿತಿ ಇತ್ಯಾದಿ ಪ್ರಕರಣಗಳಲ್ಲಿ ಕಳೆದ ಐದಾರು ವರ್ಷಗಳಲ್ಲಿ ತೊಡಗಿಕೊಂಡಿರುವ ಮಂದಿಯ ಪಟ್ಟಿ ಆಯಾ ಠಾಣೆಯಲ್ಲಿ ಇರುತ್ತದೆ. ಅಂಥವರನ್ನು ಠಾಣೆಗೆ ಕರೆಸಿ ಮತ್ತು ಬರದೇ ಇರುವ ಮಂದಿಯನ್ನು ಮನೆಗೆ ನುಗ್ಗಿ ವಶಕ್ಕೆ ಪಡೆದು ಕರೆತರಲಾಗಿದೆ. ಈ ವೇಳೆ, 252 ಮಂದಿ ಆರೋಪಿಗಳಿಂದ 179 ಮೊಬೈಲ್, 67 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ, ಬೇರೆಯವರ ಹೆಸರಲ್ಲಿ ಸಿಮ್ ಪಡೆದು ಮೊಬೈಲ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಅದರ ಪತ್ತೆ ಕಾರ್ಯವನ್ನು ಮಾಡಲಾಗುವುದು. 67 ವಾಹನಗಳು ಕೂಡ ಅವರ ಹೆಸರಲ್ಲಿರದೇ ಬೇರೆ ಯಾರದ್ದೋ ಹೆಸರಲ್ಲಿರುವುದನ್ನು ಪತ್ತೆ ಮಾಡಲಾಗಿದೆ. ಈ ವಿಚಾರದ ಬಗ್ಗೆ ಕ್ರಮ ಜರುಗಿಸಲಾಗುವುದು. ಸದ್ಯಕ್ಕೆ ಇವರ ಮೇಲೆ 107 ಮತ್ತು 110 ಸೆಕ್ಷನ್ ಅಡಿ ಕೇಸು ದಾಖಲಿಸಲಾಗುವುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.



252 ಆರೋಪಿಗಳ ಪೈಕಿ ಕೆಲವರು ಮಾದಕ ದ್ರವ್ಯ ಸೇವಿಸಿರುವುದು ಕಂಡುಬಂದಿತ್ತು. ಹೀಗಾಗಿ ಅವರನ್ನು ಮೆಡಿಕಲ್ ಟೆಸ್ಟ್ ನಡೆಸಿದ್ದು, 35 ಮಂದಿ ಮಾದಕ ದ್ರವ್ಯ ಸೇವಿಸಿದ್ದು ಪತ್ತೆಯಾಗಿದೆ. ಅವರ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಕೇಸು ದಾಖಲಿಸಲಾಗುವುದು. ಕಾರ್ಯಾಚರಣೆಯಲ್ಲಿ ಇಬ್ಬರು ಡಿಸಿಪಿ, ನಾಲ್ಕು ಎಸಿಪಿ, 20 ಇನ್ ಸ್ಪೆಕ್ಟರ್ ಒಳಗೊಂಡು 200ಕ್ಕೂ ಹೆಚ್ಚು ಸಿಬಂದಿ ಪಾಲ್ಗೊಂಡಿದ್ದರು ಎಂದು ಕಮಿಷನರ್ ತಿಳಿಸಿದ್ದಾರೆ.
ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 900ಕ್ಕೂ ಹೆಚ್ಚು ಮಂದಿ ಈ ರೀತಿಯ ಅಪರಾಧಿಗಳಿದ್ದಾರೆ. ಆದರೆ, ಅವರೆಲ್ಲರನ್ನೂ ಪೊಲೀಸರು ಕರೆಸಿಕೊಂಡಿಲ್ಲ. ಒಂದೆರಡು ವರ್ಷಗಳಲ್ಲಿ ಅಪರಾಧ ಚಟುವಟಿಕೆಯಲ್ಲಿ ಏಕ್ಟಿವ್ ಇರುವ ಮಂದಿಯನ್ನು ಮಾತ್ರ ಕರೆಸಿಕೊಂಡು ಬಿಸಿ ಮುಟ್ಟಿಸುವ ಕಾರ್ಯ ಮಾಡಲಾಗಿದೆ.
Video:
With increasing cases of theft police hold MOB parades for criminals in Mangalore. As many as 252 people were taken into custody who were earlier involved in vehicle thefts and house and temple break-ins, chain snatching, and cattle thefts.
09-04-26 09:30 pm
HK News Staffer
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
09-04-26 11:03 pm
HK News Staffer
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm