ಬ್ರೇಕಿಂಗ್ ನ್ಯೂಸ್
07-07-21 03:56 pm Mangalore Correspondent ಕರಾವಳಿ
ಉಳ್ಳಾಲ, ಜು.7: ಉಳ್ಳಾಲ ಕೋಟೆಪುರ ಕಡಲ ತೀರದಲ್ಲಿ ಮಿಡ್ ನೈಟ್ ಮರಳುಗಾರಿಕೆ ಅವ್ಯಾಹತವಾಗಿದ್ದು ಉಳ್ಳಾಲ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಐದು ಲೋಡ್ ಮರಳು ವಶಕ್ಕೆ ಪಡೆದು ಒಬ್ಬನನ್ನು ಬಂಧಿಸಿದ್ದಾರೆ.
ಕೋಟೆಪುರ ಕಡಲ ತೀರದಿಂದ ನಿತ್ಯವೂ ರಾತ್ರಿ 11 ಗಂಟೆಯಿಂದ ಮುಂಜಾನೆ 4 ಗಂಟೆ ತನಕ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದರ ಬಗ್ಗೆ ಹೆಡ್ ಲೈನ್ ಕರ್ನಾಟಕ ಇತ್ತೀಚೆಗೆ ವಿಡಿಯೋ ಸಹಿತ ವರದಿ ಮಾಡಿತ್ತು. ಇದರಿಂದ ಸ್ವಲ್ಪ ಕಾಲ ಮರಳುಗಾರಿಕೆ ದಂಧೆಗೆ ಬ್ರೇಕ್ ಬಿದ್ದಿತ್ತು. ಆನಂತರ ಎಂದಿನಂತೆ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಲೇ ಇತ್ತು.





ಕೋಟೆಪುರದ ಮಸೀದಿ ಕಮಿಟಿಯ ಪ್ರಮುಖನೊಬ್ಬ ಅಕ್ರಮ ಮರಳುಗಾರಿಕೆಯ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದಾಗಿ ಸ್ಥಳೀಯರು ಆರೋಪ ಮಾಡಿದ್ದರು. ಉಳ್ಳಾಲ ಠಾಣೆಯ ಕೂಗಳತೆ ದೂರದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಇಲ್ಲಿನ ಪೊಲೀಸರಿಗೆ ಗೊತ್ತಿಲ್ಲದೇ ಏನೂ ಇಲ್ಲ. ಆದರೂ ಪೊಲೀಸರು ಮಗುಮ್ಮಾಗಿ ಕುಳಿತಿದ್ದರು.
ಆದರೆ, ಎರಡು ದಿನಗಳ ಹಿಂದೆ ಕೋಟೆಪುರದ ಅಕ್ರಮದ ಬಗ್ಗೆ ಮೇಲಧಿಕಾರಿಗಳಿಗೆ ಒತ್ತಡ ಬಂದಿತ್ತು ಎನ್ನಲಾಗುತ್ತಿದ್ದು ಇದರ ಪರಿಣಾಮ ಇಂದು ಮುಂಜಾನೆ ಉಳ್ಳಾಲ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ, ಎರಡು ಈಚರ್ ಲಾರಿಯಲ್ಲಿ ಲೋಡ್ ಮಾಡಿದ್ದ ಮರಳು, ಎರಡು 407 ಟೆಂಪೋದಲ್ಲಿ ಲೋಡ್ ಮಾಡಿದ್ದ ಮರಳು ಹಾಗೂ ಕಡಲ ತೀರದಲ್ಲಿ ರಾಶಿ ಹಾಕಿದ್ದ ಮೂರು ಲೋಡ್ ಮರಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಇವುಗಳಿಗೆ ಎಸ್ಕಾರ್ಟ್ ಆಗಿ ಹೋಗುತ್ತಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಳುಗಾರಿಕೆ ವೇಳೆ ಸ್ಥಳದಲ್ಲಿದ್ದ ಕೋಟೆಪುರದ ಶಾರುಕ್ ಎಂಬಾತನನ್ನು ಬಂಧಿಸಿದ್ದಾರೆ.
Kotepura seaside sand illegal sand mining Ullal police raid spot one arrested four trucks seized. Sand smugglers were constantly mining sand illegally for the sea and based on information ACP Ranjith Kumar and the team has raided the spot.
27-05-26 01:41 pm
HK News Staffer
ರಾಜ್ಯ ರಾಜಕೀಯದಲ್ಲಿ ಭಾರೀ ಕ್ಲೈಮ್ಯಾಕ್ಸ್ ; ಸಿಎಂ ಸಿ...
26-05-26 11:03 pm
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
ಬರೆದಿಟ್ಕೊಳ್ಳಿ , ಮುಂದೇನೂ ನಮ್ದೇ ಸರ್ಕಾರ ಇರ್ತದೆ ;...
25-05-26 09:38 pm
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
27-05-26 12:29 pm
HK News Desk
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
27-05-26 01:30 pm
HK News Staffer
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm
ಇಸ್ರೇಲ್ನಿಂದ ರಜೆ ಮೇಲೆ ಊರಿಗೆ ಬಂದವನ ದುರಂತ ಅಂತ್ಯ...
26-05-26 02:43 pm
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm