ಬ್ರೇಕಿಂಗ್ ನ್ಯೂಸ್
27-06-21 04:43 pm Mangaluru Correspondent ಕರಾವಳಿ
ಮಂಗಳೂರು, ಜೂನ್ 27: ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬಿಂಬಿಸಿ ಪೋಸ್ಟ್ ಮಾಡಿರುವ ವ್ಯಕ್ತಿಯ ವಿರುದ್ದ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಶೀದ್ ಟಿಪ್ಪು ಎಂಬ ಹೆಸರಿ ಫೇಸ್ಬುಕ್ ಖಾತೆಯಲ್ಲಿ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿ ಪೋಸ್ಟ್ ಮಾಡಲಾಗಿದೆ. ಜನಾರ್ದನ ಪೂಜಾರಿಯವರು, ಸ್ವಂತ ಪಕ್ಷದಲ್ಲಿ ನಿರಂತರ ಅಧಿಕಾರ ಅನುಭವಿಸಿ ಬಿಜೆಪಿ ಪರ ಬ್ಯಾಟಿಂಗ್ ಮಾಡುವ ವಿಚಿತ್ರ ವ್ಯಕ್ತಿ. ಈವರೆಗೆ ಇವರನ್ನು ಹೈಕಮಾಂಡ್ ಕೂಡ ವಿರೋಧಿಸಿಲ್ಲ. ಆದರೆ ಈ ರೀತಿ ಯಾರಾದರೂ ಅಲ್ಪಸಂಖ್ಯಾತ ವ್ಯಕ್ತಿಗಳು ಮಾತನಾಡಿದ್ದಲ್ಲಿ ಕ್ಷಣ ಮಾತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ವಜಾಗೊಳಿಸುತ್ತಿತ್ತು.
ಈ ರೀತಿಯ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ಕಾಂಗ್ರೆಸ್ ನಾಯಕರ ಸಿದ್ಧಾಂತ ಮೊದಲು ನಿಲ್ಲಿಸಿ ಎಂದು ಬರೆಯಲಾಗಿದೆ. ಅಲ್ಲದೆ ಜನಾರ್ದನ ಪೂಜಾರಿಯವರ ಫೋಟೋ ಅಪ್ಲೋಡ್ ಮಾಡಿ ಅದರ ಮೇಲೆ “ಎಣ್ಣೆಯಲ್ಲಿ ಕರಿದ ಗೋಲಿಬಜೆ, ಬೆಂಕಿಯಲ್ಲಿ ಕರಿದ ಗೋಲಿಬಜೆ” ಎಂದು ಅವಹೇಳಕಾರಿಯಾಗಿ ನಿಂದಿಸಿ ಪೋಸ್ಟ್ ಮಾಡಲಾಗಿದೆ. ಈ ಬಗ್ಗೆ ಮಂಗಳೂರಿನ ಬಿರುವೆರ್ ಕುಡ್ಲ ಸಂಘಟನೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿತ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
An appeal has been submitted to Mangaluru police commissioner urging action against Karavali Rashid Tippu, who has allegedly posted derogatory comments on former union minister and senior Congress leader Janardhan Poojary.
08-08-25 06:23 pm
HK News Desk
Bigg Boss Rajath, Death Threats, Soujanya: ಯೂ...
08-08-25 11:20 am
ಸರ್ಕಾರಿ ಕೆಲಸ ಕೊಡಿಸೋದಾಗಿ 25 ಲಕ್ಷ ಪಡೆದು ವಂಚನೆ ;...
07-08-25 10:18 pm
ಧರ್ಮಸ್ಥಳ ಘರ್ಷಣೆ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ, ಎ...
07-08-25 05:50 pm
Dharmasthala burial case, Gag Order: ಮಾಧ್ಯಮ ನ...
06-08-25 10:51 pm
07-08-25 10:02 pm
HK News Desk
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
08-08-25 11:10 pm
Mangalore Correspondent
SIT, Kalleri, Buried Schoolgirl, Dharmasthala...
08-08-25 09:25 pm
ಧರ್ಮಸ್ಥಳ ಸುದ್ದಿ ಪ್ರಸಾರ ನಿರ್ಬಂಧಕ್ಕೆ ಸುಪ್ರೀಂ ನಿ...
08-08-25 08:26 pm
Bjp, Mangalore: ಎಡಪಂಥೀಯರು ಧರ್ಮಸ್ಥಳ ಕ್ಷೇತ್ರಕ್ಕ...
08-08-25 08:05 pm
Mangalore Safest City; ಕಡಿಮೆ ಕ್ರೈಮ್ ರೇಟ್, ಮಹಿ...
08-08-25 05:54 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm