ಬ್ರೇಕಿಂಗ್ ನ್ಯೂಸ್
18-06-21 09:51 pm Special Report, Mangaluru Correspondent ಕರಾವಳಿ
ಮಂಗಳೂರು, ಜೂನ್ 18: ನಮ್ಮ ಮಹಾನಗರ ಪಾಲಿಕೆಯ ಅಧಿಕಾರಿಗಳು ಬರೀ ದಪ್ಪ ಚರ್ಮದವ್ರು ಕಣ್ರೀ.. ಎಷ್ಟು ಹೇಳಿದ್ರೂ ಭಾಷೆಯಿಲ್ಲ. ಏನು ಬೈದ್ರೂ ಕೇಳೋದಿಲ್ಲ.. ಹೌದು.. ಈ ರೀತಿಯ ಬೈಗುಳ ನೀವು ಹಲವೆಡೆ ಕೇಳ್ತಾನೇ ಇರಬಹುದು. ನೀವು ಈ ಸುದ್ದಿ ಕೇಳಿದರೆ, ಇದಕ್ಕಿಂತ ನಿಕೃಷ್ಟವಾಗಿ ಪಾಲಿಕೆಯವರಿಗೆ ಬೈಯಲೇಬೇಕು. ಯಾಕಂದ್ರೆ, ಮಹಾನಗರ ಪಾಲಿಕೆಯ ಅಧಿಕಾರಸ್ಥರು ಇಷ್ಟೊಂದು ನಿರ್ಲಕ್ಷ್ಯ ವಹಿಸ್ತಾರೆ ಅಂದ್ರೆ ಇವ್ರು ಹೊಟ್ಟೆಗೆ ಅನ್ನ ತಿನ್ನಲ್ವೇ ಅನ್ನುವ ಪ್ರಶ್ನೆಯನ್ನೂ ಮುಂದಿಡುತ್ತೀರಿ.
ಮರವೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿನಿಂದ ಮೂಡುಶೆಡ್ಡೆ ಆಸುಪಾಸಿನ 12 ಗ್ರಾಮ ಪಂಚಾಯತಿಗಳಿಗೆ ನೇರವಾಗೇ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಅಣೆಕಟ್ಟು ಆದಾಗಿನಿಂದ ಕಳೆದ ಐದಾರು ವರ್ಷಗಳಿಂದಲೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮೂಡುಶೆಡ್ಡೆ, ವಾಮಂಜೂರು, ಬಜ್ಪೆ, ಗುರುಪುರ, ಪೆರ್ಮುದೆ, ಕಳವಾರು, ಸುಂಕದಕಟ್ಟೆ, ಕೆಂಜಾರು, ಏರ್ಪೋರ್ಟ್ ಆಸುಪಾಸು ಹೀಗೆ ಆ ಭಾಗದಲ್ಲಿ ಮನೆ ಮನೆಗೆ ನೀರು ಪೂರೈಕೆಯಾಗುತ್ತಿದ್ದರೆ, ಅದು ಸರಬರಾಜು ಆಗುತ್ತಿರೋದು ಇದೇ ಮರವೂರು ಅಣೆಕಟ್ಟಿನಿಂದ. ವಿಷ್ಯ ಏನಪ್ಪಾಂದ್ರೆ, ಇದೇ ಅಣೆಕಟ್ಟಿಗೆ ಪಚ್ಚನಾಡಿಯಲ್ಲಿರುವ ಡ್ರೈನೇಜ್ ಸ್ಥಾವರದ ಕಲುಷಿತ ನೀರನ್ನೂ ಬಿಡಲಾಗುತ್ತದೆ. ಅರ್ಥಾತ್, ಮಂಗಳೂರು ನಗರದ ಅರ್ಧದಷ್ಟು ಭಾಗದ ಜನರ ಟಾಯ್ಲೆಟ್ ನೀರನ್ನು ಶುದ್ಧೀಕರಿಸುವ ಸಲುವಾಗಿ ಪಚ್ಚನಾಡಿಗೆ ಕೊಂಡೊಯ್ದು ಅಲ್ಲಿಂದ ನೇರವಾಗಿ ನದಿ ಇರುವ ಡ್ಯಾಮಿಗೆ ಬಿಡಲಾಗುತ್ತದೆ.
ಹೀಗೆ ನಾವು ಹೇಳ್ತೀವಿ, ಅಂದ್ರೆ ನೀವು ನಂಬಲಿಕ್ಕಿಲ್ಲ. ಈ ಬಗ್ಗೆ ಮೂಡುಶೆಡ್ಡೆ, ಪಡುಶೆಡ್ಡೆಯ ನೂರಾರು ಜನರು ಹೋರಾಟ ಮಾಡಿದ್ದಾರೆ. ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಶಾಸಕರಿಗೆ ಮನವಿ, ದೂರು ಕೊಟ್ಟಿದ್ದಾರೆ. ಸ್ಥಳೀಯ ಪಂಚಾಯತ್ ಗಳಿಂದಲೂ ಮಹಾನಗರ ಪಾಲಿಕೆಗೆ ದೂರು ಸಲ್ಲಿಕೆ ಆಗಿದೆ. ಕಳೆದ ಎರಡು ಮೂರು ವರ್ಷಗಳಿಂದ ನಿರಂತರ ದೂರು, ದುಮ್ಮಾನ ಕೇಳಿಬಂದರೂ, ನರಸತ್ತ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಮಾಡುವ ಗೋಜಿಗೆ ಹೋಗಿಲ್ಲ.
ಪಚ್ಚನಾಡಿಯಲ್ಲಿರುವ ವೆಟ್ ವೆಲ್ ಸ್ಥಾವರವನ್ನು ಅವೈಜ್ಞಾನಿಕ ರೀತಿ ನಿರ್ವಹಣೆ ಮಾಡುತ್ತಿರುವುದೇ ಈ ಅವ್ಯವಸ್ಥೆಗೆ ಕಾರಣ ಎಂದು ಸ್ಥಳೀಯರು ದೂರಿದ್ದರು. ಈ ಭಾಗದಲ್ಲಿ 12 ಪಂಚಾಯಿತಿಗಳಲ್ಲಿ ಏನಿಲ್ಲ ಅಂದ್ರೂ ಹತ್ತು ಲಕ್ಷ ಜನ ಇದ್ದಾರೆ. ಇವರೆಲ್ಲ ಮಲಿನ, ವಿಷಯುಕ್ತ ನೀರನ್ನು ಕುಡಿದು ಏನೇನೋ ರೋಗಕ್ಕೆ ತುತ್ತಾಗುವ ಸ್ಥಿತಿಯನ್ನು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ತಂದಿಟ್ಟಿದೆ. ಬೇಸಗೆಯಲ್ಲಿ ರಾತ್ರಿ ವೇಳೆ, ಜನರು ಇಲ್ಲದ ಸಮಯದಲ್ಲಿ ಮಲಿನ ನೀರನ್ನು ಶುದ್ಧೀಕರಿಸದೆ ನದಿಗೆ ಬಿಡುತ್ತಿದ್ದರೆ, ಮಳೆಗಾಲದಲ್ಲಿ ಮಳೆ ನೀರಿನೊಂದಿಗೆ ಜನರಿಗೆ ಗೊತ್ತಾಗಲ್ಲ ಎಂದು ಬೇಕಾಬಿಟ್ಟಿ ಹರಿಯಬಿಡುತ್ತಲೇ ಇದ್ದರು. ಈ ವಿಚಾರ ಸಾಕಷ್ಟು ಬಾರಿ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿದೆ. ಸ್ಥಳೀಯವಾಗಿ ಬಿಜೆಪಿ, ಕಾಂಗ್ರೆಸ್ ಭೇದ ಇಲ್ಲದೆ ಹೋರಾಟ ಮಾಡುವ ಮಂದಿಗೂ ಗೊತ್ತಿದೆ.
ಪಚ್ಚನಾಡಿ ರೇಚಕ ಸ್ಥಾವರದಿಂದ ಬಿಡಲಾಗುವ ನೀರು ನೇರವಾಗಿ ಮಂಜಲ್ಪಾದೆ ಮೂಲಕ ಎರಡು – ಮೂರು ಕಿಮೀ ಅಂತರದಲ್ಲಿ ಹರಿದು ಫಲ್ಗುಣಿ ನದಿ ಸೇರುತ್ತದೆ. ಅಲ್ಲಿಯೇ ನೂರು ಮೀಟರ್ ಅಂತರದಲ್ಲಿ ಮೂಡುಶೆಡ್ಡೆ - ಮರವೂರು ಡ್ಯಾಮ್ ಇದ್ದು, ಅಲ್ಲಿ ಶೇಖರಣೆಯಾಗುತ್ತದೆ. ಕಲುಷಿತ ನೀರಿನಿಂದಾಗಿ ಡ್ಯಾಮಿನಲ್ಲಿ ಮೀನುಗಳು ಸತ್ತು ಬೀಳುವುದು ಬೇಸಗೆಯಲ್ಲಿ ಕಾಮನ್ ಅನ್ನುವಂತಾಗಿದೆ. ಈ ರೀತಿಯ ಬಿಕ್ನಾಸಿ ಅವ್ಯವಸ್ಥೆ ನಮ್ಮ ನಡುವೆಯೇ ಆಗಿಹೋಗುತ್ತಿದ್ದರೆ, ದೂರು ಬಂದಾಗ ಪ್ರತಿ ಬಾರಿ ಅಧಿಕಾರಿ ವರ್ಗ ಅಲ್ಲಿ ತೆರಳಿ ಹಿಂತಿರುಗುತ್ತಿದ್ದರು. ಸರಿ ಮಾಡುವ ಭರವಸೆಯನ್ನೂ ಕೊಡುತ್ತಲೇ ಬಂದಿದ್ದರು.
ಇದೇ ನೀರನ್ನು ಹತ್ತನ್ನೆರಡು ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಜನರಿಗೆ ಕುಡಿಯಲು ನೀಡಲಾಗುತ್ತದೆ ಎನ್ನುವ ಅರಿವು ಮಹಾನಗರ ಪಾಲಿಕೆಗೂ ಇದೆ, ಇಲ್ಲಿನ ಮೇಯರ್ ಸಾಹೇಬ್ರಿಗೂ ಇದೆ, ಅಷ್ಟೇ ಅಲ್ಲಾ, ನಮ್ಮ 60ಕ್ಕೂ ಹೆಚ್ಚು ಇರುವ ಕಾರ್ಪೊರೇಟರುಗಳಿಗೂ ಇದೆ. ಆದರೆ, ಇಚ್ಛಾಶಕ್ತಿ ಎಂಬ ಅಸ್ತ್ರ ಇಲ್ಲದೆ, ಜನ ಸತ್ತರೆ ಹೋಗಲಿ ಬಿಡಿ ಎಂಬ ನಿರ್ಲಜ್ಜ ಭಾವನೆ ಇದೆಯಲ್ಲ ನಮ್ಮ ದುರವಸ್ಥೆಯನ್ನೂ ಈವತ್ತಿಗೂ ಹಾಗೇ ಇಟ್ಟುಬಿಟ್ಟಿದೆ. ಆದರೆ, ಸ್ಥಳೀಯರ ಹೋರಾಟ ಈಗ ಮುಖ್ಯಮಂತ್ರಿ ಕಚೇರಿಗೂ ತಲುಪಿದೆ. ಮಾನವ ಹಕ್ಕು ಆಯೋಗಕ್ಕೂ ಮುಟ್ಟಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆಯ ಕೂಗು ಕೇಳಿಬರುತ್ತಿರುವ ಮಧ್ಯೆಯೇ ಸಿಎಂ ಕಚೇರಿಯಿಂದ ಜೂನ್ 18ರಂದೇ ಗಂಭೀರ ಪ್ರಕರಣವೆಂದು ಪರಿಗಣಿಸಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಬಿಜೆಪಿ ಆಡಳಿತಕ್ಕೆ ಚಾಟಿ ಬೀಸುವ ರೀತಿ ಆದೇಶ ಮಾಡಲಾಗಿದೆ.
ಗಂಭೀರ ಪ್ರಕರಣದಲ್ಲಿ ಇಷ್ಟೊಂದು ನಿರ್ಲಕ್ಷ್ಯ ತೋರಬಾರದು. ಈ ರೀತಿಯ ಅವ್ಯವಸ್ಥೆಗೆ ಕಾರಣವಾದ ಅಧಿಕಾರಿಗಳನ್ನು ಶಿಕ್ಷಿಸಬೇಕು. ಏನೇನು ಕ್ರಮ ಆಗಬೇಕೋ ಅವನ್ನು ಕೂಡಲೇ ಜರುಗಿಸಿ. ಈ ಬಗ್ಗೆ ಆಗಿರುವ ಕ್ರಮದ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ರಿಪೋರ್ಟ್ ಮಾಡುವಂತೆ ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್ ಸಾಹೇಬ್ರಿಗೆ ಸಿಎಂ ಕಚೇರಿಯಿಂದ ನಿರ್ದೇಶನ ನೀಡಲಾಗಿದೆ. (ಆದೇಶ ಸಂಖ್ಯೆ – ಸಿಎಂಒ – 70- 2021) ಆದೇಶ ಜಾರಿ ದಿನಾಂಕ 18-06-2021. ಮಾನವ ಹಕ್ಕು ಆಯೋಗದಿಂದಲೂ ಇತ್ತೀಚೆಗೆ ಮಹಾನಗರ ಪಾಲಿಕೆಯ ಕಚೇರಿಗೆ ಸೂಚನಾ ಪತ್ರ ಬಂದಿತ್ತು. ಆದರೆ, ಅಧಿಕಾರಸ್ಥರ ನಿರ್ಲಕ್ಷ್ಯ ಎಷ್ಟಿದೆ ಅಂದ್ರೆ, ಆಯೋಗದ ಪತ್ರವನ್ನೂ ಕುಂಡೆಯಡಿಗೆ ಇಟ್ಟು ಮಲಗಿದ್ದಾರೆ. ಯಾಕಂದ್ರೆ, ಇವ್ರಿಗೆ ತಿಂಗಳಿಗೆ ಸರಿಯಾಗೇ ಸಂಬಳ ಬರುತ್ತಲ್ಲ.. ಬಿಡಿ.
In a shocking incident, Seepage water is been continuously released into Maravoor Dam where people of 12 Gram Panchayat Consume dirty water every day. The Issue has reached Karnataka CM and a letter of immediate inquiry and action has been ordered against MCC officals.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm