ಬ್ರೇಕಿಂಗ್ ನ್ಯೂಸ್
12-06-21 10:07 pm Mangaluru Correspondent ಕರಾವಳಿ
ಉಡುಪಿ, ಜೂನ್ 12: ದೇಶದಲ್ಲಿ ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್ ಮಾನಸಿಕ ಸ್ಥಿಮಿತವನ್ನೂ ಕಳೆದುಕೊಂಡಿದೆ. ಕಾಂಗ್ರೆಸ್ ನಾಯಕರು ದೇಶದ್ರೋಹದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಶ್ಮೀರಕ್ಕೆ 370 ವಿಧಿ ಮರಳಿಸುವುದಾಗಿ ಹೇಳಿರುವ ದಿಗ್ವಿಜಯ್ ಸಿಂಗ್ ಒಬ್ಬ ದೇಶದ್ರೋಹಿ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಶ್ಮೀರದ ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ಸೇ ಕಾರಣ. 370ನೇ ವಿಧಿಯ ವಿರುದ್ಧ ಇಡೀ ದೇಶ ಕೂಗಿದರೂ ಕಾಂಗ್ರೆಸಿಗೆ ಕೇಳಲಿಲ್ಲ. ಮೋದಿಯವರ ಸರ್ಕಾರ 370ನೇ ವಿಧಿಯನ್ನು ರದ್ದುಮಾಡಿ ಕಾಶ್ಮೀರ ನಮ್ಮದು ಎಂದಿದೆ. ಈಗ ಕಾಶ್ಮೀರ ಶಾಂತವಾಗಿದೆ, ಜನಜೀವನ ಸಾಮಾನ್ಯವಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ 370ನೇ ವಿಧಿ ಜಾರಿ ಮಾಡುವುದಾಗಿ ಹೇಳಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಹೇಳಿಕೆಯೋ ಅಥವಾ ದಿಗ್ವಿಜಯಸಿಂಗ್ ವೈಯಕ್ತಿಕ ಹೇಳಿಕೆಯೋ ಎಂದು ಅದರ ರಾಷ್ಟ್ರೀಯ ನಾಯಕರು ಸ್ಪಷ್ಟ ಪಡಿಸಬೇಕು. ವೈಯಕ್ತಿಕ ಹೇಳಿಕೆಯಾದರೆ ತಕ್ಷಣ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ.


ಕಾಂಗ್ರೆಸ್ ಪಕ್ಷ ನಿರಂತರವಾಗಿ ದೇಶದ್ರೋಹಕ್ಕೆ ಪ್ರೋತ್ಸಾಹ ಕೊಡುತ್ತಾ ಬಂದಿದೆ. ಆವತ್ತು ರಾಹುಲ್ ಗಾಂಧಿ ಕೂಡ ಕಾಶ್ಮೀರದ ಬಗ್ಗೆ ಇದೇ ಅಭಿಪ್ರಾಯದಲ್ಲಿ ಟ್ವೀಟ್ ಮಾಡಿದ್ದರು. ಅದೇ ಟ್ವೀಟ್ ನ್ನು ಪಾಕಿಸ್ತಾನ ಕೂಡ ಪ್ರಸ್ತಾಪ ಮಾಡಿತ್ತು. ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎನ್ನುವ ರೀತಿ ರಾಹುಲ್ ಗಾಂಧಿ ತೋರಿಸಿದ್ದರು. ದೆಹಲಿಯ ಕುರ್ಚಿಯನ್ನು ಹಿಡಿಯಲು ದೇಶದ ಯಾವುದೇ ಭಾಗವನ್ನು ಬಿಟ್ಟು ಕೊಡುತ್ತೀರಾ ಕಾಂಗ್ರೆಸಿಗರೇ ? ನಿಮ್ಮದು ರಾಷ್ಟ್ರೀಯ ಕಾಂಗ್ರೆಸ್ ಅಲ್ಲ ದೇಶವಿರೋಧಿ ಕಾಂಗ್ರೆಸ್. ದಿಗ್ವಿಜಯ್ ಸಿಂಗ್ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಬೇಕು. ದಿಗ್ವಿಜಯ್ ಹೇಳಿರುವುದು ಪಕ್ಷದ ನಿಲುವು ಅಲ್ಲ ಅಂತಾದರೆ ಪಕ್ಷದಿಂದ ಉಚ್ಚಾಟಿಸಿ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ನಿಲುವು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶೋಭಾಕರಂದ್ಲಾಜೆ ಆಗ್ರಹಿಸಿದ್ದಾರೆ.
Udupi MP Shobha Karandlaje hits out after Congress leader Digvijaya Singh’s comments in a clubhouse conversation that the revocation of Article 370 and stripping Jammu and Kashmir of statehood was an “extremely sad” decision and his party will have a “relook” at the issue have triggered a row, with the BJP accusing him of speaking against India and in agreement with Pakistan.
26-05-26 11:03 pm
HK News Desk
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
ಬರೆದಿಟ್ಕೊಳ್ಳಿ , ಮುಂದೇನೂ ನಮ್ದೇ ಸರ್ಕಾರ ಇರ್ತದೆ ;...
25-05-26 09:38 pm
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
26-05-26 09:02 pm
HK News Staffer
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
26-05-26 02:43 pm
HK News Staffer
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm