ಬ್ರೇಕಿಂಗ್ ನ್ಯೂಸ್
05-06-21 05:54 pm Udupi Correspondent ಕರಾವಳಿ
ಕಾರ್ಕಳ, ಜೂನ್ 5: 85 ವರ್ಷದ ಅಜ್ಜಿಯನ್ನು ಸ್ವಂತ ಮಗನೇ ಮನೆಯಿಂದ ಹೊರಹಾಕಿದ್ದಲ್ಲದೆ, ಆಕೆಯ ಮೇಲೆ ಹಲ್ಲೆಗೈದ ಘಟನೆ ಕಾರ್ಕಳ ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದು ಸಾಮಾಜಿಕ ಕಾರ್ಯಕರ್ತೆಯೊಬ್ಬರು ಗಮನಿಸಿ ಅಜ್ಜಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಲೂಕಿನ ಕುಂಟಲ್ಪಾಡಿ ಎಂಬಲ್ಲಿನ ಅಶೋಕನಗರದ ಅಂಗನವಾಡಿಯ ಜಗಲಿಯಲ್ಲಿ ಅಜ್ಜಿ ಎರಡು ದಿನಗಳಿಂದ ಅನ್ನ ನೀರಿಲ್ಲದೆ ಮಲಗಿದ್ದರು. ತಲೆಯ ಭಾಗಕ್ಕೆ ಗಾಯಗೊಂಡಿದ್ದ ಅಜ್ಜಿಯನ್ನು ಗಮನಿಸಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಎಂಬವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಜ್ಜಿಯನ್ನು ಯಶೋದಾ ಆಚಾರ್ಯ (85) ಎಂದು ಗುರುತಿಸಲಾಗಿದ್ದು, ಆಕೆಯ ಮಗನೇ ಮನೆಯಿಂದ ಹೊರಹಾಕಿದ್ದಾನೆ ಎನ್ನಲಾಗುತ್ತಿದೆ.

ರಮಿತಾ ಕೋವಿಡ್ ಆಹಾರದ ಕಿಟ್ ನೀಡುವುದಕ್ಕಾಗಿ ಮನೆ ಪರಿಸರಕ್ಕೆ ಬಂದಿದ್ದಾಗ, ಅಜ್ಜಿಯನ್ನು ಹೊರಗೆ ಹಾಕಿರುವುದು ಗಮನಕ್ಕೆ ಬಂದಿದೆ. ಅಲ್ಲದೆ, ಈ ಬಗ್ಗೆ ಮನೆಯಲ್ಲಿ ಕೇಳಿದಾಗ ಸ್ವಂತ ಮಗನೇ ತಾಯಿಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾನೆಂದು ತಿಳಿದುಬಂದಿದೆ. ಹೀಗಾಗಿ ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಿದ್ದಲ್ಲದೆ, ಒಂದಷ್ಟು ಬಟ್ಟೆಯನ್ನೂ ತೆಗೆದುಕೊಟ್ಟಿದ್ದಾರೆ. ಯಶೋಧಾ ಅವರ ಗಂಡ ಶೀನ ಆಚಾರ್ಯ ಐದು ವರ್ಷಗಳ ಹಿಂದೆ ನಿಧನರಾಗಿದ್ದು ಆಬಳಿಕ ಮಗನ ಜೊತೆ ವಾಸವಿದ್ದರು.
ಅಜ್ಜಿ ಯಶೋಧಾ ಹೇಳುವ ಪ್ರಕಾರ, ಮನೆಯಲ್ಲಿ ಮಗ ಮತ್ತು ಸೊಸೆ ಹೊಡೆಯುತ್ತಿದ್ದರಂತೆ. ಕಟ್ಟಿಗೆಯಲ್ಲಿ ಹೊಡೆದಿದ್ದರಿಂದ ತಲೆಗೆ ಗಾಯವಾಗಿದೆ ಎಂದು ಹೇಳಿದ್ದಾರೆ. ಆದರೆ, ಮಗ ತಾಯಿಗೆ ಹೊಡೆದಿರುವುದನ್ನು ನಿರಾಕರಿಸಿದ್ದಾನೆ. ತಾಯಿ ಮಾನಸಿಕವಾಗಿ ಸ್ಥಿಮಿತ ಕಳಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಬಿದ್ದಿದ್ದು, ಅದರಿಂದ ತಲೆಗೆ ಪೆಟ್ಟಾಗಿದೆ. ಅಷ್ಟೇನು ದೊಡ್ಡ ಗಾಯ ಆಗಿಲ್ಲದ ಕಾರಣ ಆಸ್ಪತ್ರೆಗೆ ತೋರಿಸಿಲ್ಲ ಎಂದಿದ್ದಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ತಾಯಿ ಮೇಲೆ ಹಲ್ಲೆಗೈದ ಬಗ್ಗೆ ಮಗನ ವಿರುದ್ಧ ಕೇಸು ದಾಖಲಾಗಿದೆ.
In a heartless act, a son did not take his 85-year-old mother, who had received grievous injuries to her head, for medical treatment. A social worker came to the rescue of the elderly woman and got her admitted to the government hospital of the taluk.
03-02-26 05:34 pm
Bangalore Correspondent
Kamalakar Bhat Guruj Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
03-02-26 11:55 am
HK News Desk
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
03-02-26 04:38 pm
Mangalore Correspondent
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm