ಬ್ರೇಕಿಂಗ್ ನ್ಯೂಸ್
04-06-21 11:26 pm Mangaluru Correspondent ಕರಾವಳಿ
ಮಂಗಳೂರು, ಜೂನ್ 4: ಪೊಲೀಸ್ ದೂರು ಕೊಟ್ಟು ಆರೋಪಿ ಸಿಕ್ಕಿಬಿದ್ದು ಹೈಡ್ರಾಮಾ ನಡೆಸುತ್ತಿದ್ದಂತೆ ಇಂಡಿಯಾನಾ ಆಸ್ಪತ್ರೆಯವರು ಉಲ್ಟಾ ಹೊಡೆದಿದ್ದಾರೆ. ದೂರನ್ನೇ ಹಿಂಪಡೆದು ಇಡೀ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.
ಕಳೆದ ಮೇ 18ರಂದು ನಗರದ ಇಂಡಿಯಾನಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ರೋಗಿಯೊಬ್ಬರು ಮೃತಪಟ್ಟಿದ್ದರು. ಬಿಲ್ ವಿಚಾರದಲ್ಲಿ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಮತ್ತು ಅವರ ಬೆಂಬಲಿಗರು ಆಸ್ಪತ್ರೆಗೆ ಬಂದು ವೈದ್ಯರು ಮತ್ತು ಸಿಬಂದಿ ಜೊತೆ ವಾಗ್ವಾದ ನಡೆಸಿದ್ದರು. ಐಸಿಯುಗೆ ನುಗ್ಗಿ ವೈದ್ಯರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಕಂಕನಾಡಿ ಠಾಣೆಗೆ ದೂರು ನೀಡಲಾಗಿತ್ತು. ಸಿಬಂದಿ ನೀಡಿದ್ದ ದೂರು ಸ್ವೀಕರಿಸಿ, ಪೊಲೀಸರು ಎಫ್ಐಆರ್ ದಾಖಲಿಸದೆ ಹಾಗೇ ಉಳಿಸಿಕೊಂಡಿದ್ದರು.
ಇಂದು ಬೆಳಗ್ಗೆ ಐಎಂಎ ಘಟಕದ ವೈದ್ಯರು ಗರ್ಭಿಣಿ ಮಹಿಳೆಯ ವಿಚಾರದಲ್ಲಿ ಸುದ್ದಿಗೋಷ್ಠಿ ಕರೆದಿದ್ದಾಗಲೇ, ಇಂಡಿಯಾನಾ ಆಸ್ಪತ್ರೆಯ ಎಂಡಿ ಯೂಸುಫ್ ಕುಂಬ್ಳೆ, ಪೊಲೀಸರ ವಿರುದ್ಧ ಆರೋಪ ಮಾಡಿದ್ದರು. ನಾವು ಕೂಡ ದೂರು ಕೊಟ್ಟಿದ್ದೆವು. ಪೊಲೀಸರು ಮಾತ್ರ ಸಿಸಿಟಿವಿ ಸಾಕ್ಷ್ಯ ಇಲ್ಲವೆಂದು ಎಫ್ಐಆರ್ ಮಾಡಿರಲಿಲ್ಲ. ಆಸ್ಪತ್ರೆಗೆ ನುಗ್ಗಿ ದಾಂಧಲೆಗೈದ ಆರೋಪಿಯನ್ನೂ ಬಂಧಿಸಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು. ಈ ವಿಚಾರದ ಬಗ್ಗೆ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ್ದ ಪೊಲೀಸ್ ಕಮಿಷನರ್ ಬಳಿ ಪತ್ರಕರ್ತರು ಪ್ರಶ್ನೆ ಮಾಡಿದ್ದರು.
ಇಂಡಿಯಾನಾ ಆಸ್ಪತ್ರೆಯವರು ಸರಿಯಾಗಿ ದೂರನ್ನೇ ನೀಡಿಲ್ಲ. ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಅಥವಾ ದಾಂಧಲೆ ನಡೆಸಿರುವ ಬಗ್ಗೆ ಲಿಖಿತ ದೂರು ನೀಡಿರುತ್ತಿದ್ದರೆ ಎಫ್ಐಆರ್ ಮಾಡುತ್ತಿದ್ದೆವು. ಆರೋಪಿಯನ್ನೂ ಬಂಧಿಸುತ್ತಿದ್ದೆವು ಎಂದು ಹೇಳಿದ್ದರು. ಬಳಿಕ ಕಂಕನಾಡಿ ಪೊಲೀಸರಿಗೆ ಸೂಚನೆಯನ್ನೂ ನೀಡಿದ್ದರಿಂದ ಇಂಡಿಯಾನಾ ಆಸ್ಪತ್ರೆ ಆಡಳಿತದಿಂದಲೇ ಮರಳಿ ದೂರನ್ನು ಸ್ವೀಕರಿಸಿ ಎಫ್ಐಆರ್ ದಾಖಲು ಮಾಡಲಾಗಿತ್ತು. ಆರೋಪಿ ಸುಹೈಲ್ ಕಂದಕ್ ಬಗ್ಗೆ ಸ್ಪಷ್ಟವಾಗಿ ನಮೂದಿಸಿದ್ದರಿಂದ ಪೊಲೀಸರು ಸುಹೈಲ್ ನನ್ನು ಫೋನ್ ಮಾಡಿ, ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ. ಆದರೆ, ಪೊಲೀಸರು ಹೇಳಿದರೂ, ಸುಹೈಲ್ ಕಂದಕ್ ಬಂದಿರಲಿಲ್ಲ. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಹೈಲ್ಯಾಂಡ್ ಹಾಸ್ಪಿಟಲ್ ಬಳಿಯಿದ್ದೇನೆಂದು ತಿಳಿಸಿದನ್ವಯ ಪೊಲೀಸರು ತೆರಳಿ, ಆತನನ್ನು ಜೀಪಿನಲ್ಲಿ ಹಾಕಿ ಠಾಣೆಗೆ ಕರೆತಂದಿದ್ದಾರೆ.
ಹೈಡ್ರಾಮಾ ನಡೆಸಿದ ಕಾಂಗ್ರೆಸಿಗರು
ಇಷ್ಟಾಗುತ್ತಿದ್ದಂತೆ, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮಿಥುನ್ ರೈ ನೇತೃತ್ವದಲ್ಲಿ ಠಾಣೆ ಮುಂದೆ ಸೇರಿದ್ದಾರೆ. ಸ್ವಲ್ಪ ಹೊತ್ತಿಗೆ ಜೆ.ಆರ್. ಲೋಬೊ, ಐವಾನ್ ಡಿಸೋಜ ಕೂಡ ಆಗಮಿಸಿ, ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿ ಸೇರಿದ್ದ ಕಾರ್ಯಕರ್ತರು ಲಾಕ್ಡೌನ್ ಉಲ್ಲಂಘಿಸಿ, ಸೇರಿದ್ದಲ್ಲದೆ ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ. ಹೈಡ್ರಾಮಾ ಆಗುತ್ತಿದ್ದಂತೆ, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಕೂಡ ಠಾಣೆ ಒಳಗೆ ತೆರಳಿ, ಮಾತುಕತೆ ನಡೆಸಿದ್ದಾರೆ. ಎಫ್ಐಆರ್ ದಾಖಲಾಗಿದೆ, ದೂರು ಹಿಂಪಡೆದಲ್ಲಿ ಆರೋಪಿಯನ್ನು ಬಿಟ್ಟು ಕೊಡಬಹುದು. ಎಫ್ಐಆರ್ ದಾಖಲು ಮಾಡಿದ ಬಳಿಕ ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದಾರೆಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಕಾಂಗ್ರೆಸ್ ಮುಖಂಡರಿಗೆ ಸೂಚ್ಯವಾಗಿ ತಿಳಿಸಿದ್ದಾರೆ.
ಕಮಿಷನರ್ ಮಾತುಕೇಳಿ ಎಚ್ಚೆತ್ತ ಕಾಂಗ್ರೆಸ್ ಮುಖಂಡರು ಇಂಡಿಯಾನಾ ಆಸ್ಪತ್ರೆಯ ಧಣಿ ಯೂಸುಫ್ ಕುಂಬ್ಳೆ ಬಳಿ ಮಾತನಾಡಿ ದೂರನ್ನೇ ಹಿಂಪಡೆಯುವಂತೆ ಮಾಡಿದ್ದಾರೆ. ಆಸ್ಪತ್ರೆ ಕಡೆಯಿಂದ ಕಂಕನಾಡಿ ಪೊಲೀಸರಿಗೆ ರಿಕ್ವೆಸ್ಟ್ ಲೆಟರ್ ಕಳಿಸಿ, ದೂರು ಹಿಂಪಡೆಯುವುದಾಗಿ ಲಿಖಿತ ಮನವಿ ಮಾಡಿಕೊಂಡಿದ್ದಾರೆ. ಅದರಂತೆ, ಪೊಲೀಸ್ ಕಮಿಷನರ್ ಎಫ್ಐಆರ್ ರದ್ದುಪಡಿಸಿ ಕಾಂಗ್ರೆಸಿಗರ ಹೈಡ್ರಾಮಾಕ್ಕೆ ಇತಿಶ್ರೀ ಹಾಡಿದ್ದಾರೆ.
ಸುಹೈಲ್ ಬಂಧನಕ್ಕೆ ರೆಕ್ಕೆಪುಕ್ಕ
ಇದೇ ವೇಳೆ, ಸುಹೈಲ್ ಕಂದಕ್ ಬಂಧನದ ಸುದ್ದಿ ಮಾತ್ರ ಸಮಾಜದಲ್ಲಿ ಬೇರೆಯದ್ದೇ ಅರ್ಥ ಪಡೆದಿತ್ತು. ಸುಹೈಲ್ ಕಂದಕ್, ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಸಿಕ್ಕಾಪಟ್ಟೆ ಬಿಲ್ ಮಾಡುತ್ತಿದ್ದುದನ್ನು ಪ್ರಶ್ನಿಸಿ ಹೋರಾಟ ರೂಪಿಸಿದ್ದಕ್ಕಾಗಿ ಪೊಲೀಸರ ಜೊತೆ ಸೇರಿ ಬಂಧಿಸಲು ಹುನ್ನಾರ ನಡೆಸಿದ್ದಾರೆಂದು ಬಿಂಬಿಸಲಾಗಿತ್ತು. ಇದೇ ವಿಚಾರ, ಜಾಲತಾಣದಲ್ಲಿ ಭಾರೀ ವದಂತಿಗೂ ಕಾರಣವಾಗಿತ್ತು. ಕೊನೆಗೆ ಎಲ್ಲವೂ ಠುಸ್ಸ್ ಆಯ್ತು. ಸುಹೈಲ್ ಪಾರಾಗಿ ಬಂದರೆ, ಅಪರಾತ್ರಿಯಲ್ಲಿ ಬೈಗುಳ ಕೇಳಿ, ಸಮಸ್ಯೆ ಅನುಭವಿಸಿದವರು ತಮ್ಮ ಧಣಿಗಳು ಕೇಸ್ ಹಿಂಪಡೆಯುತ್ತಿದ್ದಂತೆ ಪೆಚ್ಚು ಮೋರೆ ಹಾಕುವಂತಾಗಿತ್ತು.
Read: ಇಂಡಿಯಾನಾ ಆಸ್ಪತ್ರೆಯಲ್ಲಿ ದಾಂಧಲೆ ಪ್ರಕರಣ ; ಸುಹೈಲ್ ಕಂದಕ್ ಬಂಧನ ಪ್ರಶ್ನಿಸಿ ಕಾಂಗ್ರೆಸ್ ಕಾರ್ಯಕರ್ತರ ಘೆರಾವ್
The Managing Director of Indiana Hospital Yusuf Kumble has withdrawn the complaint filed against Youth Congress leader Suhail Kandak in the Kankanady police station on June 4.
09-08-25 03:32 pm
HK News Desk
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
Bigg Boss Rajath, Death Threats, Soujanya: ಯೂ...
08-08-25 11:20 am
ಸರ್ಕಾರಿ ಕೆಲಸ ಕೊಡಿಸೋದಾಗಿ 25 ಲಕ್ಷ ಪಡೆದು ವಂಚನೆ ;...
07-08-25 10:18 pm
09-08-25 02:49 pm
HK News Desk
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
09-08-25 04:22 pm
Mangaluru Correspondent
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
SIT, Kalleri, Buried Schoolgirl, Dharmasthala...
08-08-25 09:25 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm