ಬ್ರೇಕಿಂಗ್ ನ್ಯೂಸ್
03-06-21 09:52 pm Mangaluru Correspondant ಕರಾವಳಿ
ಮಂಗಳೂರು, ಜೂನ್ 3: ಗರ್ಭಿಣಿ ಮಹಿಳೆಯೊಬ್ಬರು ತನಗೆ ಕೊರೊನಾ ಸೋಂಕು ಇದೆಯೆಂದು ಖಾಸಗಿ ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡದೇ ವೈದ್ಯರು ತನ್ನ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾರೆ ಎಂದು ಆರೋಪಿಸಿ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಗರದ ಗೈನಕಾಲಜಿಸ್ಟ್ ಡಾ.ಪ್ರಿಯಾ ಬಲ್ಲಾಳ್, ಡಾ.ಜಯಪ್ರಕಾಶ್ ಶೆಟ್ಟಿ ಸೇರಿ ಐದು ವೈದ್ಯರ ವಿರುದ್ಧ ಮಹಿಳೆ ದೂರು ನೀಡಿದ್ದು, ವಾರದ ಹಿಂದೆ ಆಸ್ಪತ್ರೆಗೆ ತೆರಳಿದ್ದಾಗ ತನ್ನನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದೆ ಸತಾಯಿಸಿದ್ದಾರೆ ಎಂದು ದೂರಿದ್ದಾರೆ. ಕಾಟಿಪಳ್ಳದ ಖತೀಜಾ ಜಾಸ್ಮಿನ್ ಎಂಬ ಮಹಿಳೆ ಹೆರಿಗೆ ನೋವು ಇದೆಯೆಂದು ಆಸ್ಪತ್ರೆಗೆ ಬಂದಿದ್ದರು ಎನ್ನಲಾಗಿದ್ದು, ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ಕಂಡುಬಂದಿತ್ತು. ಇದರಿಂದಾಗಿ ನಿಮ್ಮನ್ನು ಅಡ್ಮಿಟ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.
ಆನಂತರ ಅಥೆನಾ ಸೇರಿದಂತೆ ಬೇರೆ ಕೆಲವು ಆಸ್ಪತ್ರೆಗಳಿಗೂ ಅಲೆದಾಡಿದ್ದು ಅಲ್ಲಿಯೂ ದಾಖಲು ಮಾಡಿಕೊಳ್ಳದೆ ಸತಾಯಿಸಿದ್ದಾರೆ. ಕೊನೆಗೆ, ಲೇಡಿಗೋಷನ್ ಆಸ್ಪತ್ರೆಯಲ್ಲಿ ಸೇರ್ಪಡೆಗೊಂಡು ಸುರಕ್ಷಿತ ಹೆರಿಗೆ ಆಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಇದೇ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದ ವಿಚಾರದಲ್ಲಿ ಕೆಲವು ಯುವಕರು ಅಥೆನಾ ಆಸ್ಪತ್ರೆಯ ವೈದ್ಯ ಡಾ.ಜಯಪ್ರಕಾಶ್ ಶೆಟ್ಟಿ ಜೊತೆ ಜಟಾಪಟಿ ನಡೆಸಿದ್ದು, ಜೀವ ಬೆದರಿಕೆ ಹಾಕಿದ್ದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಯಪ್ರಕಾಶ್ ಶೆಟ್ಟಿ ನೀಡಿರುವ ದೂರಿನಂತೆ ಪೊಲೀಸರು, ಪ್ರಕರಣ ದಾಖಲಿಸಿ ಒಬ್ಬಾತನನ್ನು ಬಂಧಿಸಿದ್ದರು. ಆದರೆ ಇವೆಲ್ಲ ಘಟನೆ ನಡೆದು ಒಂದು ವಾರದ ಬಳಿಕ ಗರ್ಭಿಣಿ ಮಹಿಳೆ ಡಾ.ಪ್ರಿಯಾ ಬಳ್ಳಾಲ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತನ್ನನ್ನು ಸೇರಿಸಿಕೊಳ್ಳದೆ ಸತಾಯಿಸಿದ್ದಾರೆಂದು ದೂರು ನೀಡಿದ್ದು ಸಂಶಯಕ್ಕೆ ಕಾರಣವಾಗಿದೆ. ಇದರ ಹಿಂದೆ ಯಾರೋ ಕೆಲವರು ಕೈಯಾಡಿಸಿದ್ದಾರೆಂಬ ಮಾತೂ ಕೇಳಿಬರುತ್ತಿದೆ. ಈ ಬಗ್ಗೆ ಡಾ.ಜಯಪ್ರಕಾಶ್ ಶೆಟ್ಟಿ ಕೇಳಿದರೆ, ಒಟ್ಟು ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇದೇ ವೇಳೆ, ಪ್ರಿಯಾ ಬಳ್ಳಾಲ್ ಸೇರಿದಂತೆ ವೈದ್ಯರ ಪರವಾಗಿ ಮಂಗಳೂರಿನ ಐಎಂಎ ವೈದ್ಯರ ಸಂಘ ಸುದ್ದಿಗೋಷ್ಠಿ ಕರೆದು ಬ್ಯಾಟಿಂಗ್ ಮಾಡಲು ಸಿದ್ಧತೆ ನಡೆಸಿದೆ.
ಮೆಟರ್ನಿಟಿ ಬ್ಲಾಕ್ ಎಲ್ಲ ಕಡೆ ಇಲ್ಲ !
ಗರ್ಭಿಣಿ ಮಹಿಳೆಯರಿಗೆ ಕೊರೊನಾ ಸೋಂಕು ಇದ್ದಲ್ಲಿ ಅವರನ್ನು ಸಾದಾ ವಾರ್ಡ್ ಗಳಲ್ಲಿ ದಾಖಲು ಮಾಡಿಕೊಳ್ಳುವಂತಿಲ್ಲ. ಮೆಟರ್ನಿಟಿ ಬ್ಲಾಕ್ ಗಳಲ್ಲಿಯೇ ದಾಖಲು ಮಾಡಿಕೊಳ್ಳಬೇಕೆಂದು ಮಾರ್ಗಸೂಚಿ ಇದೆ. ಆದರೆ, ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಈ ಬಗ್ಗೆ ಪ್ರತ್ಯೇಕ ಮೆಟರ್ನಿಟಿ ವಾರ್ಡ್ ಇರುವುದಿಲ್ಲ. ಹೀಗಾಗಿ ಕೆಲವು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ದಾಖಲು ಮಾಡಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತವೆ. ಸರಕಾರಿ ಲೇಡಿಗೋಷನ್ ಆಸ್ಪತ್ರೆ ಸುಸಜ್ಜಿತ ಆಗಿರುವುದಲ್ಲದೆ ಆಧುನಿಕ ಸೌಲಭ್ಯಗಳನ್ನು ಹೊಂದಿರುವುದಲ್ಲದೆ, ಕಳೆದ ಬಾರಿ ಕೊರೊನಾ ಸೋಂಕು ಕಂಡುಬಂದ ಬಳಿಕ ಅದಕ್ಕಾಗಿಯೇ ಪ್ರತ್ಯೇಕ ಮೆಟರ್ನಿಟಿ ಬ್ಲಾಕ್ ಮಾಡಲಾಗಿದೆ.
Mangalore Denied timely treatment Covid pregnant woman files Complaint on Doctors at Kadri Police Station. Few backs back family of the woman had assaulted and threatened the doctor for not treating her because of Covid in which Doctor Jayaprakash Shetty had filed a complaint at the same Kadri Police Station.
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 04:22 pm
Mangaluru Correspondent
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
SIT, Kalleri, Buried Schoolgirl, Dharmasthala...
08-08-25 09:25 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm