ಬ್ರೇಕಿಂಗ್ ನ್ಯೂಸ್
26-05-21 01:25 pm Mangalore Correspondent ಕರಾವಳಿ
ಮಂಗಳೂರು, ಮೇ 26 : ದೇಶದಲ್ಲಿ ಅತ್ಯಂತ ಹೆಚ್ಚು ಜನರು ಓಡಾಡುವ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ 2019-20ರಲ್ಲಿ 29ನೇ ರ್ಯಾಂಕ್ ಪಡೆದಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಾಕ್ಡೌನ್ ವರ್ಷದಲ್ಲಿ ತೀವ್ರ ಪರಿಣಾಮ ಎದುರಾಗಿದ್ದು ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಇದರ ಜೊತೆಗೆ 2020- 21ನೇ ಸಾಲಿನಲ್ಲಿ ರ್ಯಾಂಕಿಂಗ್ ಕೂಡ 31ನೇ ಸ್ಥಾನಕ್ಕೆ ಕುಸಿದಿದೆ.
2019-20ರಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ಸೇರಿ ಒಟ್ಟಾರೆ 18,76,294 ಮಂದಿ ಪ್ರಯಾಣಿಸಿದ್ದರು. 2020- 21ನೇ ಸಾಲಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.67.2ರಷ್ಟು ಕುಸಿತ ಕಂಡಿದ್ದು, ಕೇವಲ 6,14,845 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಒಟ್ಟು ಪ್ರಯಾಣಿಕರ ನಿರ್ವಹಣೆಯಲ್ಲಿ 2019-20ರಲ್ಲಿ 29ನೇ ರ್ಯಾಂಕ್ ನಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣ ಈಗ ಎರಡು ಸ್ಥಾನಕ್ಕೆ ಕುಸಿದು 31ನೇ ಸ್ಥಾನಕ್ಕೆ ಇಳಿದಿದೆ.


2020-21ನೇ ಸಾಲಿನಲ್ಲಿ 1,52,434 ಅಂತಾರಾಷ್ಟ್ರೀಯ ಪ್ರಯಾಣಿಕರು ಸಂಚರಿಸಿದ್ದು, ಶೇ.73.3ರಷ್ಟು ಕುಸಿತ ಕಂಡಿದೆ. 2019-20ರಲ್ಲಿ ಒಟ್ಟು 5,71,226 ಪ್ರಯಾಣಿಕರ ನಿರ್ವಹಣೆಯಾಗಿತ್ತು. ಇದೇ ಅವಧಿಯಲ್ಲಿ 4,62,411 ದೇಶೀಯ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದು , ಶೇ.75.9ರಷ್ಟು ಕುಸಿತ ದಾಖಲಾಗಿದೆ. 2019- 20ರಲ್ಲಿ ಒಟ್ಟು 13,05,068 ಪ್ರಯಾಣಿಕರ ನಿರ್ವಹಣೆಯಾಗಿತ್ತು.
ಲಾಕ್ಡೌನ್ ಕಾರಣದಿಂದ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿದ್ದು ಇದರಿಂದ ಶ್ರೇಯಾಂಕವೂ ಕುಸಿತವಾಗಿದೆ.
The international airport here, which had been allotted 29th rank in the year 2019-20, has slipped to No. 31 in the year 2020-21 in the ranking list of 50 top airports with the highest passenger traffic in India due to the lockdown effect.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm