ಬ್ರೇಕಿಂಗ್ ನ್ಯೂಸ್
16-05-21 12:45 pm Mangaluru Correspondent ಕರಾವಳಿ
ಮಂಗಳೂರು, ಮೇ 16: ಎಂಆರ್ ಪಿಎಲ್ ಅಡಿ ಗುತ್ತಿಗೆ ಕೆಲಸ ಮಾಡುತ್ತಿರುವ ಮತ್ತೊಂದು ಟಗ್ ಸಮುದ್ರ ಮಧ್ಯೆ ಅಪಾಯಕ್ಕೀಡಾಗಿದ್ದು ಅದರಲ್ಲಿ ಒಂಬತ್ತು ಮಂದಿ ಕಾರ್ಮಿಕರಿದ್ದಾರೆಂಬ ಮಾಹಿತಿಯಿದೆ. ಟಗ್ ಮತ್ತು ಕಾರ್ಮಿಕರ ರಕ್ಷಣೆಗೆ ಕೋಸ್ಟ್ ಗಾರ್ಡ್ ಪಡೆ ಕಾರ್ಯಾಚರಣೆ ನಡೆಸುತ್ತಿದೆ.
ಮಂಗಳೂರಿನ ಎಂಆರ್ ಪಿಎಲ್ ಕಚ್ಚಾ ತೈಲ ಹೊತ್ತು ತರುವ ಬೃಹತ್ ಹಡಗುಗಳಿಂದ ತೈಲ ಪೂರೈಕೆಗೆ ಸಹಕರಿಸಲು ಟಗ್ ನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಎನ್ಎಂಪಿಟಿ ಬಂದರು ವ್ಯಾಪ್ತಿಗೆ ಬರುವ ಟಗ್ ನಲ್ಲಿ ಜನರೇಟರ್ ಸಮಸ್ಯೆ ಆಗಿ ಇಂಜಿನ್ ಕೆಟ್ಟು ಹೋಗಿದ್ದು ಚಂಡಮಾರುತದ ನಡುವೆ ಅಪಾಯಕ್ಕೀಡಾಗಿದೆ.

ಚಂಡಮಾರುತದ ಮುನ್ಸೂಚನೆ ಇದ್ದರೂ, ಎನ್ಎಂಪಿಟಿ ಬಂದರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಟಗ್ ಅನ್ನು ದಡಕ್ಕೆ ತರುವ ಕೆಲಸ ಮಾಡಿರಲಿಲ್ಲ. ಶನಿವಾರ ಟಗ್ ಅಪಾಯಕ್ಕೀಡಾದ ಬಗ್ಗೆ ಕೋಸ್ಟ್ ಗಾರ್ಡ್ ಪಡೆಗೆ ಮಾಹಿತಿ ನೀಡಲಾಗಿದ್ದು ಐಸಿಜಿ ಶಿಪ್ ಮೂಲಕ ಕಾರ್ಯಾಚರಣೆಗೆ ಪ್ರಯತ್ನ ನಡೆದಿದೆ. ಆದರೆ ಸಮುದ್ರ ಬಿರುಸಾಗಿರುವುದರಿಂದ ಟಗ್ ಇರುವಲ್ಲಿಗೆ ಹಡಗು ತೆರಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೂರದಲ್ಲಿ ನಿಂತು ಟಗ್ ಬಗ್ಗೆ ನಿಗಾ ಇಡಲಾಗುತ್ತಿದೆ.
ಸದ್ಯಕ್ಕೆ ಪಡುಬಿದ್ರಿ ಬಳಿಯ ಸಮುದ್ರದಲ್ಲಿ ಅಂದರೆ, ಮಂಗಳೂರಿನ ಎನ್ಎಂಪಿಟಿ ಬಂದರಿನಿಂದ 15 ನಾಟಿಕಲ್ ದೂರದಲ್ಲಿ ಟಗ್ ಉಳಿದುಕೊಂಡಿದ್ದು ಅದರಲ್ಲಿರುವ ಒಂಬತ್ತು ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಬೆಳಗ್ಗಿನ ಮಾಹಿತಿ ಪ್ರಕಾರ, ಚಂಡಮಾರುತದ ಅಬ್ಬರ ಕಡಿಮೆಯಾಗಿದ್ದು ಸಮುದ್ರ ಶಾಂತ ಸ್ಥಿತಿಗೆ ಮರಳುತ್ತಿದೆ. ಚಂಡಮಾರುತ ಉತ್ತರ ಭಾಗದತ್ತ ತೆರಳುತ್ತಿರುವುದರಿಂದ ಸಮುದ್ರದ ಅಬ್ಬರ ಇಂದು ಸಂಜೆ ಹೊತ್ತಿಗೆ ಕಡಿಮೆಯಾಗಲಿದ್ದು ಆನಂತರ ಟಗ್ ಅನ್ನು ಅಪಾಯದಿಂದ ರಕ್ಷಿಸುವ ಕಾರ್ಯಾಚರಣೆ ನಡೆಯಲಿದೆ. ಸದ್ಯಕ್ಕೆ ಎರಡು ಕಿಮೀ ಅಂತರದಲ್ಲಿ ಕೋಸ್ಟ್ ಗಾರ್ಡ್ ಪಡೆ ಟಗ್ ಬಗ್ಗೆ ನಿಗಾ ಇಟ್ಟಿದೆ ಎನ್ನುವ ಮಾಹಿತಿ ಕೋಸ್ಟ್ ಗಾರ್ಡ್ ನಿಂದ ಸಿಕ್ಕಿದೆ.
Read: ಎಂಆರ್ ಪಿಎಲ್ ಟಗ್ ಬೋಟ್ ಸಮುದ್ರ ಮಧ್ಯೆ ಪಲ್ಟಿ ; ಆರು ಮಂದಿ ನಾಪತ್ತೆ , ಒಬ್ಬನ ಶವ ಪತ್ತೆ , ಇಬ್ಬರು ಪವಾಡಸದೃಶ ಪಾರು !
Mangalore MRPL tugboat named Alliance with 9 fishermen stranded in danger by cyclone tauktae near Moodbidri. The Mangalore Coast guard ship has reached the spot for the rescue operation. Last night another Tugboat with 5 fishermen capsized in which one was found dead.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm