ಬ್ರೇಕಿಂಗ್ ನ್ಯೂಸ್
15-05-21 10:27 pm Mangaluru Correspondent ಕರಾವಳಿ
ಮಂಗಳೂರು, ಮೇ 15: ತೀವ್ರ ಚಂಡಮಾರುತದ ಪರಿಣಾಮ ಎನ್ಎಂಪಿಟಿ ಬಂದರಿನ ಬಳಿ ಸಮುದ್ರ ಮಧ್ಯೆ ಒಂಬತ್ತು ಕಾರ್ಮಿಕರಿದ್ದ ಟಗ್ ಮಗುಚಿ ಬಿದ್ದಿದ್ದು ಒಬ್ಬನ ಶವ ಪತ್ತೆಯಾಗಿದೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ.
ಮಂಗಳೂರಿನ ಎಂಆರ್ ಪಿಎಲ್ ರಿಫೈನರಿಗೆ ಸೇರಿದ ಟಗ್ ಬೋಟ್ ಆಗಿದ್ದು ಬೃಹದ್ಗಾತ್ರದ ಹಡಗುಗಳಿಂದ ಕಚ್ಚಾತೈಲ ಇಳಿಸಲು ಬಳಸಲಾಗುತ್ತಿತ್ತು. ಸಮುದ್ರ ಮಧ್ಯೆ ಕಾರ್ಯಾಚರಣೆ ವೇಳೆ ಟಗ್ ತೀವ್ರ ಗಾಳಿಗೆ ಮಗುಚಿದ್ದು ಕಾರ್ಮಿಕರಾಗಿದ್ದ ಹೇಮಚಂದ್ರ ಜಾ ಎಂಬವರ ಶವ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ.
ಟಗ್ ಬೋಟಿನಲ್ಲಿ ಒಟ್ಟು ಒಂಬತ್ತು ಜನರು ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಮಂಗಳೂರಿನ ಪಣಂಬೂರಿನ ಬಂದರಿನಿಂದ ಕೆಲವೇ ನಾಟಿಕಲ್ ಮೈಲು ದೂರದಲ್ಲಿ ಘಟನೆ ನಡೆದಿದೆ.
ಚಂಡಮಾರುತದಿಂದ ಎದ್ದ ಬೃಹತ್ ಅಲೆಗೆ ಟಗ್ ಮಗುಚಿ ಬಿದ್ದಿದೆ ಎನ್ನಲಾಗುತ್ತಿದ್ದು ಬೋಟಿನಲ್ಲಿದ್ದ 9 ಜನರು ನೀರುಪಾಲಾಗಿದ್ದರು. ಈ ಪೈಕಿ ಇಬ್ಬರು ಟ್ಯೂಬಿನ ಸಹಾಯದಿಂದ ಸತತ ಎಂಟು ಗಂಟೆ ಕಾಲ ಈಜಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಸಮುದ್ರ ಮಧ್ಯೆ ಉಡುಪಿಯ ಮಟ್ಟು ಕೊಪ್ಪಲು ಎಂಬಲ್ಲಿ ಕಾಣಿಸಿಕೊಂಡ ಇಬ್ಬರನ್ನು ಸ್ಥಳೀಯರು ದೋಣಿ ಮೂಲಕ ದಡಕ್ಕೆ ಎಳೆದು ರಕ್ಷಿಸಿದ್ದಾರೆ. ಉಳಿದವರ ಪತ್ತೆಗಾಗಿ ಕರಾವಳಿ ಕಾವಲು ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಉಡುಪಿಯಲ್ಲಿ ಆಸ್ಪತ್ರೆಗೆ ದಾಖಲು
ಟಗ್ ಮಗುಚಿ, ಎಂಟು ಗಂಟೆ ಕಾಲ ಈಜಿ ಜೀವ ಉಳಿಸಿಕೊಂಡ ಇಬ್ಬರಿಗೆ ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಪಶ್ಚಿಮ ಬಂಗಾಳ ಮೂಲದ ಮೊಮಿರುಲ್ ಮುಲ್ಲಾ( 34) ಹಾಗೂ ಕರೀಮುಲ್ಲಾ ಶೇಕ್ (24) ಸಾವಿನ ದವಡೆಗೆ ಸಿಲುಕಿ ಪಾರಾಗಿ ಬಂದವರು. ಮಂಗಳೂರಿನ ಸುರತ್ಕಲ್ ನಿಂದ 17 ನಾಟಿಕಲ್ ದೂರದಲ್ಲಿ ದುರಂತ ನಡೆದಿತ್ತು.
Six fishermen go missing after Mangalore MRPL Tug boat capsizes due to Cyclone Tauktae in which one has been found dead and two have been rescued and have been admitted to govt hospital in Udupi. The search is on for the three.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm