ಬ್ರೇಕಿಂಗ್ ನ್ಯೂಸ್
13-05-21 01:13 pm Udupi Correspondent ಕರಾವಳಿ
Photo credits : vijaykarnataka
ಉಡುಪಿ, ಮೇ 13: ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ 15 ವರ್ಷದ ಬಾಲಕನನ್ನು ನೇಮಿಸುತ್ತಿರುವುದು ಮತ್ತು ಅದಕ್ಕಾಗಿ ಲಾಕ್ಡೌನ್ ನಿರ್ಬಂಧ ಮಧ್ಯೆಯೇ ಪಟ್ಟಾಭಿಷೇಕ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಈ ಹಿಂದೆ ಉಡುಪಿ ಪೇಜಾವರ ಮಠದಲ್ಲಿ ಮಠಾಧೀಶರಾಗಿದ್ದ ವಿಶ್ವವಿಜಯ ಸ್ವಾಮೀಜಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಶ ಮತ್ತು ರಾಜ್ಯದಲ್ಲಿ ಕೊರೊನಾ ಸೋಂಕಿನಿಂದಾಗಿ ಜನ ತತ್ತರಿಸಿ ಹೋಗಿದ್ದು ಸರಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಆದರೆ, ಶೀರೂರು ಮೂಲಮಠದಲ್ಲಿ ನೂತನ ಯತಿ ನೇಮಕದ ಧಾರ್ಮಿಕ ಕಾರ್ಯ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ನೂತನ ಯತಿಯ ನೇಮಕ ಆಗುತ್ತಿರುವುದು ತುಂಬಾ ಶೋಚನೀಯ. ಲಾಕ್ಡೌನ್ ಹೇರಿದ್ದರಿಂದ ಈ ಸಂದರ್ಭದಲ್ಲಿ ಅನೇಕ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪಟ್ಟಾಭಿಷೇಕ ಕಾರ್ಯದಲ್ಲಿ ಕೊರೋನಾ ರೂಲ್ಸ್ ಗಳನ್ನು ಫಾಲೋ ಮಾಡಲು ಸಾಧ್ಯವಾಗುವುದಿಲ್ಲ. ಹಾಗಿದ್ದರೂ, ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದು ಎಷ್ಟು ಸರಿ ಎಂದು ವಿಶ್ವವಿಜಯ ಪ್ರಶ್ನೆ ಮಾಡಿದ್ದಾರೆ.
2018-2019 ರಲ್ಲಿ ಬಾಲ ಸಂನ್ಯಾಸ ಸ್ವೀಕಾರದ ವಿಚಾರದಲ್ಲಿ ಅಷ್ಟ ಮಠಾಧೀಶರ ವಿರುದ್ಧ ಕೋರ್ಟಿನಲ್ಲಿ ಕೇಸು ಹಾಕಿದ್ದೇನೆ. ಬಾಲಸಂನ್ಯಾಸ ಮಾಡಲು ಅವಕಾಶ ನೀಡಬಾರದು ಎಂದು ಕೋರ್ಟಿಗೆ ಮೊರೆ ಹೋಗಿದ್ದೇನೆ. ಇದೀಗ 15 ವರ್ಷದ ಬಾಲಕನಿಗೆ ಸನ್ಯಾಸ ನೀಡಲಾಗುತ್ತಿದೆ. ಇದು ಅಶಾಸ್ತ್ರೀಯ ಮತ್ತು ಅವೈಜ್ಞಾನಿಕ ನಡೆ. ವೈರಾಗ್ಯ ಬಂದಾಗ ಸನ್ಯಾಸ ನೀಡಬೇಕು ಎಂದು ಮಧ್ವ ವಿಜಯದಲ್ಲಿ ಹೇಳಿದೆ. ವೇದಾಂತ, ತರ್ಕ, ಸಂಸ್ಕೃತ ಜ್ಞಾನ ಇಲ್ಲದ ಅಪ್ರಾಪ್ತ ಬಾಲಕನಿಗೆ ವೈರಾಗ್ಯ ಬರುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಬಾಲಸಂನ್ಯಾಸ ರದ್ದಾಗಬೇಕು ಎಂದು ಕಾನೂನು ಹೋರಾಟ ಮಾಡುತ್ತಿದ್ದೇನೆ. ಬಾಲಸಂನ್ಯಾಸದಿಂದ ಅಷ್ಟಮಠಗಳಲ್ಲಿ ಅನರ್ಥಗಳು ಆಗುತ್ತಿದ್ದವು. ವಿದ್ಯಾಮಾನ್ಯ ಮತ್ತು ವಿಶ್ವೇಶತೀರ್ಥರು ಕೂಡ ಬಾಲಸಂನ್ಯಾಸ ಅಸಮಂಜಸ ಎಂದಿದ್ದರು. ಇದನ್ನು ಕಡೆಗಣಿಸಿ ಶಿರೂರು ಮಠಕ್ಕೆ ಯತಿ ನೇಮಿಸುತ್ತಿರುವ ಸೋದೆ ಮಠಾಧೀಶರ ನಡೆ ಸರಿಯಲ್ಲ ಎಂದು ಹೇಳಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸುವಂತಿಲ್ಲ. ಹೀಗಿದ್ದರೂ ಈ ಕಾರ್ಯಕ್ರಮಕ್ಕೆ ಹೇಗೆ ಅವಕಾಶ ನೀಡಲಾಗಿದೆ. ಅಲ್ಲದೆ ಈ ವಿಚಾರ ಕೋರ್ಟಿನಲ್ಲಿ ಇರುವಾಗ ಉತ್ತರಾಧಿಕಾರಿ ನೇಮಕ ಸರಿಯಲ್ಲ. ಲಾಕ್ಡೌನ್ ಸಮಯದಲ್ಲಿ ಇದರ ವಿರುದ್ಧ ಕೋರ್ಟ್ ಮೊರೆ ಹೋಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸುಮ್ಮನಿದ್ದೇನೆ ಎಂದಿದ್ದಾರೆ.
Read: ಮೇ 11ರಿಂದ 14 : ಶಿರೂರು ಮಠದಲ್ಲಿ ನೂತನ ಉತ್ತರಾಧಿಕಾರಿಗೆ ಪಟ್ಟಾಭಿಷೇಕ ಪರ್ವ
The anointment of minor 16-year-old minor Anirudha Saralaya to successor of Sri Shiroor Mutt is inappropriate says Udupi Pejavar Math vishwavijaya.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm