ಬ್ರೇಕಿಂಗ್ ನ್ಯೂಸ್
11-05-21 07:42 pm Mangaluru Correspondent ಕರಾವಳಿ
ಮಂಗಳೂರು, ಮೇ 11: ಲಾಕ್ಡೌನ್ ಕಾರಣದಿಂದ ಮದುವೆ ಸಮಾರಂಭಗಳನ್ನು ಜನ ಸೇರಬಾರದೆಂಬ ನೆಲೆಯಲ್ಲಿ 40 ಮಂದಿಗೆ ಸೀಮಿತಗೊಳಿಸಿ, ರಾಜ್ಯ ಸರಕಾರ ನಿರ್ಬಂಧ ವಿಧಿಸಿದೆ. ಆದರೆ, ಅಡ್ಯಾರಿನಲ್ಲಿ ಮದುವೆ ಕಾರ್ಯಕ್ರಮ ನಡೆದು ರಾತ್ರಿ ವೇಳೆ, ಮನೆಯಲ್ಲೇ ಗಡದ್ದಾಗಿ ಪಾರ್ಟಿ ನಡೆದಿರುವುದು ಪೊಲೀಸ್ ಕೇಸು ಎದುರಿಸುವಂತಾಗಿದೆ.
ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಅಡ್ಯಾರ್ ಬಳಿಯ ಕೋಡಿಮಜಲು ಎಂಬಲ್ಲಿ ನಿನ್ನೆ ರಾತ್ರಿ ಮದುವೆ ಪಾರ್ಟಿ ನಡೆದಿತ್ತು. 40 ಜನಕ್ಕೆ ಮಾತ್ರ ಸೀಮಿತಗೊಳಿಸಿ, ನಡೆಸುವಂತೆ ಸ್ಥಳೀಯ ಪಂಚಾಯತ್ ನಿಂದ ಅನುಮತಿ ನೀಡಲಾಗಿತ್ತು. ಆದರೆ, ಮದುವೆ ದಿನ ರಾತ್ರಿ ವೇಳೆ ಯುವಕರು ಡಿಜೆ ಸೌಂಡ್ಸ್ ಹಾಕಿ ಕುಣಿದು ಕುಪ್ಪಳಿಸಿದ್ದಾರೆ.


ಸಮಾರಂಭದಲ್ಲಿಯೂ ಸಾಮಾಜಿಕ ಅಂತರ, ಮಾಸ್ಕ್ ಹಾಕಬೇಕೆಂಬ ನಿಯಮ ಇದ್ದರೂ, ಅದನ್ನು ಗಾಳಿಗೆ ತೂರಿ ವಧೂವರರ ಜೊತೆ ಸೇರಿ ಯುವಕರು ಕುಣಿದಿದ್ದಾರೆ. ಇದರ ವಿಡಿಯೋ ಜಾಲತಾಣದಲ್ಲಿ ಹರಿದಾಡಿದ್ದು, ಲಾಕ್ಡೌನ್ ನಿಯಮ ಮುರಿದು ಕಾರ್ಯಕ್ರಮ ನಡೆಸಲಾಗಿದೆ ಎಂದು ಆಕ್ಷೇಪ ಕೇಳಿಬಂದಿತ್ತು. ವಿಡಿಯೋ ಹರಿದಾಡಿದ್ದರಿಂದ ಸ್ಥಳೀಯ ಪೊಲೀಸರು ಅಲರ್ಟ್ ಆಗಿದ್ದು, ಮನೆಯವರನ್ನು ಠಾಣೆಗೆ ಕರೆಸಿ ಸ್ಪಷ್ಟನೆ ಕೇಳಿದ್ದಾರೆ. ಅಲ್ಲದೆ, ಲಾಕ್ಡೌನ್ ಕಾನೂನು ಮುರಿದು ಸೋಂಕು ಹರಡಲು ಆಸ್ಪದ ನೀಡಿರುವುದಕ್ಕಾಗಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
Video
A Video of a group dancing in a wedding program held at home in Adyar, Mangalore has spread virally on social media breaking the covid lockdown rules. The Kankanady Rural police have filed a case against the organisers.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm