ಬ್ರೇಕಿಂಗ್ ನ್ಯೂಸ್
14-03-21 11:27 am Mangaluru correspondent ಕರಾವಳಿ
ಉಳ್ಳಾಲ, ಮಾ.14: ಗಾಂಜಾ ಸೇದೋ ಚಾಲಿಪೋಲಿಗಳಿಗೆ ಕುಂಪಲ ಪರಿಸರದ ಜನರು ಹೆದರೋಕೆ ನಾವೇನು ಪಾಕಿಸ್ಥಾನದಲ್ಲಿಲ್ಲ. ಮುಂದೆ ಯಾರಾದರೂ ಗಾಂಜಾ ಸೇದೋದು ಕಂಡುಬಂದರೆ ಅವರನ್ನು ಕುಂಪಲದಿಂದಲೇ ಓಡಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕುಂಪಲ ಪರಿಸರದಲ್ಲಿ ಗಾಂಜಾ ವ್ಯಸನ ಅವ್ಯಾಹತವಾಗಿರುವುದರ ವಿರುದ್ದ ಸ್ಥಳೀಯರ ಒಟ್ಟು ಸೇರುವಿಕೆಯಲ್ಲಿ ಆಶ್ರಯ ಕಾಲನಿಯಿಂದ ಕುಂಪಲ ಶಾಲೆಯ ವರೆಗೆ ಇಂದು ನಡೆದ ಮೌನ ಪ್ರತಿಭಟನೆ ಜಾಥಾವನ್ನುದ್ದೇಶಿಸಿ ಅವರು ಮಾತನಾಡಿದರು.
ಕುಂಪಲ ಆಶ್ರಯ ಕಾಲನಿಯಲ್ಲಿ ಕಳೆದ ಬುಧವಾರ ಅನುಮಾನಸ್ಪದವಾಗಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರೇಕ್ಷಳ ಸಾವಿನ ಹಿಂದೆ ಗಾಂಜಾ ವ್ಯಸನಿಗಳ ಕೈವಾಡವಿದೆಯೆಂಬ ಗಂಭೀರ ಆರೋಪ ಕೇಳಿಬಂದಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸತೀಶ್ ಕುಂಪಲ ಅವರು ಆಶ್ರಯ ಕಾಲನಿಯಲ್ಲಿ ಇಂದು ಮನೆಯಿಂದ ಹೊರಗೆ ಬರಲು ಜನರು ಹೆದರೋ ವಾತಾವರಣ ನಿರ್ಮಾಣವಾಗಿದೆ. ಗಾಂಜಾ ವ್ಯಸನಿಗಳು ಕುಂಪಲದ ಹೆಸರನ್ನ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹುಟ್ಟಿನಿಂದ ಯಾರೂ ಕೆಟ್ಟವರಲ್ಲ. ಪರಿಸ್ಥಿತಿ ಇಂದು ಕೆಲವು ಯುವಕರನ್ನ ಮಾದಕ ಲೋಕಕ್ಕೆ ಸೆಳೆದಿದೆ. ಸಮಯ ಇನ್ನೂ ಮಿಂಚಿಲ್ಲ.
ಬಲಿಯಾಗಿರುವ ಯುವಕರು ದುಷ್ಚಟಗಳನ್ನು ತ್ಯಜಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವದ ಜೀವನ ನಡೆಸುವಂತಾಗಬೇಕು. ಗಾಂಜಾವನ್ನು ಮಟ್ಟ ಹಾಕಲು ಪೊಲೀಸರು ಬಹಳಷ್ಟು ಶ್ರಮಿಸುತ್ತಿದ್ದು ಪರಿಸರದ 13 ಯುವಕರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದ್ದು ಅದರಲ್ಲಿ 11 ಜನ ಗಾಂಜಾ ವ್ಯಸನಿಗಳೆಂದು ಧೃಢ ಪಟ್ಟಿದೆ. ಗ್ರಾಮಸ್ಥರೇ ಇಂತಹ ಮಕ್ಕಳ ಪರ ವಹಿಸಿ ಎಂದಿಗೂ ಮಾತನಾಡಬೇಡಿ. ಇವರನ್ನು ಕುಂಪಲದಿಂದಲೇ ಹೊರಗಿಟ್ಟು ತಕ್ಕ ಪಾಠ ಕಲಿಸಬೇಕೆಂದರು.
ಕುಂಪಲದ ಪರಿಸರದ ಹುಡುಗರಿಗೆ ಗಾಂಜಾ ಸರಬರಾಜು ಮಾಡುವವರನ್ನು ಪೊಲೀಸರು ತ್ವರಿತವಾಗಿ ಕಂಡು ಹುಡುಕಬೇಕೆಂದು ಆಗ್ರಹಿಸಿದರು. ಹೊರಗಿನಿಂದ ಬಂದು ಇಲ್ಲಿನ ಯುವಕರನ್ನ ಗಾಂಜಾ ಎಳೆಯಲು ಪ್ರೇರೇಪಿಸುವವರ ವಿರುದ್ಧ ಜನಸಾಮಾನ್ಯರು, ಸಂಘಟನೆಗಳು ಎಚ್ಚೆತ್ತೆಕೊಳ್ಳಬೇಕೆಂದರು.
ಕೋಟೆಕಾರು ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷ ಅನಿಲ್ ಬಗಂಬಿಲ, ಸೋಮೇಶ್ವರ ಪುರಸಭಾ ಮಾಜಿ ಸದಸ್ಯರಾದ ಮೋಹನ್ ಶೆಟ್ಟಿ,ಗಂಗಾಧರ ಗಟ್ಟಿ, ಶಿವಾನಂದ ಟೈಲರ್, ಕಿಶೋರ್ ಕುಂಪಲ, ಅಶೋಕ್ ಕುಂಪಲ, ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ವಿಜಯ್ ಪ್ರಕಾಶ್ ಕುಂಪಲ, ಸ್ಥಳೀಯರಾದ ಚೇತನ್ ಶೆಟ್ಟಿ ಕುಂಪಲ, ನಿವೃತ್ತ ಯೋಧರಾದ ವೆಂಕಟೇಶ್ ಕುಂಪಲ ಮೊದಲಾದವರು ಪ್ರತಿಭಟನೆಯಲ್ಲಿದ್ದರು.
ಕುಂಪಲ ; ಬೆಡ್ಡಿನಲ್ಲೇ ನಿಂತ ಸ್ಥಿತಿಯಲ್ಲಿ ಮಾಡೆಲಿಂಗ್ ಯುವತಿ ಸಾವು !! ಗಾಂಜಾ ಗ್ಯಾಂಗಿನಿಂದ ಕೊಲೆ ಶಂಕೆ !
ವನ್ ಸೈಡ್ ಲವ್ ; ಆಕೆಯ ಮಾಡೆಲಿಂಗ್, ಫೋಟೋ ಶೂಟ್ ಬಗ್ಗೆ ವಿರೋಧ, ಹರೆಯದ ಹುಡುಗಿಯ ದುರಂತ ಅಂತ್ಯ !!
The residents of Kumpala have become fierce after the death of the Model Girl Preksha. Former vice president of Jilla Panchyath Satish has warned of kicking Ganja Youths out of Kampala.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am