ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಅನರ್ಹರಿಗೂ ಬಿಪಿಎಲ್ ಪಡಿತರ ; 26 ಲಕ್ಷ ರೂ. ದಂಡ ವಸೂಲಿ

14-08-20 08:58 am       Mangalore Reporter   ಕರಾವಳಿ

ದ.ಕ. ಜಿಲ್ಲೆಯಲ್ಲಿ ನಿಯಮ ಮೀರಿ 6,956 ಕುಟುಂಬಗಳು ಬಿಪಿಎಲ್ ಆಧಾರದಲ್ಲಿ ಪಡಿತರ ಚೀಟಿ ಪಡೆದು, ಸವಲತ್ತುಗಳನ್ನು ಅನುಭವಿಸುತ್ತಿರುವುದು ಪತ್ತೆ ಆಗಿದೆ. ಅನರ್ಹ ಪಡಿತರ ಚೀಟಿ ಪಡೆದವರಿಗೆ ಅಧಿಕಾರಿಗಳು ದಂಡವನ್ನೂ ವಿಧಿಸುತ್ತಿದ್ದಾರೆ.

ಪುತ್ತೂರು, ಆಗಸ್ಟ್ 14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರ್ಹರಲ್ಲದವರೂ ಬಿಪಿಎಲ್ ಪಡಿತರ ಚೀಟಿ  ಪಡೆದು ಸೌಲಭ್ಯ ಅನುಭವಿಸುತ್ತಿರುವ ಬಗ್ಗೆ ಎರಡು ವರ್ಷಗಳಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದರು. ಇದೀಗ ಈ ಮಾಹಿತಿ ಲಭಿಸಿದ್ದು ನಿಮಯ ಉಲ್ಲಂಘಿಸಿ ಪಡಿತರ ಪಡೆದಿರುವ 6,956 ಮಂದಿಯನ್ನು ಪತ್ತೆ ಹಚ್ಚಲಾಗಿದೆ. 

ದ.ಕ. ಜಿಲ್ಲೆಯಲ್ಲಿ ನಿಯಮ ಮೀರಿ 6,956 ಕುಟುಂಬಗಳು ಬಿಪಿಎಲ್‌ (ಆದ್ಯತಾ ಪಡಿತರ ಚೀಟಿ) ಆಧಾರದಲ್ಲಿ ಪಡಿತರ ಚೀಟಿ ಪಡೆದು, ಸವಲತ್ತುಗಳನ್ನು ಅನುಭವಿಸುತ್ತಿರುವುದು ಪತ್ತೆ ಆಗಿದೆ. ಹೀಗೆ ನಿಯಮ ಬಾಹಿರ ಪಡಿತರ ಇರುವವರು ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚು ಅನ್ನುವುದು ಕಂಡುಬಂದಿದೆ. ಮಂಗಳೂರು ಗ್ರಾಮಾಂತರ -477, ಮಂಗಳೂರು- 1,256, ಬಂಟ್ವಾಳ ತಾಲೂಕು - 1,301, ಪುತ್ತೂರು-1,247, ಬೆಳ್ತಂಗಡಿ- 1,873, ಸುಳ್ಯ-801 ಅನರ್ಹ ಕಾರ್ಡ್‌ ಗಳನ್ನು ಪತ್ತೆ ಮಾಡಲಾಗಿದೆ.

26 ಲಕ್ಷ ರೂಪಾಯಿ ದಂಡ ವಸೂಲಿ:

ಅನರ್ಹ ಪಡಿತರ ಚೀಟಿ ಪಡೆದವರಿಗೆ ಅಧಿಕಾರಿಗಳು ದಂಡವನ್ನೂ ವಿಧಿಸುತ್ತಿದ್ದಾರೆ. ಜನವರಿಯಿಂದ ಈ ತನಕ 26,89,406 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ಮತ್ತು ಸರಬರಾಜು ಇಲಾಖೆ ಮಾಹಿತಿ ನೀಡಿದೆ. ಬಿಪಿಎಲ್‌ ಪಡಿತರ ಕಾರ್ಡ್‌ ಅನ್ನು ಆ ಕುಟುಂಬ ಯಾವಾಗ ಪಡೆದುಕೊಂಡಿದ್ದ ವರ್ಷದಿಂದ ಹಿಡಿದು, ಸವಲತ್ತು ಉಪಯೋಗಿಸಿದ ಪ್ರಮಾಣ ಆಧರಿಸಿ ದಂಡ ವಿಧಿಸಲಾಗಿದೆ. ಮಂಗಳೂರು ಗ್ರಾಮಾಂತರ -3,63,339 ರೂ., ಮಂಗಳೂರು ನಗರ - 5,63,463 ರೂ., ಬಂಟ್ವಾಳ- 5,24,224 ರೂ., ಪುತ್ತೂರು- 49,535 ರೂ., ಬೆಳ್ತಂಗಡಿ- 8,80,006 ರೂ., ಸುಳ್ಯ ತಾಲೂಕಿನಲ್ಲಿ 3,08,839 ರೂ. ದಂಡ ಸಂಗ್ರಹಿಸಲಾಗಿದೆ.

ಸರಕಾರಿ ನೌಕರರಿಗೂ ದಂಡ ! 

ಸರಕಾರದ ಮಾನದಂಡಗಳನ್ನು ಮೀರಿ ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದರೆ ದಂಡ ರಹಿತವಾಗಿ ಕಳೆದ 2019ರ ಸೆಪ್ಟೆಂಬರ್ 3ರೊಳಗೆ ಆಯಾ ತಾಲೂಕು ಕಚೇರಿಯ ಆಹಾರ ಶಾಖೆಗೆ ತೆರಳಿ ಪಡಿತರ ಚೀಟಿ ಒಪ್ಪಿಸಲು ಅವಕಾಶ ನೀಡಲಾಗಿತ್ತು. ಸ್ವತಃ ರದ್ದು ಮಾಡುವಂತೆ ಸರಕಾರ  ನೀಡಿದ್ದ ಅವಕಾಶವನ್ನು ಆ ಬಳಿಕ ಅಕ್ಟೋಬರ್ 15ರ ತನಕ ವಿಸ್ತರಣೆ ಮಾಡಲಾಗಿತ್ತು. ಎರಡು ಬಾರಿ ನೀಡಿದ ಅವಕಾಶದಲ್ಲಿ ಪಡಿತರ ಚೀಟಿ ರದ್ದು ಮಾಡದೆ, ಇದ್ದ ಅನರ್ಹ ಪಡಿತರ ಚೀಟಿದಾರರಿಂದ ಈಗ ದಂಡ ವಸೂಲಿ ಮಾಡಲಾಗಿದೆ. ಅನಂತರ ಸರಕಾರ ದಂಡ ವಿಧಿಸುವುದನ್ನು ತಡೆ ಹಿಡಿದು ವಸೂಲಿ ಕಾರ್ಯಕ್ಕೆ ಆದೇಶ ನೀಡಿತ್ತು. ಈಗ ಸರಕಾರಿ ನೌಕರರು ಬಿಪಿಎಲ್‌ ಕಾರ್ಡ್‌ ಹೊಂದಿದ್ದರೂ ದಂಡ ವಿಧಿಸಲಾಗುತ್ತಿದೆ. ಆದಾಯ ಪರಿಮಿತಿ, ಪಡಿತರ ಬಳಕೆಯ ಅವಧಿ ಆಧ‌ರಿಸಿ ಉಳಿದವರಿಗೆ ದಂಡ ವಿಧಿಸಲಾಗುತ್ತಿದೆ.