ಬ್ರೇಕಿಂಗ್ ನ್ಯೂಸ್
09-02-26 02:04 pm HK News Desk ಕ್ರೈಂ
ಕಾರವಾರ, ಫೆ.9 : ಜ್ಯೋತಿಷಿ ಕಮಲಾಕರ ಭಟ್ ಜತೆಗಿನ ಅಕ್ರಮ ಸಂಬಂಧ, ಕೊಲೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಸಿದ್ದಾಪುರ ಮೂಲದ ಸುಚಿತ್ರಾ ಕುರಿತು ತನಿಖೆಯಲ್ಲಿ ಮತ್ತಷ್ಟು ಮಾಹಿತಿಗಳು ಹೊರಬಿದ್ದಿವೆ. ಪಡ್ಡೆ ಯುವಕರನ್ನು ಬಲೆಗೆ ಬೀಳಿಸಲು ಸುಚಿತ್ರಾ ಮಾಸ್ಟರ್ ಪ್ಲಾನ್ ರೂಪಿಸಿಕೊಂಡಿದ್ದಳು ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಪೊಲೀಸ್ ದಾಖಲೆಗಳು ಮತ್ತು ಮದುವೆ ಪ್ರಮಾಣಪತ್ರಗಳ ಪ್ರಕಾರ, ಸುಚಿತ್ರಾಳ ನಿಜ ಹೆಸರು ಸುರೇಖಾ ಎನ್ನಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಯುವಕರನ್ನು ಸೆಳೆಯುವ ಉದ್ದೇಶದಿಂದ ತನ್ನ ಹೆಸರನ್ನು ಬದಲಿಸಿ ‘ಸುಚಿತ್ರಾ’ ಎಂದು ಪರಿಚಯಿಸಿಕೊಂಡಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ‘ಸುರೇಖಾ ನನ್ನ ಅಕ್ಕ, ನಾವು ಟ್ವಿನ್ಸ್. ಆಕೆ ಮೃತಪಟ್ಟ ನಂತರ ಆಕೆಯ ಮಕ್ಕಳ ಜವಾಬ್ದಾರಿ ನಾನು ಹೊತ್ತಿದ್ದೇನೆ. ನನಗೆ ಮದುವೆಯಾಗಿಲ್ಲ’ ಎಂಬ ಕಥೆ ಹೇಳಿ ಯುವಕರ ವಿಶ್ವಾಸ ಗಳಿಸುತ್ತಿದ್ದಳು.
ಸೋಶಿಯಲ್ ಮೀಡಿಯಾದಲ್ಲೇ ಬಲೆ
ಸಾಮಾಜಿಕ ಜಾಲತಾಣಗಳ ಮೂಲಕ ಚೆಂದದ ಯುವಕರನ್ನು ಗುರುತಿಸುವುದೇ ಸುಚಿತ್ರಾ ತಂತ್ರವಾಗಿತ್ತು. ಮೊದಲಿಗೆ ಫೋಟೋಗಳಿಗೆ ಕಾಮೆಂಟ್ ಮಾಡುವ ಮೂಲಕ ಸಂಪರ್ಕ ಸಾಧಿಸಿ, ಬಳಿಕ ಮೆಸೆಂಜರ್‌ನಲ್ಲಿ ಸ್ನೇಹ ಬೆಳೆಸುತ್ತಿದ್ದಳು. ಎರಡು- ಮೂರು ತಿಂಗಳ ನಿರಂತರ ಚಾಟಿಂಗ್ ಮೂಲಕ ಅವರ ವೈಯಕ್ತಿಕ ಹಾಗೂ ಆರ್ಥಿಕ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಸುಚಿತ್ರಾ ಆ ಬಳಿಕ ತನ್ನ ಬಣ್ಣದ ಮಾತುಗಳಿಂದ ಯುವಕರನ್ನು ತನ್ನ ಬುಟ್ಟಿಯಲ್ಲಿ ಬೀಳಿಸಿಕೊಳ್ಳುತ್ತಿದ್ದಳು.
ಸಲುಗೆ ಬೆಳೆದ ಬಳಿಕ ‘ಭೇಟಿಯಾಗೋಣ’ ಎಂದು ಆಹ್ವಾನಿಸಿ, ಕ್ರಮೇಣ ಆಪ್ತಳಂತೆ ನಟಿಸುತ್ತಿದ್ದಳು. ನಂತರ ಯುವಕರನ್ನು ತನ್ನ ಮನೆಗೆ ಕರೆಸಿಕೊಳ್ಳುವ ಮೂಲಕ ಸಂಬಂಧ ಗಟ್ಟಿಗೊಳಿಸುತ್ತಿದ್ದಳು. ಈ ರೀತಿ ಹಲವರನ್ನು ಬಲೆಗೆ ಬೀಳಿಸಲು ಸುಚಿತ್ರಾ ವ್ಯವಸ್ಥಿತ ಯೋಜನೆ ರೂಪಿಸುತ್ತಿದ್ದಳು ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಕಮಲಾಕರ ಭಟ್ ಮಾತ್ರವಲ್ಲದೆ, ಕಲಬುರಗಿ ಜಿಲ್ಲೆಯ ಜಮೀನ್ದಾರನೊಬ್ಬರ ಜತೆಗೂ ಸುಚಿತ್ರಾ ಆಪ್ತ ಸಂಬಂಧ ಹೊಂದಿದ್ದಳು ಎಂಬ ಮಾಹಿತಿ ಬಹಿರಂಗವಾಗಿತ್ತು. ಸುಚಿತ್ರಾಳ ಮೊಬೈಲ್ ಫೋನ್ ಪರಿಶೀಲನೆ ವೇಳೆ, ಹಲವಾರು ವ್ಯಕ್ತಿಗಳೊಂದಿಗೆ ಸಂಪರ್ಕ ಮತ್ತು ಸಂಬಂಧ ಹೊಂದಿರುವ ಕುರಿತು ಮಹತ್ವದ ದಾಖಲೆಗಳು ಲಭ್ಯವಾಗಿವೆ. ಪೊಲೀಸ್ ಮೂಲಗಳ ಪ್ರಕಾರ, ಕಲಬುರಗಿ ಜಿಲ್ಲೆಯ ಜಮೀನ್ದಾರ ಶರಣಬಸಪ್ಪ ಎಂಬಾತನೊಂದಿಗೆ ಸುಚಿತ್ರಾ ಸುಮಾರು ಮೂರು ವರ್ಷಗಳಿಂದ ಆಪ್ತ ಸಂಬಂಧದಲ್ಲಿದ್ದಳು. ಆತನ ಆರ್ಥಿಕ ನೆರವಿನಿಂದ ‘ಅಪ್ಪು ಮೆಲೋಡಿಸ್ ಗುಲಬರ್ಗಾ ಆರ್ಕೆಸ್ಟ್ರಾ’ ನಡೆಸುತ್ತಿದ್ದಳು ಎನ್ನಲಾಗಿದೆ. ಅಲ್ಲದೆ, ಶರಣಬಸಪ್ಪ ನೀಡಿದ ಹಣವನ್ನು ಸಿದ್ದಾಪುರದಲ್ಲಿ ಬಡ್ಡಿಗೆ ನೀಡುತ್ತಿದ್ದಳು ಎಂಬ ಆರೋಪಗಳು ಕೇಳಿಬಂದಿವೆ. ಈ ವಿಷಯ ಕಮಲಾಕರ ಭಟ್‌ಗೆ ತಿಳಿದು, ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು ಆ ಬಳಿಕ ಏನೇನೋ ಸಬೂಬು ಹೇಳಿ ಸುಚಿತ್ರಾ ಆತನ ಜೊತೆಗೂ ಸಂಬಂಧವನ್ನು ಗಟ್ಟಿ ಮಾಡಿಕೊಂಡಿದ್ದಳು.
ಹಣಕಾಸಿನ ವಿಚಾರದಲ್ಲಿ ತಗಾದೆ ಉಂಟಾಗಿ, ನಂತರ ಸುಚಿತ್ರಾ ಶರಣಬಸಪ್ಪನಿಂದ ದೂರವಾಗಿ ಕಮಲಾಕರ ಭಟ್‌ಗೆ ಮತ್ತಷ್ಟು ಹತ್ತಿರವಾಗಿದ್ದಳು ಎಂಬುದೂ ತನಿಖೆಯಿಂದ ಹೊರ ಬಿದ್ದಿದೆ. ಈ ನಡುವೆ ಕಮಲಾಕರ ಭಟ್, ಸುಚಿತ್ರಾಳಿಗೆ ಕಾರು ಹಾಗೂ ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾನೆ ಎನ್ನುವ ಮಾಹಿತಿ ಕೂಡ ದಾಖಲಾಗಿದೆ. ಇದೇ ಕಾರು ಬೈಕ್‌ಗಳಲ್ಲಿ ಕುಳಿತು ಸುಚಿತ್ರಾ ಹಲವು ರೀಲ್ಸ್ ಗಳನ್ನು ಮಾಡಿ ಅವುಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದಳು. ಸುಚಿತ್ರಾಳ ನಡೆ-ನುಡಿಗಳು, ಆಕೆ ಸಂಪರ್ಕದಲ್ಲಿದ್ದ ವ್ಯಕ್ತಿಗಳು ಮತ್ತು ಹಣಕಾಸಿನ ವ್ಯವಹಾರಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
In the murder case linked to astrologer Kamalakara Bhat, fresh investigations reveal that Suchitra—whose real name is Surekha—allegedly used social media to lure young men with a fake identity and emotional stories. Police say she built close relationships, gathered financial details, and sought monetary benefits.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am