ಬ್ರೇಕಿಂಗ್ ನ್ಯೂಸ್
10-02-26 11:44 am HK News Desk ದೇಶ - ವಿದೇಶ
ನವದೆಹಲಿ, ಫೆ.10 : ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿ ಜೈಲು ಪಾಲಾಗಿದ್ದ ಅಬ್ದುಲ್ ರೆಹಮಾನ್ ಎಂಬ ಕೈದಿಯನ್ನು ಹರ್ಯಾಣದ ಫರೀದಾಬಾದ್ ಜೈಲಿನಲ್ಲಿ ಕಾಶ್ಮೀರ ಮೂಲದ ಸಹ ಕೈದಿಯೊಬ್ಬ ಕೊಲೆ ಮಾಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಮಿಲ್ಕಿಪುರ್ ನಿವಾಸಿಯಾಗಿದ್ದ ಅಬ್ದುಲ್ ರೆಹಮಾನ್(20)ನನ್ನು 2025ರ ಮಾರ್ಚ್ 2ರಂದು ಹರಿಯಾಣದ ಫರೀದಾಬಾದ್ ಜಿಲ್ಲೆಯ ಪಾಲಿ ಎಂಬ ಗ್ರಾಮದಲ್ಲಿ ಗುಜರಾತ್ ಎಟಿಎಸ್ ಮತ್ತು ಹರ್ಯಾಣ ಎಸ್ ಟಿಎಫ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿತ್ತು. ಆತನಲ್ಲಿದ್ದ ಎರಡು ಹ್ಯಾಂಡ್ ಗ್ರೆನೇಡ್ ಗಳನ್ನು ಬಾಂಬ್ ಸ್ಕ್ವಾಡ್ ವಶಕ್ಕೆ ಪಡೆದು ನಿಷ್ಕ್ರಿಯಗೊಳಿಸಿತ್ತು. ಆರೋಪಿಯನ್ನು ಬಳಿಕ ಫರೀದಬಾದ್ ಜಿಲ್ಲಾ ಜೈಲಿನಲ್ಲಿ ಇರಿಸಲಾಗಿತ್ತು. ನಕಲಿ ಐಡಿಯೊಂದಿಗೆ ಫರಿದಾಬಾದ್ ಹೊರವಲಯದಲ್ಲಿ ನೆಲೆಸಿದ್ದ ರೆಹಮಾನ್ ತೋರಿಕೆಗೆ ಆಟೋ ಚಾಲಕನಾಗಿದ್ದು ಸ್ಥಳೀಯರೊಂದಿಗೆ ಬೆರೆತು ರಾಮ ಮಂದಿರ ವಿರುದ್ಧ ದಾಳಿಗೆ ಷಡ್ಯಂತ್ರ ನಡೆಸುತ್ತಿದ್ದ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ಪಾಕಿಸ್ತಾನದ ಐಎಸ್ಐ ಪ್ರೇರಣೆಯಿಂದ ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿತ್ತು.
ಭಾನುವಾರ ರಾತ್ರಿ ಜೈಲಿನಲ್ಲಿ ಕೈದಿಗಳ ನಡುವೆ ಜಗಳ ನಡೆದಿತ್ತು. ಸೋಮವಾರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆವ ಸಹ ಕೈದಿಯಾಗಿದ್ದ ಅರುಣ್ ಚೌಧರಿ ಎಂಬಾತ, ಮಲಗಿದ್ದ ಅಬ್ದುಲ್ ರೆಹಮಾನ್ ಮೇಲೆ ಚೂಪಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ರೆಹಮಾನ್ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಆತ ಮೃತಪಟ್ಟಿದ್ದ. ಆರೋಪಿ ಅರುಣ್ ಚೌಧರಿ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಿದ್ದು 2024ರಲ್ಲಿ ಫರಿದಾಬಾದ್ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಆರೋಪಿ ಅರುಣ್ ಚೌಧರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಉನ್ನತ ಮಟ್ಟದ ತನಿಖೆ ಮತ್ತು ಜೈಲು ಭದ್ರತಾ ವ್ಯವಸ್ಥೆಗಳ ಪರಿಶೀಲನೆಗೆ ಆದೇಶಿಸಲಾಗಿದೆ ಎಂದು ಎಸಿಪಿ ಅಶೋಕ್ ವರ್ಮಾ ತಿಳಿಸಿದ್ದಾರೆ. ಮೂವರು ಕೈದಿಗಳನ್ನು ಒಂದೇ ಸೆಲ್ನಲ್ಲಿ ಇರಿಸಲಾಗಿತ್ತು. ಅರುಣ್ ಚೌಧರಿ, ಅಬ್ದುಲ್ ರೆಹಮಾನ್ ಹಾಗೂ ಶೋಯೆಬ್ ಅವರನ್ನು ಹೆಚ್ಚು ಭದ್ರತೆಯಿರುವ ಸೆಲ್ನಲ್ಲಿ ಇರಿಸಲಾಗಿತ್ತು. ಇವರು ಇಪ್ಪತ್ತು ದಿನಗಳಿಂದ ಒಂದೇ ಸೆಲ್ ನಲ್ಲಿ ಒಟ್ಟಿಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Abdul Rehman (20), arrested in 2025 for allegedly plotting an attack on the Ayodhya Ram Temple, was killed by a fellow inmate inside Faridabad district jail. The accused, identified as Arun Chaudhary, reportedly attacked Rehman with a sharp object during the early hours following a dispute between inmates. Police have registered a murder case and ordered a high-level probe into the incident and jail security arrangements.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am