ಪಡೀಲ್ ಕಣ್ಣೂರು ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ; ಟ್ರಾಫಿಕ್ ಜಾಮ್, ಬೆಂಗಳೂರು ಬಸ್ಸುಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

06-11-26 11:03 pm       HK News Desk   ಕರಾವಳಿ

ನಗರದ ಪಡೀಲ್ ಕಣ್ಣೂರು ರಾಷ್ಟ್ರೀಯ ಹೆದ್ದಾರಿಯ ಮಸೀದಿ ಎದುರಲ್ಲಿ ಗ್ಯಾಸ್ ಸಿಲಿಂಡರ್ ಒಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿದ್ದು ಹೆದ್ದಾರಿಯಲ್ಲಿ ಎರಡೂ ಕಡೆಯಿಂದ ವಾಹನಗಳು ಸಾಲುಗಟ್ಟಿ ಟ್ರಾಫಿಕ್ ಜಾಮ್ ಆಗಿವೆ.

ಮಂಗಳೂರು, ನ.6: ನಗರದ ಪಡೀಲ್ ಕಣ್ಣೂರು ರಾಷ್ಟ್ರೀಯ ಹೆದ್ದಾರಿಯ ಮಸೀದಿ ಎದುರಲ್ಲಿ ಗ್ಯಾಸ್ ಸಿಲಿಂಡರ್ ಒಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿದ್ದು ಹೆದ್ದಾರಿಯಲ್ಲಿ ಎರಡೂ ಕಡೆಯಿಂದ ವಾಹನಗಳು ಸಾಲುಗಟ್ಟಿ ಟ್ರಾಫಿಕ್ ಜಾಮ್ ಆಗಿವೆ. 

ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಅತಿ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮಸೀದಿ ಮುಂಭಾಗದಲ್ಲಿ ಬಿದ್ದಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಗಳನ್ನು ಲಾರಿಯಲ್ಲಿ ಲೋಡ್ ಮಾಡಿದ್ದು ಕೆಳಗೆ ಬಿದ್ದಿರುವುದರಿಂದ ಗ್ಯಾಸ್ ಸೋರಿಕೆಯ ಆತಂಕ ಉಂಟಾಗಿದೆ. ಹೀಗಾಗಿ ಎರಡೂ ಕಡೆಯಲ್ಲಿ ವಾಹನಗಳ ಸಂಚಾರ ನಿಲುಗಡೆಯಾಗಿದ್ದು ಟ್ರಾಫಿಕ್ ಜಾಮ್ ಆಗಿದೆ.

ಮಂಗಳೂರಿನಿಂದ ಬೆಂಗಳೂರು ಸಾಗುವ ಪ್ರಮುಖ ಹೆದ್ದಾರಿ ಇದಾಗಿದ್ದು ಕೆಲವು ಬಸ್ಸುಗಳು ಪಡೀಲ್ ಕಣ್ಣೂರು ಅಡ್ಯಾರ್ ಭಾಗದಲ್ಲಿ ತೀವ್ರ ಬ್ಲಾಕ್ ಆಗಿರುವುದರಿಂದ ತೊಕ್ಕೊಟ್ಟು ಕೊಣಾಜೆ ಕಡೆಯಿಂದ ಸಾಗಲಾರಂಭಿಸಿವೆ. ಎರಡೂ ಕಡೆಯಲ್ಲಿ ಎರಡು ಕಿಮೀ ಉದ್ದಕ್ಕೆ ವಾಹನಗಳು ಬಾಕಿಯಾಗಿವೆ.