ಬ್ರೇಕಿಂಗ್ ನ್ಯೂಸ್
06-11-26 09:21 pm HK News Desk ಕರಾವಳಿ
ಮಂಗಳೂರು, ನ.6 : ಐಪಿಎಲ್ ಕ್ರಿಕೆಟ್ ಆಡುವ ಕನಸು ಕಾಣುವ ಸಾವಿರಾರು ಯುವಕರ ನಡುವೆ, ಕೇವಲ 17ನೇ ವಯಸ್ಸಿನಲ್ಲೇ ಮಂಗಳೂರು ಮೂಲದ ಪ್ರತಿಭೆಯೊಂದು ಅಂತರಾಷ್ಟ್ರೀಯ ಯುವ ಕ್ರಿಕೆಟ್ ವೇದಿಕೆಯಲ್ಲಿ ಮಿಂಚಲು ಸಜ್ಜಾಗಿದೆ. ಮಂಗಳೂರು ಮೂಲದ ಯಾಯಿನ್ ಕಿರಣ್ ರೈ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅಂಡರ್-19 ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.
ಅಬುಧಾಬಿಯಲ್ಲಿ ನೆಲೆಸಿರುವ ಮಂಗಳೂರಿನ ಡಾ.ಕಿರಣ್ ಕುಮಾರ್ ರೈ ಮತ್ತು ಸುಪ್ರಿಯಾ ರೈ ದಂಪತಿಯ ಪುತ್ರ ಯಾಯಿನ್. ಮಂಗಳೂರಿನ ಮಿಜಾರು ಮೂಲದ ಕುಟುಂಬದ ಹಿನ್ನೆಲೆ ಹೊಂದಿರುವ ಯಾಯಿನ್ ಅಬುಧಾಬಿಯಲ್ಲಿ ಬೆಳೆದವರು. ಬಾಲ್ಯದಿಂದಲೇ ಕ್ರೀಡೆ ಮತ್ತು ಕ್ರಿಕೆಟ್ನಲ್ಲಿ ಆಸಕ್ತಿ ಬೆಳೆಸಿಕೊಂಡು ಇದೀಗ UAE ತಂಡದ ಭರವಸೆಯ ಯುವ ಆಲ್ರೌಂಡರ್ ಆಗಿ ಗುರುತಿಸಿದ್ದಾರೆ.
ಬ್ಯಾಟಿಂಗ್, ಲೆಗ್ ಸ್ಪಿನ್ ಎರಡರಲ್ಲೂ ಪಾರುಪತ್ಯ!
ಯಾಯಿನ್ ಅವರ ವಿಶೇಷತೆ ಎಂದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ಕೊಡುಗೆ ನೀಡುವ ಸಾಮರ್ಥ್ಯ. ಬಲಗೈ ಬ್ಯಾಟರ್ ಆಗಿರುವ ಅವರು ಬಲಗೈ ಲೆಗ್ ಬ್ರೇಕ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಮಧ್ಯಮ ಅಥವಾ ಕೆಳ ಕ್ರಮಾಂಕದಲ್ಲಿ ರನ್ ಗಳಿಸುವುದರ ಜೊತೆಗೆ ಸ್ಪಿನ್ ಮೂಲಕ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.
CREX ಕ್ರಿಕೆಟ್ ಅಂಕಿ ಅಂಶಗಳ ವೆಬ್ಸೈಟ್ನ ಆಟಗಾರರ ಪ್ರೊಫೈಲ್ ಪ್ರಕಾರ, ಯಾಯಿನ್ 2009ರ ಫೆಬ್ರವರಿ 4ರಂದು ಜನಿಸಿದ್ದಾರೆ. 2023ರ ಡಿಸೆಂಬರ್ 17ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ UAE ಅಂಡರ್-19 ತಂಡದ ಪರ ಲಿಸ್ಟ್-A ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಯಾಯಿನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಇತ್ತೀಚಿನ ಉದಾಹರಣೆ 2026ರ ಅಕ್ಟೋಬರ್ 10ರಂದು ನಡೆದ ಎಮಿರೇಟ್ಸ್ D10 ಟೂರ್ನಿಯ ಸೆಮಿಫೈನಲ್ ಪಂದ್ಯ. ದುಬೈ ವಿರುದ್ಧ ಫುಜೈರಾ ತಂಡದ ಪರ ಆಡಿದ ಯಾಯಿನ್ ಕೇವಲ 36 ಎಸೆತಗಳಲ್ಲಿ ಅಜೇಯ 98 ರನ್ ಸಿಡಿಸಿ ಎದುರಾಳಿ ಬೌಲರ್ಗಳ ಮೇಲೆ ಸವಾರಿ ಮಾಡಿದ್ದರು. ಈ ಇನ್ನಿಂಗ್ಸ್ನಲ್ಲಿ ಆರು ಬೌಂಡರಿ ಮತ್ತು ಒಂಬತ್ತು ಸಿಕ್ಸರ್ಗಳು ಸೇರಿದ್ದವು.
ಇದಕ್ಕೂ ಮುನ್ನ ಶಾಲಾ ಕ್ರಿಕೆಟ್ನಲ್ಲಿಯೂ ಯಾಯಿನ್ ತಮ್ಮ ಆಲ್ರೌಂಡ್ ಸಾಮರ್ಥ್ಯ ಪ್ರದರ್ಶಿಸಿದ್ದರು. 2024ರ DP World ILT20 Schools Cup ಟೂರ್ನಿಯಲ್ಲಿ Cambridge High School Abu Dhabi ತಂಡದ ಪರ ಆಡಿದ್ದ ಅವರು, ಸೆಮಿಫೈನಲ್ನಲ್ಲಿ The Winchester School ವಿರುದ್ಧ 84 ರನ್ ಗಳಿಸಿದ್ದರು. ಬಳಿಕ ಬೌಲಿಂಗ್ನಲ್ಲೂ ಮಿಂಚಿ ಕೇವಲ 14 ರನ್ ನೀಡಿ ಐದು ವಿಕೆಟ್ ಕಬಳಿಸಿದ್ದರು. ಈ ಪ್ರದರ್ಶನದಿಂದ ತಂಡ ಫೈನಲ್ ಪ್ರವೇಶಿಸಿತ್ತು.
ಫೈನಲ್ನಲ್ಲಿ Gems Modern Academy ವಿರುದ್ಧ 58 ರನ್ ಗಳಿಸಿದ ಯಾಯಿನ್, ಬೌಲಿಂಗ್ನಲ್ಲಿ 24 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ಅವರ ಈ ಆಲ್ರೌಂಡ್ ಪ್ರದರ್ಶನದ ನೆರವಿನಿಂದ Cambridge High School Abu Dhabi ತಂಡ ಪ್ರಶಸ್ತಿ ಗೆದ್ದಿತ್ತು. ಈ ಟೂರ್ನಿಯಲ್ಲಿ ಅಬುಧಾಬಿ, ದುಬೈ ಮತ್ತು ಶಾರ್ಜಾದ ಒಟ್ಟು 32 ಶಾಲಾ ತಂಡಗಳು ಭಾಗವಹಿಸಿದ್ದವು.
ಒಂಬತ್ತನೇ ವಯಸ್ಸಿನಲ್ಲೇ ಪ್ರಶಸ್ತಿ ಗೆದ್ದ ಪ್ರತಿಭೆ!
ಯಾಯಿನ್ ಅವರ ಸಾಧನೆ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿಲ್ಲ. 2018ರ ಮೇ ತಿಂಗಳಲ್ಲಿ ಪ್ರಕಟವಾದ ವರದಿ ಪ್ರಕಾರ, ಅಂದು ಅಬುಧಾಬಿಯ Bright Riders Schoolನಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಒಂಬತ್ತು ವರ್ಷದ ಯಾಯಿನ್, 2017-18ನೇ ಸಾಲಿನ 24ನೇ Sharjah Educational Excellence Award ಪಡೆದುಕೊಂಡಿದ್ದರು. ಇದಕ್ಕೂ ಮೊದಲು 2016-17ನೇ ಸಾಲಿನಲ್ಲಿ Sheikh Hamdan Award for Distinguished Student ಪ್ರಶಸ್ತಿಗೂ ಭಾಜನರಾಗಿದ್ದರು. ಬಾಲ್ಯದಲ್ಲೇ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೋರಿದ ಸಾಧನೆ ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ.
ಓಟ, ಲಾಂಗ್ ಜಂಪ್, ಶಾಟ್ಪುಟ್ನಲ್ಲೂ ಸಾಧನೆ!
ಕ್ರಿಕೆಟ್ಗೆ ಹೆಚ್ಚು ಒತ್ತು ನೀಡುವ ಮೊದಲೇ ಯಾಯಿನ್ ಅಥ್ಲೆಟಿಕ್ಸ್ನಲ್ಲೂ ಆಸಕ್ತಿ ಹೊಂದಿದ್ದರು. ಓಟ, ಲಾಂಗ್ ಜಂಪ್ ಮತ್ತು ಶಾಟ್ಪುಟ್ನಲ್ಲಿ ತರಬೇತಿ ಪಡೆದಿದ್ದರು. 2017ರ ಮಾರ್ಚ್ನಲ್ಲಿ ನಡೆದ ITU World Triathlon ಸ್ಪರ್ಧೆಯ ಒಂದು ಕಿಲೋಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. UAEಯ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿಯೂ ಬಹುಮಾನಗಳನ್ನು ಗೆದ್ದಿದ್ದರು. ಗಣಿತದಲ್ಲೂ ಆಸಕ್ತಿ ಹೊಂದಿದ್ದ ಯಾಯಿನ್ UCMAS ತರಬೇತಿ ಪಡೆದಿದ್ದರು. 14ನೇ ಮತ್ತು 15ನೇ ರಾಷ್ಟ್ರೀಯ UCMAS ಸ್ಪರ್ಧೆಗಳಲ್ಲಿ ತಮ್ಮ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಈಜು, ಚಿತ್ರಕಲೆ ಮತ್ತು ನೃತ್ಯದಲ್ಲಿಯೂ ತರಬೇತಿ ಪಡೆದು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದರು ಎಂದು 2018ರ ವರದಿ ತಿಳಿಸಿದೆ.
ಬಹುಮುಖ ಪ್ರತಿಭೆಗೆ ಮತ್ತೊಂದು ಗರಿ!
ಯಾಯಿನ್ ಅವರ ಮತ್ತೊಂದು ಆಸಕ್ತಿ ಸಾರ್ವಜನಿಕ ಭಾಷಣ. 2023ರ ಫೆಬ್ರವರಿಯಲ್ಲಿ ನಡೆದ TEDxYouth@TCHS ವೇದಿಕೆಯಲ್ಲಿ 'What Makes a Good Life?' ಎಂಬ ವಿಷಯದ ಕುರಿತು ಭಾಷಣ ಮಾಡಿದ್ದರು. ಬಾಲ್ಯದಿಂದಲೇ ಭಾಷಣ, ಪಠಣ ಮತ್ತು ವಾಗ್ಮಿತೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುವುದು ಅವರ ಆತ್ಮವಿಶ್ವಾಸ ಮತ್ತು ಸಂವಹನ ಸಾಮರ್ಥ್ಯವನ್ನು ತೋರಿಸುತ್ತದೆ.
ಅಂಡರ್-19 ಏಷ್ಯಾ ಕಪ್ಗೆ UAE ತಂಡದಲ್ಲಿ ಸ್ಥಾನ!
2026ರ ACC ಪುರುಷರ ಅಂಡರ್-19 ಏಷ್ಯಾ ಕಪ್ ನವೆಂಬರ್ 5ರಿಂದ 14ರವರೆಗೆ ಒಮಾನ್ನ ಮಸ್ಕತ್ನಲ್ಲಿ ನಡೆಯುತ್ತಿದೆ. ಭಾರತ, ಪಾಕಿಸ್ತಾನ, UAE, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಮಲೇಷ್ಯಾ ಸೇರಿದಂತೆ ಎಂಟು ತಂಡಗಳು ಈ ಟೂರ್ನಿಯಲ್ಲಿ ಸೆಣಸುತ್ತಿವೆ.
UAE ಕ್ರಿಕೆಟ್ ಮಂಡಳಿ ಅಕ್ಟೋಬರ್ 28ರಂದು ಪ್ರಕಟಿಸಿದ 15 ಆಟಗಾರರ ತಂಡದಲ್ಲಿ ಯಾಯಿನ್ ರೈಗೂ ಸ್ಥಾನ ನೀಡಲಾಗಿದೆ. ಅಯಾನ್ ಮಿಸ್ಬಾ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಏಷ್ಯಾ ಕಪ್ನಂತಹ ಮಹತ್ವದ ಟೂರ್ನಿಯಲ್ಲಿ ಅವಕಾಶ ಪಡೆದಿರುವುದು ಯಾಯಿನ್ ಅವರ ಕ್ರಿಕೆಟ್ ಪಯಣದ ಪ್ರಮುಖ ಮೈಲಿಗಲ್ಲಾಗಿದೆ.
ಯಾಯಿನ್ ಅವರ ಮುಂದಿನ ಗುರಿ UAE ತಂಡವನ್ನು ಅಂಡರ್-19 ವಿಶ್ವಕಪ್ನಲ್ಲಿ ಪ್ರತಿನಿಧಿಸುವುದು. ಏಷ್ಯಾ ಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಭವಿಷ್ಯದಲ್ಲಿ ಐಪಿಎಲ್ ಫ್ರಾಂಚೈಸಿಯೊಂದರ ಪರ ಆಡುವ ಮೂಲಕ ಜಾಗತಿಕ ಕ್ರಿಕೆಟ್ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು ಎಂಬ ಕನಸನ್ನೂ ಹೊಂದಿದ್ದಾರೆ.
03-11-26 09:48 pm
HK News Desk
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ಹಿರಿಯ ವಕೀಲ ಬ...
30-10-26 08:26 pm
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
06-11-26 11:03 pm
HK News Desk
ಕಾಂಗ್ರೆಸ್ ಕಾಲದಲ್ಲಿ 11 ಬಾರಿ ಎಸ್ಐಆರ್ ಲೀಗಲ್, ಈಗ...
06-11-26 09:35 pm
ಮಂಗಳೂರು ಮೂಲದ ಯಾಯಿನ್ ಕಿರಣ್ ರೈ ಯುಎಇ ಅಂಡರ್-19 ಕ್...
06-11-26 09:21 pm
ಪಿಲಿಕುಳ ನಿಸರ್ಗಧಾಮದ 356 ಎಕರೆ ಭೂ ಗುತ್ತಿಗೆ ರದ್ದು...
05-11-26 09:42 pm
ಬೆಂಗಳೂರಿನಿಂದ LSD ಡ್ರಗ್ಸ್ ಸಪ್ಲೈ: ಮಂಗಳೂರಿನ ವಿದ...
05-11-26 03:23 pm
06-11-26 08:08 pm
HK News Desk
Naresh Bhat, Wife Murder: ಪತ್ನಿ ವಿಷ ಕುಡಿದು ಆತ...
06-11-26 05:01 pm
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ ; ಪತ್ನಿ ಮೇಲಿನ ಸಿ...
06-11-26 10:55 am
Mangalore, Veerendra Shetty: ಜಾಗದ ವಿಚಾರದಲ್ಲಿ...
05-11-26 10:45 pm
ಬಾಳೆಕುದ್ರು ಮಠದ ಸಾವಿರಾರು ವರ್ಷ ಹಿನ್ನೆಲೆಯ ವಿಗ್ರಹ...
05-11-26 07:51 pm