ಬ್ರೇಕಿಂಗ್ ನ್ಯೂಸ್
03-11-26 10:51 pm HK News Desk ಕರಾವಳಿ
ಮಂಗಳೂರು, ನ.3: ಎಸ್ಐಆರ್ನಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸಿಗರು ಸುಳ್ಳು ಆರೋಪ ಮಾಡಿ ದೇಶಾದ್ಯಂತ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಕಲಿ, ಮೃತಪಟ್ಟ ಶಂಕೆಯಲ್ಲಿ 99 ಲಕ್ಷ ಮತಗಳು ಕಡಿಮೆಯಾಗಿದ್ದು ಈ ಪೈಕಿ ಕೇವಲ 9 ಲಕ್ಷ ಜನರನ್ನು ಕರೆತಂದು ಕ್ರಮ ಬದ್ಧವಾಗಿ ಅರ್ಜಿ ಹಾಕಿಸಲಿ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸವಾಲು ಹಾಕಿದ್ದಾರೆ.
ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಬಳಿಕವೂ ಯಾವುದೇ ಜಾತಿ ಮತ ಧರ್ಮದ ಒಬ್ಬ ಮತದಾರನ ಹೆಸರು ಅಕ್ರಮವಾಗಿ ಡಿಲೀಟ್ ಆಗಿದ್ದರೆ ದಾಖಲೆಗಳ ಸಮೇತ ಅವರನ್ನು ಕರೆದುಕೊಂಡು ಬನ್ನಿ. ಅಂತಹ ಒಂದೂ ಪ್ರಕರಣ ಇಲ್ಲದಿದ್ದರೆ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಕಾಂಗ್ರೆಸ್ಸಿಗರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕಾಮತ್ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.
ಎಸ್ಐಆರ್ ಪ್ರಕ್ರಿಯೆ ಸರಿಯಿಲ್ಲ ಎಂದು ಪ್ರತಿಭಟನೆ ಹೆಸರಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸವಾಗುತ್ತಿದೆ. ಇದರ ಹಿಂದೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಫ್ರಾನ್ಸ್, ಯುರೋಪ್ ನಂತಹ ದೇಶಗಳಲ್ಲಿ ನಡೆದ ಹಿಂಸಾಚಾರದ ಮಾದರಿಯ ನೆರಳು ಇರುವುದು ಸ್ಪಷ್ಟವಾಗುತ್ತಿದೆ.
ಎಸ್ಐಆರ್ ಎಂಬುದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದಲ್ಲ. ದೇಶದಲ್ಲಿ ಈಗಾಗಲೇ ಹನ್ನೆರಡು ಬಾರಿ ಈ ಪ್ರಕ್ರಿಯೆ ಆಗಿದೆ. ಮೃತಪಟ್ಟವರು, ಸ್ಥಳಾಂತರಗೊಂಡವರು, ಎರಡು ಕಡೆ ಮತವಿದ್ದವರು ಹೀಗೆ ವಿವಿಧ ಕಾರಣಗಳನ್ನು ನೀಡಿ ಮತಪಟ್ಟಿಯಲ್ಲಿ ಹೆಸರು ತೆಗೆಯಲಾಗುತ್ತಿದ್ದು, ಸಂವಿಧಾನದ ನಿಯಮಗಳ ಅನ್ವಯ ಕಾನೂನುಬದ್ಧವಾಗಿಯೇ ಎಸ್ಐಆರ್ ನಡೆಯುತ್ತಿದೆ. ನೆಹರು, ಇಂದಿರಾ ಗಾಂಧಿ, ಸೋನಿಯಾರವರ ಕಾಲದಲ್ಲಿ ಎಸ್ಐಆರ್ ನಡೆದರೆ ಓಕೆ. ಬಿಜೆಪಿ ಅಧಿಕಾರದಲ್ಲಿ ನಡೆದರೆ ಸರಿಯಲ್ಲ ಎಂಬುದು ಕಾಂಗ್ರೆಸ್ಸಿನ ಮನಸ್ಥಿತಿಯಾಗಿದೆ.
ಎಸ್ಐಆರ್ ಅನ್ನು ಕೇಂದ್ರದ ಇಲಾಖೆಗಳು ಮಾಡುವುದಲ್ಲ. ರಾಜ್ಯ ಸರ್ಕಾರದ ಕಂದಾಯ, ಶಿಕ್ಷಣ ಮುಂತಾದ ಇಲಾಖೆಗಳ ನೌಕರರು ಹೀಗೆ ಶೇ 99 ರಷ್ಟು ಕೆಲಸವನ್ನು ರಾಜ್ಯ ಸರ್ಕಾರದ ಅಧೀನದ ಇಲಾಖೆಗಳ ಅಧಿಕಾರಿಗಳೇ ಮಾಡುತ್ತಾರೆ. ಇದರ ನಡುವೆ ಸರ್ವ ಪಕ್ಷಗಳ ಬಿಎಲ್ಎ 1, ಹಾಗೂ ಬಿಎಲ್ಎ 2 ಗಳ ಉಪಸ್ಥಿತಿ ಅಥವಾ ಒಪ್ಪಿಗೆಯಿಂದಲೇ ಎಲ್ಲಾ ಪ್ರಕ್ರಿಯೆಗಳು ನಡೆಯುವುದರಿಂದ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತದೆ. ಆದರೆ ಇಲ್ಲಿ ಕಾಂಗ್ರೆಸ್ ಸರ್ಕಾರ ಆಪಾದನೆ ಮಾಡುವುದು ಕೇಂದ್ರ ಸರ್ಕಾರದ ಮೇಲೆ ಎನ್ನುವುದು ಹಾಸ್ಯಾಸ್ಪದ. ಈ ಪ್ರಕ್ರಿಯೆಯಲ್ಲಿ ಬಹಳ ಒತ್ತಡವಿದ್ದರೂ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಬಿಎಲ್ಒ ಗಳಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳ ವರೆಗೆ ಎಲ್ಲರೂ ಅತ್ಯಂತ ಶ್ರಮದಿಂದ ಕಾರ್ಯ ನಿರ್ವಹಿಸಿದ್ದಾರೆ. ಈಗ ಅವರೆಲ್ಲರ ಕೆಲಸಕ್ಕೆ ಬೆಲೆಯೇ ಇಲ್ಲ, ಅವರ ಮೇಲೆ ನಂಬಿಕೆಯೇ ಇಲ್ಲ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ಸಿಗರು ಆರೋಪ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರಿಗೆ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಹಿಮಾಚಲಪ್ರದೇಶ ರಾಜ್ಯಗಳನ್ನು ಗೆದ್ದಾಗ ಎಲ್ಲವೂ ಸರಿ ಇತ್ತಾ? ಬಿಜೆಪಿ ಅಲ್ಲಿ ಸೋತಿದ್ದರೂ ಜನತೆಯ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಹೊರತು ಚುನಾವಣಾ ಆಯೋಗ ಸರಿ ಇಲ್ಲ ಎಂದು ಬಾಲಿಶ ಹೇಳಿಕೆ ನೀಡಿಲ್ಲ. ಕೇರಳದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆದಿದ್ದರಿಂದಲೇ ನಾವು ಅಧಿಕಾರಕ್ಕೆ ಬಂದಿದ್ದು ಎಂದು ಅಲ್ಲಿನ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಸರಿಯಾಗಿ ನಡೆದಿದೆ ಎಂದು ಸ್ವತಃ ಸಚಿವ ಸತೀಶ್ ಜಾರಕಿಹೊಳಿಯವರು ಒಪ್ಪಿ ಕೊಂಡಿದ್ದಾರೆ. ಆ ನಂತರ ಕಾಂಗ್ರೆಸ್ ಅವರಿಂದ ಬಲವಂತವಾಗಿ ಬೇರೆ ಹೇಳಿಕೆ ಕೊಡಿಸಿದರೂ ವಾಸ್ತವ ಸಂಗತಿ ಏನೆಂಬುದು ಎಲ್ಲರಿಗೂ ತಿಳಿದಿದೆ.
ದೇಶದ ಜನರ ತೀರ್ಮಾನ, ಅಭಿಪ್ರಾಯವನ್ನೇ ಸುಳ್ಳು ಎಂದು ಆಪಾದನೆ ಮಾಡಿ, ಸಾಂವಿಧಾನಿಕ ಸಂಸ್ಥೆಗಳನ್ನು ಅನುಮಾನದಿಂದ ನೋಡುವ ರೀತಿ ಮಾಡುತ್ತಿರುವುದು ಸಂವಿಧಾನಕ್ಕೆ ಮಾಡಿದ ದ್ರೋಹವಾಗಿದ್ದು ಕಾಂಗ್ರೆಸ್ಸಿಗರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಈಗ ಹೇಗೆ ಜನರಿಂದ ಕಡೆಗಣಿಸಲ್ಪಟ್ಟಿದ್ದಾರೋ ಮುಂದಿನ ದಿನಗಳಲ್ಲಿ ಅದಕ್ಕಿಂತಲೂ ಹೀನಾಯ ಪರಿಸ್ಥಿತಿ ಬರಲಿದೆ ಎಂದು ಕಾಮತ್ ಎಚ್ಚರಿಸಿದರು. .
ಮಂಡಲದ ಬಿಜೆಪಿ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಎಂ, ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್, ಮಂಡಲದ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ದೀಪಕ್ ಡಿಸೋಜ, ಮೂಡ ಮಾಜಿ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಮಂಡಲದ ಕಾರ್ಯದರ್ಶಿ ಸುಮತಿ ಚಂದ್ರಶೇಖರ್ ಉಪಸ್ಥಿತರಿದ್ದರು.
03-11-26 09:48 pm
HK News Desk
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ಹಿರಿಯ ವಕೀಲ ಬ...
30-10-26 08:26 pm
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
03-11-26 10:51 pm
HK News Desk
ವರ್ಷದ ಹಿಂದೆ ಶರಣಾಗಿದ್ದ ನಕ್ಸಲ್ ನಾಯಕಿ ಮುಂಡಗಾರು ಲ...
03-11-26 09:12 pm
ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇ...
03-11-26 11:41 am
ಸುರತ್ಕಲ್ ಪೊಲೀಸರ ಕಿರುಕುಳಕ್ಕೆ ಬೇಸತ್ತು ಮೀನುಗಾರ ಆ...
02-11-26 09:47 pm
ಆಳ ಸಮುದ್ರದಲ್ಲಿ ನೀರಿಗೆ ಬಿದ್ದು ಅಪಾಯಕ್ಕೀಡಾದ ಮೀನು...
02-11-26 05:34 pm
03-11-26 10:44 am
HK News Staffer
15 ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್ಸ್ ಸಮೇತ ಖತರ್ನಾಕ್...
02-11-26 09:48 pm
ಬೈಕಂಪಾಡಿಯಲ್ಲಿ ಲಾರಿ- ಸ್ಕೂಟರ್ ಡಿಕ್ಕಿ ; ಸವಾರ ತೀವ...
02-11-26 09:44 pm
ಕಾಪುವಿನ ಹೋಂಸ್ಟೇ ಮೇಲೆ ದುಷ್ಕರ್ಮಿಗಳ ದಾಳಿ: ಕಟ್ಟಡ...
02-11-26 11:31 am
ಪ್ರೀತಿಸುತ್ತಿದ್ದ ಯುವತಿಯ ಖಾಸಗಿ ಫೋಟೊ ಜಾಲತಾಣದಲ್ಲಿ...
01-11-26 04:08 pm