ಬ್ರೇಕಿಂಗ್ ನ್ಯೂಸ್
30-09-26 10:24 pm Mangaluru Staffer ಕರಾವಳಿ
ಮಂಗಳೂರು, ಸೆ.30: ಎಂಆರ್ ಪಿಎಲ್ ಭೀಕರ ಸ್ಫೋಟದ ಹಿನ್ನೆಲೆಯಲ್ಲಿ ಜೋಕಟ್ಟೆ, ಕಳವಾರು ಭಾಗದಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು ಪರಿಸರದ ನಿವಾಸಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೋ ಕಂಪನಿಯನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು, ಇಲ್ಲದಿದ್ದರೆ ನಮ್ಮನ್ನು ಸ್ಥಳಾಂತರ ಮಾಡಿಸಿ ಎಂದು ಆಗ್ರಹ ಮಾಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಜೋಕಟ್ಟೆ, ಕಳವಾರು ಪ್ರದೇಶದ ನೂರಾರು ಮನೆಗಳು, ಮಸೀದಿ, ಚರ್ಚ್ ಗಳ ಹಂಚು ಪುಡಿಯಾಗಿವೆ. ಕಿಟಕಿ ಬಾಗಿಲುಗಳು ಒಡೆದು ಹೋಗಿದ್ದು, ಸ್ಥಳೀಯರು ಭೂಕಂಪವಾಯ್ತೆಂದು ಹೆದರಿ ಮನೆಯಿಂದ ಹೊರಗಡೆ ಓಡಿ ಬಂದಿದ್ದರು. ಜೋಕಟ್ಟೆ ಪರಿಸರದಲ್ಲಿ ಸೇರಿದ್ದ ಸಾರ್ವಜನಿಕರು ಕಂಪನಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಳವಾರಿನ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಹಂಚಿನ ಮಾಡು ಪೂರ್ತಿಯಾಗಿ ಒಡೆದು ಹೋಗಿದ್ದು, ಸ್ಫೋಟದ ತೀವ್ರತೆಗೆ ಭೂಕಂಪದ ರೀತಿ ಭೂಮಿ ಕಂಪಿಸಿದ್ದರಿಂದ ಹಳೆಯ ಕಟ್ಟಡಗಳು ಅದುರಿವೆ. ಇದರಿಂದಾಗಿ ಹಂಚಿನ ಮನೆಗಳು ಬಿರುಕು ಬಿಟ್ಟಿವೆ. ಚರ್ಚ್ ಹಂಚಿನ ಮಾಡು ಒಡೆದು ಒಳಭಾಗದಲ್ಲಿ ಬಿದ್ದಿದ್ದು, ಈ ಸಂದರ್ಭದಲ್ಲಿ ಒಳಗಡೆ ಯಾರೂ ಇಲ್ಲದ ಕಾರಣ ಸಾವು- ನೋವು ಆಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ರೀತಿ, ಕಳವಾರಿನಲ್ಲಿ ದೇವಸ್ಥಾನ, ಮಸೀದಿಗಳಿಗೂ ಇದೇ ಸ್ಥಿತಿಯಾಗಿದೆ.

ಸ್ಥಳದಲ್ಲಿ ಸೇರಿದ್ದ ಜನರೊಂದಿಗೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದು, ಎಂಆರ್ ಪಿಎಲ್ 3ನೇ ಫೇಸ್ 2014ರಲ್ಲಿ ಶುರುವಾಗಿದ್ದು, ಅಲ್ಲಿಂದಲೇ ಇಲ್ಲಿ ಅನಾಹುತ ಶುರುವಾಗಿದೆ. ಆದರೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಸ್ಪಂದಿಸುತ್ತಿಲ್ಲ. ಇಲ್ಲಿ ಸ್ಫೋಟ, ಹೊಗೆ ಬರುವುದು ಮಾಮೂಲಿಯಾಗಿದೆ. ಇಷ್ಟು ದೊಡ್ಡ ತೈಲ ಸ್ಥಾವರ ಮಾಡುವಾಗ ಸ್ಥಳೀಯರನ್ನು ಎಬ್ಬಿಸಿ ಪುನರ್ವಸತಿ ಕಲ್ಪಿಸಬೇಕಿತ್ತು. ಆದರೆ ಜನರ ಅಹವಾಲನ್ನು ಕೇಳುವವರೇ ಇಲ್ಲವಾಗಿದೆ. ಕಾರ್ಖಾನೆಯ ಧೂಳಿನಿಂದಾಗಿ ಕ್ಯಾನ್ಸರ್ ನಂತಹ ರೋಗ ತಗಲುತ್ತಿದ್ದು, ಜನರ ಜೀವನ ನರಕವಾಗಿದೆ ಎಂದು ಹೇಳಿದರು.
ಕೆಲವು ಸ್ಥಳೀಯರು ಗಲ್ಫ್ ವಾರ್ ನಲ್ಲಿ ಬಾಂಬ್ ಸ್ಫೋಟ ಆದ ರೀತಿಯ ಅನುಭವ ಆಗಿದೆ. ಬೆಂಕಿ, ಹೊಗೆ, ಬಾಂಬ್ ಬಿದ್ದಿರುವ ರೀತಿಯ ಸದ್ದು ಕೇಳಿ ನಾವು ಭಯಗೊಂಡಿದ್ದೇವೆ, ಮುಂದೆಯೂ ಇಲ್ಲಿ ಜೀವನ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜಿಲ್ಲಾಡಳಿತ ಮಾಹಿತಿ ಪ್ರಕಾರ, ಜೋಕಟ್ಟೆ ಭಾಗದಲ್ಲಿ 25, ಕಳವಾರಿನಲ್ಲಿ 19, ಬಾಳ ಗ್ರಾಮದಲ್ಲಿ 10 ಮನೆಗಳಿಗೆ ಹಾನಿಯಾಗಿದೆ. ಜೋಕಟ್ಟೆಯಲ್ಲಿ 5 ಮತ್ತು ಕಳವಾರಿನಲ್ಲಿ 3 ಪ್ರಾರ್ಥನಾ ಮಂದಿರಗಳಿಗೂ ಹಾನಿಯಾಗಿದ್ದಾಗಿ ವಾರ್ತಾ ಇಲಾಖೆ ಮಾಹಿತಿ ನೀಡಿದೆ.
Following the massive explosion at the Mangalore Refinery and Petrochemicals Limited (MRPL), several houses and places of worship in Jokatte and Kalavaru have been damaged, triggering strong protests from local residents. The residents have demanded that the company either be relocated from the area or that the affected people be rehabilitated and moved to a safer location.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
30-09-26 10:49 am
HK News Staffer
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
ಸೌಜನ್ಯಾ ಮರು ತನಿಖೆಯೂ, ತಮಿಳುನಾಡಿನಲ್ಲಿ ಗ್ರಾನೈಟ್...
26-09-26 07:01 pm
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
30-09-26 10:24 pm
Mangaluru Staffer
ಅನುದಾನ ಮಂಜೂರು ವಿಚಾರದಲ್ಲಿ ಮೊಂಡಾಟ! ಕೋಟೆಕಾರು ಪ....
30-09-26 09:44 pm
suresh kumar, ut khadar, urdhu habba: ವಿಧಾನಸೌ...
30-09-26 09:41 pm
Mrpl fire, One dead: ಎಂಆರ್ ಪಿಎಲ್ ತೈಲ ಸ್ಥಾವರದಲ...
30-09-26 05:33 pm
Mangalore Kumpala Accident: ಕುಂಪಲ ; ರಸ್ತೆ ದಾಟ...
30-09-26 03:37 pm
30-09-26 08:59 pm
HK News Staffer
ಮಣಿಪಾಲ KMC ಆಸ್ಪತ್ರೆಯಲ್ಲಿ ತೀರ್ಥಹಳ್ಳಿಯ ರೋಗಿ ಆತ್...
30-09-26 08:17 pm
ಉಡುಪಿಯಲ್ಲಿ ಹೆಲ್ಮೆಟ್ ಧರಿಸಿ ದುರ್ಗಾಂಬ ಬಸ್ ಕಳವು ;...
30-09-26 10:33 am
Udupi Body found, Accused: ಕೊಲೆ ಯತ್ನ ಪ್ರಕರಣದ...
30-09-26 10:04 am
ಮಾಂಸದ ಅಂಗಡಿಯಲ್ಲೇ ಡ್ರಗ್ಸ್ ದಂಧೆ ; ಇಬ್ಬರು ಯುವಕರು...
30-09-26 10:03 am