ಬ್ರೇಕಿಂಗ್ ನ್ಯೂಸ್
29-09-26 10:45 am HK News Staffer ಕರಾವಳಿ
ಉಡುಪಿ, ಸೆಪ್ಟೆಂಬರ್ 29: ಕಂಬಳದ ಕರೆಯಲ್ಲಿ ಮಿಂಚಿನ ವೇಗದ ಓಟ, ರೋಷಾವೇಶದ ಪ್ರದರ್ಶನ ಹಾಗೂ ಅಪರೂಪದ ಸಾಧನೆಗಳ ಮೂಲಕ ತುಳುನಾಡಿನ ಮನೆಮಾತಾಗಿದ್ದ ಪ್ರಸಿದ್ಧ ಕೋಣ ‘ನಂದಳಿಕೆ ಪಾಂಡು’ 26ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದೆ. ದೇಶ-ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪಾಂಡುವಿನ ಅಗಲಿಕೆಯಿಂದ ಕಂಬಳ ಪ್ರಿಯರು ಹಾಗೂ ಕರಾವಳಿಯ ಜಾನಪದ ಕ್ರೀಡಾಲೋಕದಲ್ಲಿ ಶೋಕ ಆವರಿಸಿದೆ.
ನಂದಳಿಕೆ ಶ್ರೀಕಾಂತ ಭಟ್ ಅವರ ಪ್ರೀತಿಯ ಕೋಣವಾಗಿದ್ದ ಪಾಂಡು, ಕಂಬಳದ ಅಂಗಳದಲ್ಲಿ ಕೇವಲ ಕೋಣವಾಗಿರದೆ ಒಂದು ಜನಪ್ರಿಯ ಹೆಸರಾಗಿ ಗುರುತಿಸಿಕೊಂಡಿತ್ತು. ಸಾಮಾನ್ಯವಾಗಿ ಕಂಬಳದ ಕೋಣಗಳು ಒಂದು ಬದಿಯಲ್ಲಿ ಓಡುವುದು ಸಾಮಾನ್ಯ. ಆದರೆ ಪಾಂಡು ಎಡ ಹಾಗೂ ಬಲ ಎರಡೂ ಬದಿಗಳಲ್ಲೂ ಸಮತೋಲನದಿಂದ ಓಡುವ ವಿಶಿಷ್ಟ ಸಾಮರ್ಥ್ಯ ಹೊಂದಿತ್ತು.
‘ಪಾಂಡು-ಕುಟ್ಟಿ’ ಜೋಡಿಗೆ ಅಜೇಯ ಖ್ಯಾತಿ
‘ಕುಟ್ಟಿ’ ಎಂಬ ಮತ್ತೊಂದು ಬಲಿಷ್ಠ ಕೋಣದೊಂದಿಗೆ ಪಾಂಡು ನಿರ್ಮಿಸಿದ್ದ ಜೋಡಿ ಕಂಬಳದ ಇತಿಹಾಸದಲ್ಲೇ ವಿಶೇಷ ಸ್ಥಾನ ಪಡೆದಿತ್ತು. ‘ಪಾಂಡು-ಕುಟ್ಟಿ’ ಜೋಡಿ ಕಣಕ್ಕಿಳಿದರೆ ಗೆಲುವು ಖಚಿತ ಎಂಬ ಮಾತು ತುಳುನಾಡಿನಲ್ಲಿ ಜನಪ್ರಿಯವಾಗಿತ್ತು.
ಪ್ರತಿ ಕಂಬಳ ಸೀಸನ್‌ನಲ್ಲೂ ಸರಣಿ ಶ್ರೇಷ್ಠ ಗೌರವಗಳೊಂದಿಗೆ ಮಿಂಚಿದ್ದ ಪಾಂಡು, ಒಟ್ಟು 201 ಪದಕಗಳನ್ನು ಗೆದ್ದ ಅಪರೂಪದ ಸಾಧನೆ ಮಾಡಿತ್ತು. ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾರಂಭವೊಂದರಲ್ಲಿ ಹಾಲಿ ಮುಖ್ಯಮಂತ್ರಿ ಹಾಗೂ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೂ ಪಾಂಡುವಿಗೆ ವಿಶೇಷ ಗೌರವ ಸಲ್ಲಿಸಲಾಗಿತ್ತು.
201 ಹೂಗಳಿಂದ ಅಂತಿಮ ಗೌರವ
ಪಾಂಡು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಂದಳಿಕೆಗೆ ಸಾವಿರಾರು ಅಭಿಮಾನಿಗಳು, ಕಂಬಳ ಆಯೋಜಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಅಂತಿಮ ದರ್ಶನ ಪಡೆದರು. ಅಂತ್ಯಕ್ರಿಯೆಗೂ ಮುನ್ನ ಪಾಂಡುವಿಗೆ ಸಾಂಪ್ರದಾಯಿಕವಾಗಿ ಸ್ನಾನ ಮಾಡಿಸಿ, ವಸ್ತ್ರ ಹಾಗೂ ಹೂಮಾಲೆಗಳಿಂದ ಅಲಂಕರಿಸಲಾಯಿತು. ಕಹಳೆ ಊದಿ ಗೌರವ ಸಲ್ಲಿಸಲಾಯಿತು.
ಪಾಂಡುವನ್ನು ವರ್ಷಗಳಿಂದ ಪ್ರೀತಿಯಿಂದ ನೋಡಿಕೊಂಡಿದ್ದ ಪರಿಚಾರಕರು ಕೊನೆಯ ಬಾರಿಗೆ ಎಣ್ಣೆ ಹಚ್ಚಿ ಕಣ್ಣೀರಿಟ್ಟರು. ಪಾಂಡು ಕಂಬಳದ ಕರೆಯಲ್ಲಿ ಗೆದ್ದ 201 ಪದಕಗಳ ಸ್ಮರಣಾರ್ಥ ಅದರ ದೇಹದ ಮೇಲೆ 201 ಹೂಗಳನ್ನು ಇರಿಸಿ ಭಾವುಕ ಗೌರವ ಸಲ್ಲಿಸಲಾಯಿತು.





‘ಮುಂದಿನ ಜನ್ಮದಲ್ಲೂ ನನ್ನ ಕೊಟ್ಟಿಗೆಯಲ್ಲೇ ಹುಟ್ಟಿ ಬಾ’
ಅಂತ್ಯಕ್ರಿಯೆಯ ವೇಳೆ ಪಾಂಡುವಿನ ಮಾಲೀಕ ಶ್ರೀಕಾಂತ ಭಟ್ ಹಾಗೂ ಕುಟುಂಬಸ್ಥರ ದುಃಖ ಮುಗಿಲುಮುಟ್ಟಿತ್ತು. ಬೊಗಸೆಯ ಮಣ್ಣನ್ನು ಪಾಂಡುವಿನ ದೇಹದ ಮೇಲೆ ಹಾಕುತ್ತಾ ಕಣ್ಣೀರಿಟ್ಟ ಶ್ರೀಕಾಂತ ಭಟ್, “ಪಾಂಡು, ನೀನು ನನಗಾಗಿ ಅಪಾರ ಸಾಧನೆ ಮಾಡಿದ್ದೀಯ. ನಿನಗೆ ನಾನು ಋಣಿಯಾಗಿದ್ದೇನೆ. ಓಟದ ಆವೇಶದಲ್ಲಿ ಒಂದೆರಡು ಏಟು ಹೊಡೆದಿದ್ದರೆ ನನ್ನನ್ನು ಕ್ಷಮಿಸು. ಮುಂದಿನ ಜನ್ಮದಲ್ಲೂ ಕೋಣವಾಗಿ ಹುಟ್ಟುವುದಾದರೆ ನೀನು ನನ್ನದೇ ಕೊಟ್ಟಿಗೆಯಲ್ಲಿ ಹುಟ್ಟಿ ಬಾ” ಎಂದು ಭಾವುಕರಾಗಿ ನುಡಿದರು.
ಯಜಮಾನನ ಈ ಭಾವುಕ ಮಾತುಗಳು ನೆರೆದಿದ್ದ ಕಂಬಳಾಭಿಮಾನಿಗಳ ಕಣ್ಣಲ್ಲೂ ನೀರು ತರಿಸಿತು.
Nandalike Pandu, one of the most celebrated buffaloes in the traditional Kambala races of coastal Karnataka, has died at the age of 26. Known for his speed, powerful performances and numerous achievements on the Kambala track, Pandu’s death has left Kambala enthusiasts and folk sports lovers across the coastal region mourning.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
29-09-26 01:25 pm
HK News Staffer
ಬಿ.ಸಿ.ರೋಡ್ ಸಭೆಯಲ್ಲಿ ಕರಾವಳಿ ಶಾಸಕರು, ಸಂಸದರ ಬಗ್ಗ...
29-09-26 11:41 am
ಕಂಬಳ ಲೋಕದ ದಿಗ್ಗಜ ‘ನಂದಳಿಕೆ ಪಾಂಡು’ ಇನ್ನಿಲ್ಲ: 20...
29-09-26 10:45 am
ದೇಶದಲ್ಲಿ 13 ಕೋಟಿ ಮತ ಡಿಲೀಟ್ ಆಗಿದ್ದು ಹೇಗೆ ? ಆಳು...
28-09-26 11:08 pm
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿಗೇನು ಕೊಟ್ಟಿ...
28-09-26 09:33 pm
29-09-26 03:48 pm
HK News Staffer
ಕರಂಗಲ್ಪಾಡಿಯಲ್ಲಿ ಅಪಘಾತ ; ನ್ಯಾಯಾಧೀಶರಿದ್ದ ಕಾರಿಗೆ...
29-09-26 01:22 pm
ಪತಿಯನ್ನು ಬಿಟ್ಟು ಪ್ರತ್ಯೇಕ ವಾಸ ; ಮಾಂಸದಂಗಡಿ ಮಾಲೀ...
29-09-26 09:20 am
ಮಾಡೂರು ಇಸುಬು ಹತ್ಯೆ ಪ್ರಕರಣ ; ನಾಲ್ವರು ಆರೋಪಿಗಳು...
28-09-26 11:03 pm
ಮಂಗಳೂರಲ್ಲಿ ಡ್ರಗ್ಸ್ ಜಾಲಕ್ಕೆ ಸಿಸಿಬಿ ಶಾಕ್ : ₹ 24...
28-09-26 03:08 pm