ಬ್ರೇಕಿಂಗ್ ನ್ಯೂಸ್
29-09-26 09:20 am HK News Staffer ಕ್ರೈಂ
ವಿಜಯವಾಡ, ಸೆ.29: ಪತಿಯನ್ನು ಬಿಟ್ಟು ಪ್ರತ್ಯೇಕ ವಾಸಿಸುತ್ತಿದ್ದ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಮಾಂಸದ ಅಂಗಡಿ ಮಾಲೀಕನೊಬ್ಬ ಆಕೆಯನ್ನು ಹತ್ಯೆಗೈದು ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಕಾಲುವೆಗೆ ಎಸೆದಿರುವ ಭೀಕರ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ವಿಜಯವಾಡ ಸಮೀಪದ ಇಬ್ರಾಹಿಂಪಟ್ಟಣಂ ಕೂಲಿಂಗ್ ಕಾಲುವೆಯಲ್ಲಿ ಪತ್ತೆಯಾಗಿದ್ದ ಮಹಿಳೆಯ ತುಂಡು ತುಂಡಾದ ದೇಹದ ಭಾಗಗಳ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದು, ಅವು ಮಂಗಳಗಿರಿ ನಿವಾಸಿ 29 ವರ್ಷದ ಕಲ್ಯಾಣಿ ಎಂಬಾಕೆಯದ್ದು ಎಂದು ದೃಢಪಡಿಸಿದ್ದಾರೆ.
ಸೆಪ್ಟೆಂಬರ್ 19ರಂದು ಕಾಲುವೆಯಲ್ಲಿ ಮಹಿಳೆಯ ದೇಹವಿಲ್ಲದ ರುಂಡ ಪತ್ತೆಯಾಗಿತ್ತು. ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನೆರವಿನಿಂದ ಪೊಲೀಸರು ಕಾಲುವೆಯಲ್ಲಿ ಶೋಧ ನಡೆಸಿ ತಲೆ, ಕಾಲುಗಳು ಹಾಗೂ ಕೈಗಳನ್ನು ಪತ್ತೆಹಚ್ಚಿದ್ದರು. ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮೃತದೇಹ ಪತ್ತೆಯಾದ ಕುರಿತು ತಿಳಿದ ಕಲ್ಯಾಣಿಯ ಸಹೋದರ ಆಕೆಯ ಕೈ ಮೇಲಿದ್ದ ಹಚ್ಚೆ ಹಾಗೂ ಇತರ ಗುರುತುಗಳ ಆಧಾರದ ಮೇಲೆ ಮೃತ ಮಹಿಳೆ ಕಲ್ಯಾಣಿ ಎಂದು ದೃಢಪಡಿಸಿದ್ದಾರೆ.
ಪೊಲೀಸರ ಪ್ರಕಾರ, ಕಲ್ಯಾಣಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಆಕೆಗೆ ಭವಾನೀಪುರಂನಲ್ಲಿ ಮಾಂಸದ ಅಂಗಡಿ ನಡೆಸುತ್ತಿದ್ದ ಶಫಿ ಎಂಬಾತನೊಂದಿಗೆ ಆತ್ಮೀಯ ಸಂಬಂಧವಿತ್ತು ಎನ್ನಲಾಗಿದೆ. ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಆಗಾಗ್ಗೆ ಜಗಳವು ನಡೆಯುತ್ತಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 17ರಂದು ಮಾತನಾಡುವ ನೆಪದಲ್ಲಿ ಕಲ್ಯಾಣಿಯನ್ನು ಭವಾನೀಪುರಂನಲ್ಲಿರುವ ತನ್ನ ಮನೆಗೆ ಶಫಿ ಕರೆಸಿಕೊಂಡಿದ್ದ ಎನ್ನಲಾಗಿದೆ. ಈ ವೇಳೆ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಶಫಿ ಚಾಕುವಿನಿಂದ ಕಲ್ಯಾಣಿಯ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ನಂತರ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ಚೀಲಗಳಲ್ಲಿ ತುಂಬಿ ಕೂಲಿಂಗ್ ಕಾಲುವೆಗೆ ಎಸೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಕೃತ್ಯಕ್ಕೆ ಶಫಿಯ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಸಹಕರಿಸಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿ ಶಫಿಯನ್ನು ಪ್ರಮುಖ ಆರೋಪಿಯಾಗಿ ಪರಿಗಣಿಸಿರುವ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಬ್ರಾಹಿಂಪಟ್ಟಣಂ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಸಂಪೂರ್ಣ ಹಿನ್ನೆಲೆ ಪತ್ತೆಗಾಗಿ ತನಿಖೆ ಮುಂದುವರಿದಿದೆ.
A woman living separately from her husband was allegedly murdered by a meat shop owner with whom she was reportedly close, and her body was cut into nine pieces before being dumped in a canal in Andhra Pradesh.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
29-09-26 01:25 pm
HK News Staffer
ಬಿ.ಸಿ.ರೋಡ್ ಸಭೆಯಲ್ಲಿ ಕರಾವಳಿ ಶಾಸಕರು, ಸಂಸದರ ಬಗ್ಗ...
29-09-26 11:41 am
ಕಂಬಳ ಲೋಕದ ದಿಗ್ಗಜ ‘ನಂದಳಿಕೆ ಪಾಂಡು’ ಇನ್ನಿಲ್ಲ: 20...
29-09-26 10:45 am
ದೇಶದಲ್ಲಿ 13 ಕೋಟಿ ಮತ ಡಿಲೀಟ್ ಆಗಿದ್ದು ಹೇಗೆ ? ಆಳು...
28-09-26 11:08 pm
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿಗೇನು ಕೊಟ್ಟಿ...
28-09-26 09:33 pm
29-09-26 03:48 pm
HK News Staffer
ಕರಂಗಲ್ಪಾಡಿಯಲ್ಲಿ ಅಪಘಾತ ; ನ್ಯಾಯಾಧೀಶರಿದ್ದ ಕಾರಿಗೆ...
29-09-26 01:22 pm
ಪತಿಯನ್ನು ಬಿಟ್ಟು ಪ್ರತ್ಯೇಕ ವಾಸ ; ಮಾಂಸದಂಗಡಿ ಮಾಲೀ...
29-09-26 09:20 am
ಮಾಡೂರು ಇಸುಬು ಹತ್ಯೆ ಪ್ರಕರಣ ; ನಾಲ್ವರು ಆರೋಪಿಗಳು...
28-09-26 11:03 pm
ಮಂಗಳೂರಲ್ಲಿ ಡ್ರಗ್ಸ್ ಜಾಲಕ್ಕೆ ಸಿಸಿಬಿ ಶಾಕ್ : ₹ 24...
28-09-26 03:08 pm