ಬ್ರೇಕಿಂಗ್ ನ್ಯೂಸ್
22-09-26 08:32 pm HK News Staffer ಕರಾವಳಿ
ಮಂಗಳೂರು, ಸೆ.22: ಬೀದರಿನ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಇಸ್ಲಾಮಿಕ್ ಮತ್ತು ಪಿಯು-ಸಿಎ ಶಿಕ್ಷಣಕ್ಕಾಗಿ ಸೇರ್ಪಡೆಯಾಗಿ, ಹಾಸ್ಟೆಲಿನಲ್ಲಿ ಉಳಿದುಕೊಂಡಿದ್ದ ಮಂಗಳೂರಿನ ವಿದ್ಯಾರ್ಥಿನಿಯೊಬ್ಬಳು ಒಂದೂವರೆ ತಿಂಗಳಲ್ಲಿ ತೀವ್ರ ಅಸ್ವಸ್ಥಳಾಗಿ ಆಸ್ಪತ್ರೆಗೆ ದಾಖಲಾಗಿ ಕೋಮಾ ಸ್ಥಿತಿಗೆ ಹೋದ ಘಟನೆ ನಡೆದಿದ್ದು, ಹೆತ್ತವರು ಗಾಬರಿಗೊಂಡು ಶಾಹೀನ್ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.
ಜೂನ್ ತಿಂಗಳ ಕೊನೆಯಲ್ಲಿ ಕಾಲೇಜಿಗೆ ಸೇರಿದ್ದು ಮಗಳು ಅಲ್ಲಿನ ಹಾಸ್ಟೆಲ್ ಸೇರ್ಪಡೆಯಾದ ನಾಲ್ಕೇ ದಿವಸದಲ್ಲಿ ಭೇದಿ ಶುರುವಾಗಿತ್ತು. ಆನಂತರ, ಫುಡ್ ಸರಿಯಾಗುತ್ತಿಲ್ಲ, ಇಲ್ಲಿ ಎಲ್ಲ ಮಕ್ಕಳಿಗೂ ಟೈಫಾಯ್ಡ್ ಇದೆಯೆಂದು ಹೇಳುತ್ತಿದ್ದಳು. ಆನಂತರ, ಜ್ವರಕ್ಕೆಂದು ಅಲ್ಲಿಯೇ ಆಸ್ಪತ್ರೆಗೆ ದಾಖಲಾಗಿ ಔಷಧಿ ಪಡೆದಿದ್ದಳಂತೆ. ಆದರೆ, ಸರಿಯಾದ ಚಿಕಿತ್ಸೆ ಸಿಕ್ಕಿರಲಿಲ್ಲ. ರೆಸ್ಟ್ ಬೇಕೆಂದು ಹೇಳಿದರೂ, ಹಾಸ್ಟೆಲಿನಲ್ಲಿ ಒತ್ತಡ ಹೇರಿ ಕಾಲೇಜಿಗೆ ಕಳಿಸುತ್ತಿದ್ದರಂತೆ. ಅಲ್ಲಿಂದ ಕರೆತರುವಾಗ ದೈಹಿಕವಾಗಿ ತುಂಬ ಬಳಲಿದ್ದಳು. ಆಗಸ್ಟ್ 18ರಂದು ಮಂಗಳೂರಿಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು.


ಮೊದಲಿಗೆ ಎಜೆ ಆಸ್ಪತ್ರೆಯಲ್ಲಿ ಆನಂತರ, ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದೇವೆ, ಈಗ ಕೋಮಾ ಸ್ಥಿತಿಗೆ ಹೋಗಿದ್ದಾಳೆ. ಟೈಫಾಯ್ಡ್ ಬಿಗಡಾಯಿಸಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. 20 ದಿನಗಳ ಚಿಕಿತ್ಸೆಗೆ 35 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದೇವೆ. ಇದರ ನಡುವೆ, ಆಗಸ್ಚ್ 15ರಂದು ಆರೋಗ್ಯ ಸಚಿವ ಯುಟಿ ಖಾದರ್ ಅವರನ್ನು ಕಂಡು ವಿಷಯ ತಿಳಿಸಿದ್ದೆವು. ಶಾಹೀನ್ ಸಂಸ್ಥೆಯ ನಿರ್ಲಕ್ಷ್ಯ ಮತ್ತು ಅಲ್ಲಿ ಇನ್ನೂ ಹಲವು ಮಕ್ಕಳು ಟೈಫಾಯ್ಡ್ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವುದನ್ನು ಹೇಳಿದ್ದೆವು. ಆದರೆ ಖಾದರ್ ಅವರು ತನಗೆ ವಾಟ್ಸಪ್ ಮಾಡಿಯೆಂದು ಹೇಳಿದ್ದು ಬಿಟ್ಟರೆ ನಮ್ಮ ನೋವಿಗೆ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿನಿಯ ಹೆತ್ತವರಾದ ಅಶ್ಫಾಕ್ ಶೇಕ್ ಸುದ್ದಿಗೋಷ್ಟಿಯಲ್ಲಿ ನೋವು ಹೇಳಿಕೊಂಡಿದ್ದಾರೆ.
ಶಾಹೀನ್ ಸಂಸ್ಥೆಯ ಹಾಸ್ಟೆಲ್ ನವರ ನಿರ್ಲಕ್ಷ್ಯದಿಂದ ನನ್ನ ಮಗಳಿಗೆ ಈ ಸ್ಥಿತಿಯಾಗಿದೆ. ಏನೇ ಆರೋಗ್ಯ ತೊಂದರೆಯಾದರೂ ನಮಗೆ ಹೇಳಬೇಕಿತ್ತು. ಇಸ್ಲಾಮಿಕ್ ಶಿಕ್ಷಣ ಮತ್ತು ಪಿಯುಸಿಯಿಂದಲೇ ಸಿಎ ಶಿಕ್ಷಣ ಸಿಗುತ್ತದೆ ಎನ್ನುವ ಕಾರಣಕ್ಕೆ ಮಗಳನ್ನು ಅಲ್ಲಿಗೆ ಸೇರಿಸಿದ್ದೆವು. ಈಗ ಗೋಗರೆಯುವ ಸ್ಥಿತಿಯಾಗಿದೆ. ಮಗಳ ಜೀವ ಉಳಿಸುವುದೇ ಈಗ ಮುಖ್ಯವಾಗಿದ್ದು, ಶಾಹೀನ್ ಸಂಸ್ಥೆಯವರು ವೈದ್ಯಕೀಯ ಚಿಕಿತ್ಸೆಗಾಗಿ ನೆರವು ಕೊಡಬೇಕು. ಚಿಕಿತ್ಸೆಗಾಗಿ ಈಗಾಗಲೇ ಅನುಭವಿಸಿರುವ ಆರ್ಥಿಕ ಹೊರೆಗಾಗಿ ಮಾನವೀಯ ನೆಲೆಯಲ್ಲಿ ನೆರವು ಯಾಚಿಸುತ್ತಿದ್ದೇನೆ ಎಂದು ಹೇಳಿದರು.
ಮಂಗಳೂರಿಗೆ ಕರೆತಂದು ಚಿಕಿತ್ಸೆ ನೀಡುತ್ತಿದ್ದರೂ, ಶಾಹೀನ್ ಸಂಸ್ಥೆಯವರು ಮಗಳ ಸ್ಥಿತಿ ಹೇಗಿದೆ ಎಂದು ಈವರೆಗೂ ಕೇಳಿಲ್ಲ. ನಮಗೆ ಬೇಕಿರುವುದು ಆರೋಪ, ಪ್ರತ್ಯಾರೋಪ ಅಲ್ಲ. ಶಿಕ್ಷಣಕ್ಕಾಗಿ ಹಾಸ್ಟೆಲ್ ಸೇರಿಸಿದ ಬಳಿಕ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕಲ್ವಾ.. ಶಾಹೀನ್ ಸಂಸ್ಥೆಯವರು ಯಾಕಾಗಿ ನಿರ್ಲಕ್ಷ್ಯ ವಹಿಸಿದ್ದಾರೆ, ಅಲ್ಲಿ ನೀಡಿರುವ ಚಿಕಿತ್ಸೆಯ ವಿವರಗಳೇನು, ವೈದ್ಯಕೀಯ ದಾಖಲೆಗಳನ್ನು ನೀಡಬೇಕು. ಇದರ ಬಗ್ಗೆ ಆರೋಗ್ಯ ಇಲಾಖೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿನಿಯ ಕುಟುಂಬದ ಸೈಯದ್ ಶಾರೀಕ್, ಅನ್ಸಾರ್ ಅಲಿ, ಶೌಕತ್ ಉಪಸ್ಥಿತರಿದ್ದರು.
22-09-26 08:58 pm
HK News Staffer
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
ಎಡಪಂಥೀಯ ಉಗ್ರವಾದ ಹೆಸರಲ್ಲಿ 'ಮಿಷನರಿ ಚಟುವಟಿಕೆ' ;...
21-09-26 12:58 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
22-09-26 08:32 pm
HK News Staffer
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
22-09-26 09:00 pm
HK News Staffer
ಅತಿ ವೇಗದ ಚಾಲನೆ ; ಮರೋಳಿಯಲ್ಲಿ ಹೈಟೆನ್ಶನ್ ವಿದ್ಯುತ...
22-09-26 07:05 pm
ದುಬೈನಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಶವ...
22-09-26 06:59 pm
ಪೆರ್ನೆಯಲ್ಲಿ ಇಬ್ಬರು ಮಕ್ಕಳ ಬಾವಿಗೆ ಎಸೆತ ಪ್ರಕರಣ :...
22-09-26 02:57 pm
ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತಕ್ಕೆ ಟ್ರಾಪ್ ಆದ ಬಜ್ಪ...
21-09-26 08:21 pm