ಬ್ರೇಕಿಂಗ್ ನ್ಯೂಸ್
06-04-26 07:58 pm HK News Staffer ಕರಾವಳಿ
ಬೆಳ್ತಂಗಡಿ, ಎಪ್ರಿಲ್ 6: ಇತ್ತೀಚೆಗೆ ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣದಿಂದಾಗಿ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಅರಣ್ಯದಲ್ಲಿ ಅಪರಿಚಿತ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎಪ್ರಿಲ್ 6ರ ಬೆಳಗ್ಗೆ 10 ಗಂಟೆ ಸುಮಾರಿಗೆ ಶವ ಕಾಣಸಿಕ್ಕಿದ್ದು ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿದ್ದಾರೆ.
ಸುಮಾರು 40-50 ವರ್ಷ ಪ್ರಾಯದ ಪ್ಯಾಂಟ್, ಶರ್ಟ್ ಹಾಕಿರುವ ಗಂಡಸಿನ ಮೃತದೇಹವಾಗಿದ್ದು ಕೊಳೆತು ನಾರುವ ಸ್ಥಿತಿಯಲ್ಲಿತ್ತು. ಮೃತದೇಹವು ಎತ್ತರ 5.7 ಅಡಿ, ಸಾಧಾರಣ ಶರೀರವಾಗಿದ್ದು, ಕೊಳೆತಿರುವುದರಿಂದ ಯಾವುದೇ ಚಹರೆ ಗುರುತು ಪತ್ತೆಯಾಗಿಲ್ಲ. ಮೈಮೇಲೆ ಬಿಳಿ ಬಣ್ಣದ ಉದ್ದ ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಬನಿಯನ್, ಕಪ್ಪು ಬಣ್ಣದ ಒಳ ಚಡ್ಡಿ, ಎಡಗೈಯಲ್ಲಿ ಗೋಲ್ಡನ್ ಕಲರಿನ ವಾಚ್, ಎಡಕೈ ಉಗುಂರ ಬೆರಳಿನಲ್ಲಿ ತಿಳಿನೀಲಿ ಬಣ್ಣದ ಕಲ್ಲು ಇರುವ ಲೋಹದ ಉಂಗುರ ಧರಿಸಿದೆ.
ಶವ ಪೂರ್ತಿ ಕೊಳೆತು ಬಾತುಕೊಂಡಿದ್ದು ಹತ್ತು ದಿನಗಳ ಹಿಂದೆ ಸತ್ತಿರಬಹುದು ಎನ್ನುವ ಶಂಕೆಯಿದೆ. ಆತ್ಮಹತ್ಯೆಯೋ, ಯಾವ ರೀತಿಯಲ್ಲಿ ಸಾವು ಸಂಭವಿಸಿದೆ ಎನ್ನುವುದು ತಿಳಿದುಬಂದಿಲ್ಲ. ಧರ್ಮಸ್ಥಳ ಪೊಲೀಸರು ಪೋಸ್ಟ್ ಮಾರ್ಟಂ ನಡೆಸಲು ಶವವನ್ನು ಮಂಗಳೂರಿನ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸದ್ರಿ ವ್ಯಕ್ತಿಯ ವಾರೀಸುದಾರರು ಅಥವಾ ಸಂಬಂಧಿಕರು ಇದ್ದರೆ ಧರ್ಮಸ್ಥಳ ಠಾಣೆಗೆ ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಬಂಗ್ಲೆಗುಡ್ಡೆ ಕಾಡಿನಲ್ಲಿ ಹಲವಾರು ಅಸ್ಥಿಪಂಜರಗಳು ಸಿಕ್ಕಿವೆ ಎನ್ನುವ ಗುಮಾನಿ ಹಬ್ಬಿತ್ತು. ನೂರಾರು ಶವ ಹೂತ ಪ್ರಕರಣ ಸಂಬಂಧಿಸಿ ರಚನೆಯಾಗಿದ್ದ ವಿಶೇಷ ತನಿಖಾ ತಂಡ ಕಾಡಿನಲ್ಲಿ ಶೋಧ ಕಾರ್ಯ ನಡೆಸಿತ್ತು. ಪುತ್ತೂರು ವಿಭಾಗಾಧಿಕಾರಿ ನೇತೃತ್ವದಲ್ಲಿ ಅಸ್ಥಿಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಪ್ರಕರಣ ಕುರಿತಾಗಿ ಎಸ್ಐಟಿ ತಂಡವು ಕೋರ್ಟಿಗೆ ಪ್ರಾಥಮಿಕ ವರದಿಯನ್ನೂ ಸಲ್ಲಿಸಿತ್ತು. ಶವ ಹೂತ ಪ್ರಕರಣ ತಾರ್ಕಿಕ ಅಂತ್ಯ ಕಂಡಿಲ್ಲವಾದರೂ ಈ ನಡುವೆ ಅದೇ ಜಾಗದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರುವುದು ಮತ್ತೆ ಸುದ್ದಿಗೆ ಗ್ರಾಸವಾಗಿದೆ.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 02:35 pm
HK News Staffer
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am