ಬ್ರೇಕಿಂಗ್ ನ್ಯೂಸ್
25-03-26 12:15 pm HK News Staffer ಕರಾವಳಿ
ಉಳ್ಳಾಲ, ಮಾ.24: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಕಾದಿರಿಸಿದ ಜಮೀನನ್ನು ತಹಶೀಲ್ದಾರ್ ಅವರು ಹೊಳೆ ಪರಂಬೋಕೆಂದು ಹೊಸ ತಗಾದೆ ತೆಗೆದು ದಾರಿ ತಪ್ಪಿಸುತ್ತಿದ್ದಾರೆ. ಗುಡ್ಡ ಪ್ರದೇಶಗಳಲ್ಲಿ ಹೊಳೆ ಪರಂಬೋಕು ಬರಲು ಹೇಗೆ ಸಾಧ್ಯ. ಇದನ್ನೆಲ್ಲ ಮುಖ್ಯಾಧಿಕಾರಿಗಳು ಪರಿಶೀಲಿಸಬೇಕಲ್ಲವೇ ಎಂದು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಕೋಟೆಕಾರು ಪ.ಪಂ ರೆಬೆಲ್ ಕೌನ್ಸಿಲರ್ ಸುಜಿತ್ ಮಾಡೂರು ಪ್ರಶ್ನಿಸಿದ್ದಾರೆ.
ಮಂಗಳವಾರ ಕೋಟೆಕಾರು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷೆ ದಿವ್ಯಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ನಿವೇಶನ ರಹಿತರ ಅರ್ಜಿ ವಿಲೇವಾರಿ ಮಾಡುವಂತೆ ಸಾಮಾನ್ಯ ಸಭೆಗಳಲ್ಲಿ ನಿರಂತರ ಧ್ವನಿಯೆತ್ತಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದು ಆಡಳಿತ ಬಿಜೆಪಿ ಪಕ್ಷಕ್ಕೆ ಬಿಸಿ ಮುಟ್ಟಿಸಿ ಪಕ್ಷದಿಂದಲೇ ಉಚ್ಚಾಟಿಸಲ್ಪಟ್ಟ ಕೌನ್ಸಿಲರ್ ಸುಜಿತ್ ಅವರು ಮತ್ತೆ ಸರಕಾರಿ ನಿವೇಶನದ ಗಡಿ ಗುರುತಿನ ಬಗ್ಗೆ ಧ್ವನಿ ಎತ್ತಿ ಹೋರಾಟ ಮುಂದುವರೆಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು ಸಾಮಾನ್ಯ ಸಭೆಗಳಲ್ಲಿ ಮುಖ್ಯಾಧಿಕಾರಿಯ ಪಾತ್ರವೇನು?ಸಾಮಾನ್ಯ ಸಭೆಗಳಲ್ಲಿ ಆಗುವ ನಿರ್ಣಯಗಳ ಅನುಷ್ಠಾನಕ್ಕಾಗಿ ನಾವು ತಹಶೀಲ್ದಾರ್ ಬಳಿ ಹೋಗಿ ಅಲವತ್ತುಕೊಂಡರೂ ಮುಖ್ಯಾಧಿಕಾರಿಗಳು ಅಲ್ಲಿಗೆ ಬರಲ್ಲ. ಒಂದೂವರೆ ವರ್ಷಗಳ ಹಿಂದೆ ಕೈಗೊಂಡ ಸರ್ಕಾರಿ ಜಾಗದ ಗಡಿ ಗುರುತು ನಿರ್ಣಯ ಇದುವರೆಗೆ ಪಾಲನೆ ಆಗದಿರಲು ಕಾರಣ ಏನು? ಅಧಿಕಾರಿಗಳಲ್ಲಿ ಇಷ್ಟೊಂದು ಉದಾಸೀನ ಪೃವೃತ್ತಿಯಿದ್ದರೆ ನಾವು ಸಾಮಾನ್ಯ ಸಭೆಗಳಲ್ಲಿ ಚರ್ಚೆ, ನಿರ್ಣಯಗಳನ್ನ ಮಾಡಿ ಏನು ಫಲ ಇದೆ. ಕೌನ್ಸಿಲರ್ ಗಳಿಗೆ ಮಾಸಿಕ 800 ರೂ. ಭತ್ಯೆ ಸಿಗುತ್ತದೆ. ಅಧಿಕಾರಿಗಳು ಸರಕಾರಿ ಸಂಬಳ ಎಣಿಸಿದರೂ ನೀವು ಮಾಡಬೇಕಾದ ಕೆಲಸಗಳನ್ನು ನಾವು ಮಾಡುವ ಅನಿವಾರ್ಯತೆ ಬಂದೊದಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.


ಸರ್ಕಾರಿ ಜಾಗ ಗಡಿಗುರುತು ಬಗ್ಗೆ ನಾವು ತಹಸೀಲ್ದಾರ್ ಗೆ ಪತ್ರ ಬರೆದಿದ್ದೇವೆ, ಎಷ್ಟು ದಿನಗಳಲ್ಲಿ ಕೆಲಸ ಆಗುತ್ತದೆ ಎನ್ನುವುದು ತಹಸೀಲ್ದಾರ್ ಅವರಿಗೆ ಬಿಟ್ಟ ವಿಚಾರ. ಅಧ್ಯಕ್ಷರು, ಸದಸ್ಯರನ್ನು ತಹಸೀಲ್ದಾರ್ ಬಳಿ ನಾನು ಕಳಿಸಿಲ್ಲವೆಂದು ಮುಖ್ಯಾಧಿಕಾರಿ ಮಾಲಿನಿ ಸ್ಪಷ್ಟನೆ ನೀಡಿದರು. ಸ.ನಂ.222ರ 9.94 ಎಕ್ರೆಯಲ್ಲಿ 1.42 ಎಕರೆ ಜಮೀನನ್ನು 2019ರಲ್ಲಿ ಉಳ್ಳಾಲ ಕಡಲ್ಕೊರೆತ ನಿರಾಶ್ರಿತರಿಗೆ ಮೀಸಲಿಡಲಾಗಿದೆ. 94 ಮನೆ ನಿವೇಶನ ಪೈಕಿ 92 ಅನ್ನು ಅಲ್ಪಸಂಖ್ಯಾತರಿಗೆ ಹಾಗೂ ಕೇವಲ 2 ನಿವೇಶನವನ್ನು ಬಹುಸಂಖ್ಯಾತರಿಗೆ ನೀಡಲಾಗಿದ್ದು ಆವಾಗ ಸುಜಿತ್ ಮಾಡೂರು ಎಲ್ಲಿದ್ದರೆಂದು ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ವಾಸ್ತವದಲ್ಲಿ 2022ರಲ್ಲೇ ಸರ್ಕಾರ ನಿವೇಶನ ಹಿಂದಕ್ಕೆ ಪಡೆದಿದ್ದರೂ ಪ.ಪಂ.ನಿಂದ ಸುಳ್ಳು ಮಾಹಿತಿ ಕೊಡುವ ಉದ್ದೇಶವೇನೆಂದು ಪ್ರಶ್ನಿಸಿದರು. ಸುಜಿತ್ ಜೊತೆ ಪಕ್ಷೇತರ ಸದಸ್ಯ ಹರೀಶ್ ರಾವ್ ಕೂಡಾ ಧ್ವನಿಗೂಡಿಸಿ, ಇದೊಂದು ಗಂಭೀರ ವಿಚಾರ. ಸಂತ್ರಸ್ತರಿಗೆ ಮೀಸಲಿಟ್ಟ ಜಾಗದಲ್ಲಿ ನಿವೇಶನ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲೇ ಸಭೆಯಲ್ಲಿ ಕೆಲ ಹೊತ್ತು ಚರ್ಚೆ ನಡೆಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳಿಗೆ ಪಂಚಾಯತ್ ಆಡಳಿತ ಉತ್ತರಿಸಬೇಕಿಲ್ಲವೆಂದು ಅಧ್ಯಕ್ಷೆ ದಿವ್ಯ ಶೆಟ್ಟಿ ಹೇಳಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಗಳಾಗದಂತೆ ಬೀದಿ ನಾಯಿಗಳ ಆಶ್ರಯ ತಾಣಗಳನ್ನ ನಿರ್ಮಿಸಬೇಕಿದೆಯೆಂದು ಪ.ಪಂ ಸದಸ್ಯರಾದ ಹರೀಶ್ ರಾವ್ ಮಡ್ಯಾರ್ ಕಳಕಳಿ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪಂಚಾಯತ್ ಆರೋಗ್ಯ ನಿರೀಕ್ಷಕ ವಿಕ್ರಂ ಅವರು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ಕೂಡ ಆಯಾ ವ್ಯಾಪ್ತಿಯ ಬೀದಿ ನಾಯಿಗಳಿಗೆ ಆಶ್ರಯ ತಾಣಗಳನ್ನು ನಿರ್ಮಿಸುವುದು ಕಡ್ಡಾಯ ಎಂದರು.
ಈ ಸಂದರ್ಭ ಫಲಾನುಭವಿಗಳಿಗೆ ಪೋಷಣಾ ಭತ್ಯೆ, ವೈದ್ಯಕೀಯ ವೆಚ್ಚ ಸಹಾಯಧನದ ಚೆಕ್ ವಿತರಿಸಲಾಯಿತು. ಪ.ಪಂ ಉಪಾಧ್ಯಕ್ಷರಾದ ಪ್ರವೀಣ್ ಐ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರಜ್ ಕುಸಾಲ್ ನಗರ ಉಪಸ್ಥಿತರಿದ್ದರು.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 02:35 pm
HK News Staffer
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am