ಬ್ರೇಕಿಂಗ್ ನ್ಯೂಸ್
18-02-26 11:24 pm Mangaluru Staffer ಕರಾವಳಿ
ಮಂಗಳೂರು, ಫೆ.18: ಕಳೆದ ಮಳೆಗಾಲದಲ್ಲಿ ಮನೆ ಕುಸಿದು ತನ್ನೆರಡು ಮಕ್ಕಳನ್ನು ಮತ್ತು ಎರಡೂ ಕಾಲುಗಳನ್ನು ಕಳಕೊಂಡ ಮಂಜನಾಡಿಯ ಅಶ್ವಿನಿ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ, ಸರ್ಕಾರದ ಪರಿಹಾರವೂ ಸಿಕ್ಕಿಲ್ಲ ಎಂದು ಆಕೆಯ ಕುಟುಂಬಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತರು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ ಭಟ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಗುಡ್ಡ ಕುಸಿತದಿಂದ ಸಾವು ಬದುಕಿನ ನಡುವೆ ಹೋರಾಡಿದ್ದ ಅಶ್ವಿನಿ ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು ಎರಡು ಕಾಲುಗಳನ್ನೂ ಕಳಕೊಂಡಿದ್ದರು. ಸದ್ಯ, ತನ್ನದಲ್ಲದ ತಪ್ಪಿಗೆ ಇನ್ನೊಬ್ಬರ ಆಸರೆಯಲ್ಲಿ ಬದುಕುವ ಸ್ಥಿತಿಯಾಗಿದೆ. ಇವರ ಕುಟುಂಬಕ್ಕೆ ಅತ್ತ ಮನೆಯೂ ಸಿಕ್ಕಿಲ್ಲ, ಇತ್ತ ಪರಿಹಾರವೂ ಸಿಕ್ಕಿಲ್ಲ. ನ್ಯಾಯಕ್ಕಾಗಿ ಅಧಿಕಾರಿಗಳ ಬಳಿ ಅಲೆದು ಸುಸ್ತಾಗಿ ಈಗ ಮಂಗಳೂರಿಗೆ ಬಂದ ಮಾನವ ಹಕ್ಕು ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ನೋವು ಹೇಳಿಕೊಂಡಿದ್ದಾರೆ.

2025ರ ಮೇ 30 ರಂದು ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ದುರಂತ ಸಂಭವಿಸಿತ್ತು. ಮನೆಯ ಅಡಿಯಲ್ಲಿ ಸಿಲುಕಿದ್ದ ಅಶ್ವಿನಿ ಅವರ ಇಬ್ಬರು ಮಕ್ಕಳು ಮತ್ತು ಅತ್ತೆ ಸಾವನ್ನಪ್ಪಿದ್ದರು. ಮಾವ ಕಾಂತಪ್ಪ ಪೂಜಾರಿ ಅವರೂ ತೀವ್ರ ಏಟು ಬಿದ್ದು ಆಸ್ಪತ್ರೆ ಸೇರಿದ್ದರು. ತೀವ್ರ ಗಾಯಗೊಂಡಿದ್ದ ಅಶ್ವಿನಿ ಅವರ ಎರಡು ಕಾಲುಗಳನ್ನು ಆಸ್ಪತ್ರೆಯಲ್ಲಿ ಕತ್ತರಿಸಬೇಕಾಗಿ ಬಂದಿತ್ತು. ಸರ್ಕಾರ ನೈಸರ್ಗಿಪ ವಿಕೋಪ ಅಂತ ಎರಡು ಲಕ್ಷ ಪರಿಹಾರ ಕೊಟ್ಟು ಕೈತೊಳೆದುಕೊಂಡಿತ್ತು. ಆದ್ರೆ ಇದು ಪ್ರಾಕೃತಿಕ ವಿಕೋಪ ಅಲ್ಲ. ಮಾನವ ನಿರ್ಮಿತ ಕೃತ್ಯದ ಘಟನೆ ಅಂತ ಅಶ್ವಿನಿ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದ್ರೆ ಅಲ್ಲಿ ರಸ್ತೆ ಮಾಡಲು ಗುಡ್ಡ ಕಡಿಯಲಾಗಿದೆ ಎಂದು ನೆಪ ಹೇಳಿ ಜಿಪಂ ಎಂಜಿನಿಯರ್ ಗಳು ತಮ್ಮ ವರದಿಯನ್ನೇ ಬುಡಮೇಲು ಮಾಡಿದ್ದರು. ಮಾನವೀಯ ಗುಣವನ್ನೆ ಸಾಯುವಂತೆ ಮಾಡಿದ್ದರು.
ಆಬಳಿಕ ಪದೇ ಪದೇ ಆಂಬುಲೆನ್ಸ್ ನಲ್ಲಿ ಬಂದು ಜಿಲ್ಲಾಧಿಕಾರಿ ಮೊರೆ ಹೋದರೂ ನ್ಯಾಯ ಸಿಕ್ಕಿಲ್ಲ. ಕ್ಷೇತ್ರದ ಶಾಸಕ ಖಾದರ್ ಸ್ಪೀಕರ್ ಆಗಿದ್ದರೂ ನ್ಯಾಯದ ಕದ ತೆರೆಯಲಿಲ್ಲ. ಅಶ್ವಿನಿ ಅವರನ್ನು ವೀಲ್ ಚೇರ್ ನಲ್ಲಿ ಕೂರಿಸಿಕೊಂಡು ಬುಧವಾರ ಮಂಗಳೂರಿನ ಜಿಪಂ ಕಚೇರಿಗೆ ಬಂದಿದ್ದ ಕುಟುಂಬಸ್ಥರು ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಂ ಭಟ್ ಅವರನ್ನು ಭೇಟಿ ಮಾಡಿಸಿದ್ದಾರೆ. ಜಿಲ್ಲಾಡಳಿತ ಕೊಟ್ಟ ಪರಿಹಾರ ಅಶ್ವಿನಿಯ ಚಿಕಿತ್ಸೆಗೂ ಸಾಕಾಗಿಲ್ಲ. ಸದ್ಯಕ್ಕೆ ಈಕೆಯನ್ನು ತಾಯಿಯೇ ಆರೈಕೆ ಮಾಡಿ ನೋಡಿಕೊಳ್ಳುತ್ತಿದ್ದಾರೆ. ಮುಂದೆ ಅವರಿಂದ ಆಗದಿದ್ರೆ ಅಶ್ವಿನಿಗೆ ಭಿಕ್ಷೆ ಬೇಡುವ ಸ್ಥಿತಿ ಬರುತ್ತೆ. ಇತ್ತ ಇದ್ದ ಮನೆಯೂ ಇಲ್ಲ. ಆದ್ದರಿಂದ ಮಾನವ ಕೃತ ದುರಂತ ಆಗಿರುವುದರಿಂದ 5 ಕೋಟಿ ಗರಿಷ್ಠ ಪರಿಹಾರ ನೀಡಬೇಕು ಅನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ. ಆಯೋಗದ ಅಧಿಕಾರಿಗಳು ಸರ್ಕಾರದ ಜೊತೆ ಮಾತುಕತೆ ಮಾಡುತ್ತೇವೆಂದು ಹೇಳಿ ತೆರಳಿದ್ದಾರೆ.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am