ಬ್ರೇಕಿಂಗ್ ನ್ಯೂಸ್
14-02-26 05:16 pm Mangaluru Staffer ಕರಾವಳಿ
ಮಂಗಳೂರು, ಫೆ.14: ಕಾಂಗ್ರೆಸ್ ಸರ್ಕಾರ ಸಾವಿರ ಸಂಭ್ರಮ ಅಂತ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಆದರೆ ಇವರ ಈ ಸಂಭ್ರಮ ಯಾಕೆ? ಭ್ರಷ್ಟಾಚಾರ ಮಾಡಿದ್ದಕ್ಕೆ ಸಂಭ್ರಮವಾ? 60% ಭ್ರಷ್ಟಾಚಾರ, ನಾಗೇಂದ್ರ, ವೀರೇಂದ್ರ ಪಪ್ಪಿ, ಸತೀಶ್ ಸೈಲ್ ಜೈಲಿಗೆ ಹೋದ ಕಾರಣಕ್ಕೆ ಸಂಭ್ರಮನಾ? ಕಾನೂನು ಸುವ್ಯವಸ್ಥೆ ಹದಗೆಟ್ಟ ಕಾರಣಕ್ಕೆ, ಡ್ರಗ್ ಮಾಫಿಯಾ ಕಾರಣಕ್ಕೆ ಸಂಭ್ರಮವಾ? ಗುತ್ತಿಗೆದಾರರ ಬಿಲ್ ಬಾಕಿ ಇಟ್ಟು ಆತ್ಮಹತ್ಯೆ ಹಂತಕ್ಕೆ ದೂಡಿದ್ದಕ್ಕೆ ಸಂಭ್ರಮವಾ? ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ.
ಗೃಹಲಕ್ಷ್ಮಿ ಹಣ ದುರುಪಯೋಗ, ಅಭಿವೃದ್ಧಿ ಶೂನ್ಯ, ಅಬಕಾರಿ ಹಗರಣಕ್ಕೆ ಸಂಭ್ರಮ ನಡೆಸುತ್ತಿದ್ದಾರೆಯೇ ? ಪ್ರತಿ ನಿತ್ಯ ಈ ಸರ್ಕಾರದ ವಿರುದ್ಧ ನೆಗೆಟಿವ್ ಸುದ್ದಿ ಬರ್ತಾ ಇದೆ, ನಿಮ್ಮ ಸಂಭ್ರಮಕ್ಕೆ ಯಾವ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದವರು ಸುದ್ದಿಗೋಷ್ಟಿಯಲ್ಲಿ ಪ್ರಶ್ನೆ ಮಾಡಿದರು.
ಮುಖ್ಯಮಂತ್ರಿ ಮೇಲೆಯೇ ಮೂಡಾ ಸೈಟ್ ಪಡೆದ ಆರೋಪ ಬಂತು. ಆಬಳಿಕ ಅದನ್ನೂ ಮುಚ್ಚಿ ಹಾಕಿದ್ರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯ ನೆನಪಿಡುವ ಕೆಲಸ ಏನಾದ್ರೂ ಮಾಡಿದ್ದೀರಾ? ಜನರು ಸಂಕಷ್ಟದಲ್ಲಿರುವಾಗ ನೀವು ಸಂಭ್ರಮಿಸೋದು ವಿಕೃತಿಯ ಪರಮಾವಧಿ ಎಂದು ಸಿಟಿ ರವಿ ಟೀಕಿಸಿದರು. ಬಿಜೆಪಿ ಸರ್ಕಾರದ ಇದ್ದಾಗ 40% ಆರೋಪ ಮಾಡಿದ್ರೂ ಆಯೋಗ ಆರೋಪದಲ್ಲಿ ಹುರುಳಿಲ್ಲ ಎಂದು ನಿರಾಕರಿಸಿತ್ತು. ಈಗ ಮತ್ತೆ ಗುತ್ತಿಗೆದಾರರು ಹಿಂದಿನಿಂದಲೂ ಹೆಚ್ಚು ಪರ್ಸೆಂಟೇಜ್ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ, ಬೈರತಿ ಬಸವರಾಜ್ ಪ್ರಕರಣ ರಾಜಕೀಯ ಪ್ರೇರಿತ, ಅವರ ವಿರುದ್ಧ ಯಾವುದೇ ಸಾಕ್ಷಿ ಇಲ್ಲ. ಪ್ರಯಾಗ್ ರಾಜ್ ನಲ್ಲಿ ಆರೋಪಿ ಜೊತೆಗೆ ಫೋಟೋ ತೆಗೆಸಿಕೊಂಡ ಕಾರಣಕ್ಕೆ ಆರೋಪ ಮಾಡಲಾಗಿದೆ. ಬೈರತಿ ವಿರುದ್ದ ಯಾವುದೇ ಸಾಕ್ಷಿ ಕೊಡಲು ಪೊಲೀಸ್ ಇಲಾಖೆಗೂ ಸಾಧ್ಯವಾಗಿಲ್ಲ. ಅವರನ್ನು ಈ ಪ್ರಕರಣದಲ್ಲಿ ಫಿಕ್ಸ್ ಮಾಡಲಾಗಿದೆ. ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಕೊಟ್ಟಿಲ್ಲ ಅಷ್ಟೇ, ಆದರೆ ಅಪರಾಧಿ ಎಂದು ಹೇಳಿಲ್ಲ ಎಂದರು.
ಬಿಜೆಪಿ ಹಾಗೂ ಬಿಜೆಪಿ ಶಾಸಕರ ಬಗ್ಗೆ ಯತ್ನಾಳ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ನಮ್ಮ ಶಾಸಕರು ಅಲ್ಲ, ಅವರು ಬಿಜೆಪಿ ಉಚ್ಛಾಟಿತ ಶಾಸಕ. ಹಾಗಾಗಿ ಅವರ ಏನೇ ಆರೋಪಗಳಿದ್ದರೂ ಆ ಬಗ್ಗೆ ಮಾತನಾಡಲು ಆಗಲ್ಲ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ಗುಲ್ಲು ಮತ್ತು ಕುರ್ಚಿ ಕಾಳಗ ವಿಚಾರದ ಬಗ್ಗೆ ಟೀಕಿಸಿದ ಸಿಟಿ ರವಿ, ಈ ಸರ್ಕಾರಕ್ಕೆ 136 ಸೀಟನ್ನು ರಾಜ್ಯದ ಜನ ಕೊಟ್ಟಿದ್ದಾರೆ. ಯಾರು ಮುಖ್ಯಮಂತ್ರಿ ಅನ್ನೋದು ಜನರ ಸಮಸ್ಯೆ ಅಲ್ಲ. ಅಭಿವೃದ್ಧಿ, ಭ್ರಷ್ಟಾಚಾರ ಕಡಿವಾಣದ ಬಗ್ಗೆ ಜನರು ಕೇಳ್ತಾ ಇದಾರೆ. ಬಜೆಟ್ ಗೂ ಮೊದಲು ಕುರ್ಚಿಯ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಇಂತಹ ಬೆಳವಣಿಗೆಯಿಂದಾಗಿ ಆಡಳಿತದ ಬಿಗಿ ತಪ್ಪಿದೆ, ಭ್ರಷ್ಟಾಚಾರದಲ್ಲಿ ಸ್ಪರ್ಧೆ ಉಂಟಾಗಿದೆ. ಹೈಕಮಾಂಡ್ ಎರಡೂ ಕಡೆ ಗೊಂಬೆಯಾಟ ಆಡಿ ಮ್ಯಾನೇಜ್ ಮಾಡ್ತಾ ಇದೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಂದಲೂ ಕಪ್ಪ ಸಂಗ್ರಹ ಮಾಡ್ತಾ ಇದಾರೆ ಎಂದು ವಾಗ್ದಾಳಿ ನಡೆಸಿದರು.
Senior BJP leader and MLC C.T. Ravi on Friday launched a sharp attack on the state Congress government, questioning the rationale behind its “thousand-day celebration” event.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
09-07-26 11:09 pm
HK News Desk
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
09-07-26 09:11 pm
HK News Staffer
ಹೆಂಗಸರ ವಿಷ್ಯ ಬೇಡವೋ ಶಿಷ್ಯಾ..! ಚಾಡಿ ಹೇಳಿ ಸಾವಿಗೆ...
09-07-26 07:52 pm
ಬೆಳಗಾವಿ ಸಂತೆಯಲ್ಲಿ ಎತ್ತು ಖರೀದಿಸಿ ಕೇರಳಕ್ಕೆ ಸಾಗಿ...
09-07-26 07:49 pm
ಬೆಂಗಳೂರಿನ ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗ ನೆಪ ಹೇಳಿ...
09-07-26 05:34 pm
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am