ಬ್ರೇಕಿಂಗ್ ನ್ಯೂಸ್
31-01-26 08:40 pm Mangalore Correspondent ಕರಾವಳಿ
ಮಂಗಳೂರು, ಜ.31 : ಐಟಿ ದಾಳಿ ಸಂದರ್ಭ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ್ರು ಗೊತ್ತಿಲ್ಲ. ಐಟಿ ಇಲಾಖೆ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಐಟಿ ಖಂಡಿತವಾಗಿಯೂ ರಾಜಕೀಯ ಕಾರಣಕ್ಕೆ ಬಳಕೆಯಾಗುತ್ತಿದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಅದನ್ನ ಹೇಳಲು ಆಗುತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಯಾಕಂದ್ರೆ ಸಿಜೆ ರಾಯ್ ಒಬ್ಬ ಖಾಸಗಿ ವ್ಯಕ್ತಿ. ಐಟಿಯವರು ಈ ರೀತಿ ಅನೇಕ ಜನರ ಮೇಲೆ ರೇಡ್ ಮಾಡುತ್ತಾರೆ. ಐಟಿಯವರೇ ನೇರವಾಗಿ ಈ ಘಟನೆಗೆ ಕಾರಣ ಎಂದು ಹೇಳಲು ಆಗಲ್ಲ. ಮುಂದೆ ತನಿಖೆಯಲ್ಲಿ ಹಲವು ವಿಚಾರ ಹೊರಬಂದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.
ಗುತ್ತಿಗೆದಾರರ ಸಂಘದಿಂದ ಸರಕಾರದ ವಿರುದ್ಧ ಕಮಿಷನ್ ಆರೋಪದ ಪ್ರಶ್ನೆಗೆ, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಅವರೇ ಹೇಳಿದ್ದಾರೆ. ಗುತ್ತಿಗೆದಾರರ ಸಂಘಟನೆ ಅದರ ಅಧ್ಯಕ್ಷರ ಉದ್ದೇಶ ಏನೆಂದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಸಾಕಷ್ಟು ಕಾಮಗಾರಿ ಆಗುತ್ತಿದೆ, ಬಿಲ್ ಬಾಕಿ ಇಡೋದು ಎಲ್ಲ ಸರಕಾರಗಳಲ್ಲೂ ಆಗಿದೆ. ಸರಕಾರದ ಜೊತೆ ಚರ್ಚೆ ಮಾಡಿ ಇತ್ಯರ್ಥ ಮಾಡಿಕೊಳ್ಳಲಿ. ಸಾರ್ವಜನಿಕವಾಗಿ ಕಮಿಷನ್ ಅನ್ನೋ ಆರೋಪ ಸರಿಯಲ್ಲ. ಸರಕಾರದ ವಿರುದ್ದ ವಿನಾಕಾರಣ ಆರೋಪ ಮಾಡೋದು ಸರಿಯಲ್ಲ.
ಗುತ್ತಿಗೆದಾರರ ಸಂಘದವರು ಸ್ಪಷ್ಟವಾದ ಆಧಾರವಿದ್ದರೆ ಆರೋಪ ಮಾಡಲಿ. ಏನಾದ್ರೂ ಸಾಕ್ಷಾಧಾರಗಳಿದ್ದರೆ ಅದನ್ನ ಹೇಳಬೇಕು. ಬಾಕಿಯಾಗಿರುವ ಬಿಲ್ ಬಗ್ಗೆ ಸಮಸ್ಯೆ ಇದೆ. ಕೇಂದ್ರ ಸರಕಾರ ನಮಗೆ ಸಾವಿರಾರು ಕೋಟಿ ಕೊಡಲು ಬಾಕಿ ಇದೆ. ಅದನ್ನ ನಾವು ಹೇಳುತ್ತೀವಿ, ಅದಕ್ಕು ಇದಕ್ಕೂ ಸಂಬಂಧವಿದೆ. ವಿನಾಕಾರಣ ಭ್ರಷ್ಟಾಚಾರಕ್ಕೆ ಲಿಂಕ್ ಮಾಡುತ್ತಿದ್ದಾರೆ. ಇವರ ಉದ್ದೇಶ ಏನೋ ಬೇರೆ ಇದೆ, ಅದು ಸರಿಯಲ್ಲ ಎಂದರು.
ಮಕ್ಕಳಿಗೆ ಜಾಲತಾಣ ನಿಯಂತ್ರಣ
ರಾಜ್ಯದಲ್ಲಿ ಮಕ್ಕಳಿಗೆ ಜಾಲತಾಣ ಮೇಲೆ ಕಡಿವಾಣ ವಿಧಿಸುವ ಕುರಿತು ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಯುವ ಪೀಳಿಗೆಯಲ್ಲಿ ಮಾನಸಿಕ ಖಿನ್ನತೆ, ಒತ್ತಡ ಹೆಚ್ಚಾಗಿ ಕಂಡುಬರುತ್ತಿದೆ. ಆಸ್ಟ್ರೇಲಿಯಾದಲ್ಲಿ ಶಾಲಾ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿದ್ದಾರೆ. ಡಿಜಿಟಲ್ ವ್ಯಸನದಿಂದ ಮಾನಸಿಕ ದೈಹಿಕ ಬೆಳವಣಿಗೆಯ ಸಮಸ್ಯೆಯಾಗುತ್ತಿದೆ. ಕೇಂದ್ರ ಸರಕಾರದವರು ಇದರ ಕುರಿತು ಹೆಚ್ಚು ಗಮನ ವಹಿಸಬೇಕು. ನಾನು ಕೇಂದ್ರ ಸರಕಾರದ ಗಮನ ಸೆಳೆಯಲು ಪ್ರಯತ್ನ ಮಾಡುತ್ತೇನೆ. ರಾಷ್ಟೀಯ ಮಟ್ಟದಲ್ಲಿ ಇದರ ಬಗ್ಗೆ ಚರ್ಚೆಯಾಗಬೇಕು.
ಫೋನ್ ಗಳ ಮುಖಾಂತರ ಸಮಸ್ಯೆ ಹೆಚ್ಚು ಆಗುತ್ತಿದೆ. ನಾವೇ ಮಕ್ಕಳಿಗೆ ಫೋನ್ ಕೊಟ್ಟಿದ್ದೇವೆ, ಕೋವಿಡ್ ಬಳಿಕ ಈ ಸಮಸ್ಯೆ ಹೆಚ್ಚು ಉಲ್ಬಣವಾಗಿದೆ. ಡಿಜಿಟಲ್ ಲರ್ನಿಂಗ್ ಅನ್ನೋದನ್ನ ಶುರು ಮಾಡಿದ್ವಿ. ಅದರಿಂದ ಮಕ್ಕಳು ಫೋನ್ ಗಳಿಗೆ ಅಡಿಕ್ಟ್ ಆಗಿದ್ದಾರೆ. ಈ ಬಗ್ಗೆ ನಮ್ಮ ಇಲಾಖೆಯಲ್ಲಿ ಬಹಳಷ್ಟು ಗಂಭೀರ ಚರ್ಚೆ ನಡೆಸಿದ್ದೇವೆ. ಇದು ಆಧುನಿಕ ಜಗತ್ತಿನ ಸಮಸ್ಯೆಯಾಗಿದೆ. ಮಕ್ಕಳಿಗೆ ಜಾಲತಾಣಗಳ ನಿಯಂತ್ರಣ ಮಾಡಲು ಒಂದು ರಾಜ್ಯದಿಂದ ಆಗಲ್ಲ. ದೇಶಾದ್ಯಂತ ಮಾಡಬೇಕಾಗುತ್ತೆ. ನಾನು ಕೇಂದ್ರ ಸಚಿವ ಜೆಪಿ ನಡ್ಡಾ ಅವರಿಗೆ ಪತ್ರ ಬರೆಯುತ್ತೇನೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
Karnataka Health Minister Dinesh Gundu Rao has stated that while the Income Tax (IT) department is duty-bound to carry out its responsibilities, it is a fact that central agencies are often used for political reasons. His remarks came in response to the suicide of businessman C.J. Roy during an ongoing IT raid.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
31-01-26 09:38 pm
HK News Desk
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm