Grace Ministry Christmas 2025: ಗ್ರೇಸ್ ಮಿನಿಸ್ಟ್ರಿ ವತಿಯಿಂದ ಬೆಂಗಳೂರು, ಮಂಗಳೂರಿನಲ್ಲಿ ಅದ್ದೂರಿ ಕ್ರಿಸ್ಮಸ್ ಹಬ್ಬ ; ಬಡ ಕುಟುಂಬಗಳ ಮಕ್ಕಳ ಶಿಕ್ಷಣ, ಮನೆಗಳಿಗಾಗಿ 15 ಲಕ್ಷ ರೂ. ದಾನ 

26-12-25 06:37 pm       Mangalore Correspondent   ಕರಾವಳಿ

ಗ್ರೇಸ್ ಮಿನಿಸ್ಟ್ರಿ ಸೇವಾ ಸಂಸ್ಥೆಯ ವತಿಯಿಂದ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಅದ್ದೂರಿ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಕ್ರಿಸ್ಮಸ್ ಕ್ಯಾರಲ್ಸ್, ಡ್ಯಾನ್ಸ್ ಹಾಗೂ ಮನೋರಂಜನೆ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿದವು. 

ಮಂಗಳೂರು, ಡಿ.27 :  ಗ್ರೇಸ್ ಮಿನಿಸ್ಟ್ರಿ ಸೇವಾ ಸಂಸ್ಥೆಯ ವತಿಯಿಂದ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಅದ್ದೂರಿ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಕ್ರಿಸ್ಮಸ್ ಕ್ಯಾರಲ್ಸ್, ಡ್ಯಾನ್ಸ್ ಹಾಗೂ ಮನೋರಂಜನೆ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿದವು. 

ಕ್ರಿಸ್ಮಸ್ ಪ್ರಾರ್ಥನೆಯ ನಂತರ ಸಂದೇಶವನ್ನು ಸಾರಿದ ಡಾ. ಆಂಡ್ರ್ಯೂ ರಿಚರ್ಡ್ 'ಯೇಸು ಕ್ರಿಸ್ತ ಈ ಲೋಕಕ್ಕೆ ಶಾಂತಿದೂತರಾಗಿ ಬಂದಿದ್ದರು. ಯೇಸುವಿನ ಜನನದ ಸಂದರ್ಭವೇ ಕ್ರಿಸ್‌ಮಸ್ ವಿಶೇಷ. ದೇವಪುತ್ರನ ಜನನದ ಸಂದರ್ಭದಲ್ಲಿ ಅಶರೀರ ವಾಣಿಯೊಂದು ಕೇಳಿದ್ದರ ಬಗ್ಗೆ ಬೈಬಲ್‌ನಲ್ಲಿ  ಉಲ್ಲೇಖವಿದೆ. ಸ್ವರ್ಗದಲ್ಲಿ ದೇವರಿಗೆ ಮಹಿಮೆಯಾಗಲಿ, ಭೂಲೋಕದಲ್ಲಿ ಸುಮನಸ್ಸು ಉಳ್ಳವರಿಗೆ ಶಾಂತಿ ಸಿಗಲಿ ಎಂಬುದು ಆ ದೇವವಾಣಿ. ಹೀಗಾಗಿ ಶಾಂತಿ ಮತ್ತು ಪ್ರೀತಿಯೇ ಜಗತ್ತಿಗೆ ಯೇಸು ಜನನದಿಂದ ಸಿಕ್ಕಿದ ಕೊಡುಗೆ' ಎಂದರು. 

ಬಡ ಮಕ್ಕಳ ಶಿಕ್ಷಣ, ಮನೆ ನಿರ್ಮಾಣ, ಬಡ ಕುಟುಂಬಗಳಿಗೆ ಹಣದ ಸಹಾಯ, ಆಟೋ ಖರೀದಿ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಕ್ರಮಗಳಿಗೆ 15 ಲಕ್ಷ ರೂ. ದಾನವನ್ನು ಈ ವರ್ಷ ಸಂಸ್ಥೆ ನೀಡಿದೆ ಎಂದು ತಿಳಿಸಿದರು. 

ಇನ್ನು ಕ್ರಿಸ್ಮಸ್ ಪ್ರಯುಕ್ತ ಭಕ್ತಾದಿಗಳಿಗೆ ಬಟ್ಟೆ ಹಾಗೂ ರೇಷನ್ ಕಿಟ್ ವಿತರಣೆ ಮಾಡಲಾಯಿತು. ಚರ್ಚ್‌ ಹಾಗೂ ಹೊರಭಾಗದಲ್ಲಿ ನಿರ್ಮಿಸಿದ್ದ ಗೋದಲಿ, ಕ್ರಿಸ್‌ಮಸ್‌ ಟ್ರೀ ಎದುರು ಜನ ಛಾಯಾಚಿತ್ರ, ಸೆಲ್ಫಿ ತೆಗೆದುಕೊಂಡರು. ದಿನವಿಡೀ ಗೆಳೆಯರೊಂದಿಗೆ ಚರ್ಚ್‌ ಆವರಣದಲ್ಲಿ ಸುತ್ತಾಡಿ ಸಂಭ್ರಮಿಸಿದರು. ಯುವತಿಯರು ಕ್ರಿಸ್ತನ ಗುಣಗಾನ ಮಾಡುವ ಹಾಡುಗಳನ್ನು ಹಾಡಿದರು. ಚರ್ಚ್‌ ಆವರಣದಲ್ಲಿ ಜಾತ್ರೆಯ ವಾತಾವರಣ ನೆಲೆಯಾಗಿತ್ತು.

Grace Ministry organized grand Christmas celebrations in both Mangaluru and Bengaluru, drawing thousands of participants. The event featured carols, dance performances, and various entertainment programs. Founder Bro Andrew Richard delivered the Christmas message, highlighting Jesus Christ as the messenger of peace. The organization announced a donation of ₹15 lakh this year for the education of underprivileged children, construction of homes, and financial support for needy families. Clothing and ration kits were also distributed to devotees as part of the celebrations.