ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ ಬಹುಮತ, ಎಸ್ಡಿಪಿಐ ಗಾಳಿಗೆ ತೂರಿಹೋದ ಕಾಂಗ್ರೆಸ್ ! 

24-12-25 12:02 pm       Mangalore Correspondent   ಕರಾವಳಿ

ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮೂಲಕ ಬಹುಮತ ಪಡೆದಿದೆ. 

ಮಂಗಳೂರು, ಡಿ.24 : ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮೂಲಕ ಬಹುಮತ ಪಡೆದಿದೆ. 

ಬಜಪೆ ಪಟ್ಟಣ ಪಂಚಾಯತಿನ ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ -4, ಎಸ್ ಡಿ ಪಿ ಐ -3, ಪಕ್ಷೇತರರು 1 ಸ್ಥಾನಗಳನ್ನು ಪಡೆದಿದ್ದಾರೆ. ಬುಧವಾರ ಮಂಗಳೂರು ಮಿನಿ ವಿಧಾನಸೌಧದಲ್ಲಿ ಮತಗಳ ಎಣಿಕೆ ನಡಯಿತು.

ಚುನಾವಣೆ ವಿಜೇತರ ವಿವರ 

ವಾರ್ಡ್ 1ರಲ್ಲಿ ಯಶೋಧ (ಬಿಜೆಪಿ), ವಾರ್ಡ್ 2ರಲ್ಲಿ ಪದ್ಮನಾಭ ಪೂಜಾರಿ (ಬಿಜೆಪಿ), ವಾರ್ಡ್ 3- ಜಾಕೋಬ್ ಪಿರೇರಾ (ಕಾಂಗ್ರೆಸ್ ), ವಾರ್ಡ್ 4 - ಸಿರಾಜ್ ಬಜಪೆ (ಪಕ್ಷೇತರ ), ವಾರ್ಡ್ 5- ಗುಲ್ಸನ್ ಕರೀಂ (ಎಸ್ ಡಿಪಿಐ ), ವಾರ್ಡ್ 6 - ವೀಣಾ ಡಿಸೋಜಾ (ಎಸ್ಡಿಪಿಐ ), ವಾರ್ಡ್ 7- ಆಯಿಷಾ ಬಜಪೆ (ಎಸ್ಡಿಪಿಐ ), ವಾರ್ಡ್ 8-  ಲೋಕೇಶ್ ಪೂಜಾರಿ (ಬಿಜೆಪಿ), ವಾರ್ಡ್ 9 - ರಿತೇಶ್ ಶೆಟ್ಟಿ (ಬಿಜೆಪಿ), ವಾರ್ಡ್ 10 - ಶರ್ಮಿಳಾ ಶೆಟ್ಟಿ (ಬಿಜೆಪಿ ), ವಾರ್ಡ್ 11-  ಚಿನ್ನಪ್ಪ ಸಾಲ್ಯಾನ್ (ಕಾಂಗ್ರೆಸ್ ), ವಾರ್ಡ್ 12 - ಕಿರಣ್ (ಕಾಂಗ್ರೆಸ್), ವಾರ್ಡ್ 13 - ಸುಪ್ರೀತಾ ಶೆಟ್ಟಿ (ಬಿಜೆಪಿ), ವಾರ್ಡ್ 14- ಹಾಜಿರಾ ಫರ್ಜಾನಾ (ಕಾಂಗ್ರೆಸ್ ), ವಾರ್ಡ್ 15 - ದಿನೇಶ್ ಶೆಟ್ಟಿ ಕೆಂಜಾರು (ಬಿಜೆಪಿ ), ವಾರ್ಡ್ 16 - ರಾಜೇಶ್ ಅಮೀನ್ ಆರ್ ಕೆ (ಬಿಜೆಪಿ ), ವಾರ್ಡ್ 17 - ಮಲ್ಲಿಕಾ ಚಂದ್ರಶೇಖರ್ (ಬಿಜೆಪಿ), ವಾರ್ಡ್ 18- ರಕ್ಷಿತಾ ಶರತ್ (ಬಿಜೆಪಿ), ವಾರ್ಡ್ 19- ಜಯಂತ್ ಪೂಜಾರಿ (ಬಿಜೆಪಿ ) ಜಯ ಸಾಧಿಸಿದ್ದಾರೆ. 

ಡಿ.21ರಂದು ಬಜಪೆ ಪಟ್ಟಣ ಪಂಚಾಯತಿಗೆ ಚುನಾವಣೆ ನಡೆದಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇತ್ತು. ಎಸ್ಡಿಪಿಐ ಅಭ್ಯರ್ಥಿ ಹಾಕಿದ್ದರಿಂದ ಕಾಂಗ್ರೆಸ್ ಓಟ್ ಕಸಿದಿದ್ದು ಬಿಜೆಪಿಗೆ ಪರೋಕ್ಷ ಲಾಭವಾಗಿದೆ.

The Bharatiya Janata Party (BJP) has achieved a decisive victory in the Bajpe Town Panchayat elections, securing a clear majority and outperforming both the Congress and SDPI in a closely watched contest.